Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind Vs Aus 3rd Test: ಕುಂಬ್ಳೆ, ಮುರಳೀಧರನ್ ದಾಖಲೆ ಮುರಿದ ನಾಥನ್ ಲಿಯಾನ್

Ind Vs Aus 3rd Test: Nathan Lyon Surpasses Anil Kumble And Muttiah Muralitharan

ಆಸ್ಟ್ರೇಲಿಯಾದ ನಾಥನ್ ಲಿಯಾನ್ ಭಾರತದ ವಿರುದ್ಧ ಅತ್ಯುತ್ತಮ ಬೌಲಿಂಗ್ ದಾಖಲೆಯನ್ನು ಮುಂದುವರೆಸಿದ್ದಾರೆ. ಇಂದೋರ್ ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಅವರು ಅನಿಲ್ ಕುಂಬ್ಳೆ ಮತ್ತು ಮುತ್ತಯ್ಯ ಮುರಳೀಧರನ್ ದಾಖಲೆಯನ್ನು ಮುರಿದರು.

ಬಾರ್ಡರ್ ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್‌ನ ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದರು.

ಆರಂಭಿಕ ಆಟಗಾರ ಶುಭಮನ್ ಗಿಲ್ ವಿಕೆಟ್ ಪಡೆಯುವ ಮೂಲಕ ದಾಖಲೆಯ ಬೌಲಿಂಗ್‌ಗೆ ಮುನ್ನುಡಿ ಬರೆದರು. ರೋಹಿತ್ (12), ಚೆಟೇಶ್ವರ ಪೂಜಾರ (59), ರವೀಂದ್ರ ಜಡೇಜಾ (7), ಶ್ರೀಕರ್ ಭಾರತ್ (3), ರವಿಚಂದ್ರನ್ ಅಶ್ವಿನ್ (16), ಉಮೇಶ್ ಯಾದವ್ (0) ವಿಕೆಟ್ ಪಡೆಯುವ ಮೂಲಕ ಭಾರತ 163 ರನ್‌ಗಳಿಗೆ ಆಲೌಟ್ ಆಗಲು ಕಾರಣವಾದರು.

ನಾಥನ್ ಲಿಯಾನ್ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಭಾರತದ ಸ್ಪಿನ್ನರ್ ಅನಿಲ್ ಕುಂಬ್ಳೆ ದಾಖಲೆಯನ್ನು ಹಿಂದಿಕ್ಕಿದ್ದಾರೆ.

Ind Vs Aus 3rd Test: Nathan Lyon Surpasses Anil Kumble And Muttiah Muralitharan

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಅನಿಲ್ ಕುಂಬ್ಳೆ 20 ಟೆಸ್ಟ್ ಪಂದ್ಯಗಳಲ್ಲಿ 38 ಇನ್ನಿಂಗ್ಸ್‌ಗಳಲ್ಲಿ 111 ವಿಕೆಟ್ ಪಡೆದಿದ್ದಾರೆ. ನಾಥನ್ ಲಿಯಾನ್ 25 ಟೆಸ್ಟ್‌ಗಳಲ್ಲಿ 113 ವಿಕೆಟ್ ಪಡೆಯುವ ಮೂಲಕ ಅನಿಲ್ ಕುಂಬ್ಳೆ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಭಾರತದ ಸ್ಟಾರ್ ಸ್ಪಿನ್ನರ್ 21 ಟೆಸ್ಟ್ ಪಂದ್ಯಗಳಲ್ಲಿ 106 ವಿಕೆಟ್ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ಲಿಯಾನ್ ಇಂದೋರ್ ಟೆಸ್ಟ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ಪಡೆಯುವ ಮೂಲಕ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿದರು.

Ind Vs Aus 3rd Test: Nathan Lyon Surpasses Anil Kumble And Muttiah Muralitharan

ಮುತ್ತಯ್ಯ ಮುರಳೀಧರನ್ ದಾಖಲೆ ಮುರಿದ ಲಿಯಾನ್

ಅನಿಲ್ ಕುಂಬ್ಳೆ ದಾಖಲೆಯನ್ನು ಮಾತ್ರವಲ್ಲದೆ ಶ್ರೀಲಂಕಾದ ಲೆಜೆಂಡರಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ದಾಖಲೆಯನ್ನು ಮುರಿದರು. ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ ಬೌಲರ್ ಎನಿಸಿಕೊಂಡಿದ್ದಾರೆ.

ಮುತ್ತಯ್ಯ ಮುರಳೀಧರನ್ 32 ಇನ್ನಿಂಗ್ಸ್‌ಗಳಲ್ಲಿ ಭಾರತದ ವಿರುದ್ಧ 105 ವಿಕೆಟ್ ಪಡೆದಿದ್ದಾರೆ. ನಾಥನ್ ಲಿಯಾನ್ 46 ಇನ್ನಿಂಗ್ಸ್‌ಗಳಲ್ಲಿ 113 ವಿಕೆಟ್ ಪಡೆಯುವ ಮೂಲಕ ಮುರಳೀಧರನ್ ದಾಖಲೆಯನ್ನು ಮುರಿದರು.

ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್‌ ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದಿರುವ ದಾಖಲೆಯನ್ನು ಹೊಂದಿದ್ದಾರೆ. 66 ಇನ್ನಿಂಗ್ಸ್‌ಗಳಲ್ಲಿ 139 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.

Story first published: Thursday, March 2, 2023, 23:45 [IST]
Other articles published on Mar 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+