IND vs AUS 4th Test: ಸರಣಿ ನಿರ್ಣಾಯಕ ಪಂದ್ಯಕ್ಕೆ ಭಾರತ-ಆಸ್ಟ್ರೇಲಿಯಾ ಪ್ರಧಾನಿಗಳ ಉಪಸ್ಥಿತಿ; ಸ್ವಾಗತಕ್ಕೆ ಸಜ್ಜು

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಪಂದ್ಯ ಗುರುವಾರ, ಮಾರ್ಚ್ 9ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಸರಣಿ ನಿರ್ಣಾಯಕ ಪಂದ್ಯದ ಮೊದಲ ದಿನದಂದು ವಿಶೇಷ ವೀಕ್ಷಕರಾಗಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಆಗಮಿಸಲಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯಕ್ಕೆ ಆತಿಥ್ಯ ವಹಿಸಲು ಅಹಮದಾಬಾದ್ ಕ್ರೀಡಾಂಗಣ ಸಿದ್ಧವಾಗಿದೆ. ಮಾರ್ಚ್ 9ರಂದು ಟಾಸ್‌ನಲ್ಲಿ ಕಾಣಿಸಿಕೊಂಡ ನಂತರ, ಉಭಯ ತಂಡಗಳ ಆಟಗಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಎರಡೂ ದೇಶಗಳ ಪ್ರಧಾನಿಗಳು ಕೆಲವು ಗಂಟೆಗಳ ಆಟವನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಹೀಗಾಗಿ, ವಿಶೇಷ ದಿನದ ಅಂಗವಾಗಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ ಮತ್ತು ಕ್ರೀಡಾಂಗಣದ ಸಂಕೀರ್ಣವು ಇಬ್ಬರು ನಾಯಕರ ಬೃಹತ್ ಹೋರ್ಡಿಂಗ್‌ಗಳಿಂದ ತುಂಬಿದೆ, "ಕ್ರಿಕೆಟ್ ಮೂಲಕ 75 ವರ್ಷಗಳ ಸ್ನೇಹ' ಎಂಬ ಶೀರ್ಷಿಕೆ ನೀಡಲಾಗಿದೆ.
ಬೃಹತ್ ಹೋರ್ಡಿಂಗ್‌ಗಳಲ್ಲಿ ಭಾರತ ಮತ್ತಯ ಆಸ್ಟ್ರೇಲಿಯಾ ದೇಶಗಳ ಮಾಜಿ ಮತ್ತು ಪ್ರಸ್ತುತ ದಿಗ್ಗಜ ಆಟಗಾರರಿದ್ದಾರೆ. ಸಾಂಪ್ರದಾಯಿಕ ದೃಶ್ಯ ಪರದೆ, ಕಾರಿಡಾರ್‌ಗಳು, ಅಭ್ಯಾಸದ ಸ್ಥಳ ಮತ್ತು ಕ್ರೀಡಾಂಗಣ ಇತರ ಸ್ಥಳಗಳಲ್ಲಿ ಹೋರ್ಡಿಂಗ್‌ಗಳನ್ನು ಕಾಣಬಹುದು. ಆದರೆ, ಗುರುವಾರ ಪಂದ್ಯ ಆರಂಭವಾಗುವ ಮುನ್ನ ಈ ಹೋರ್ಡಿಂಗ್‌ಗಳನ್ನು ತೆರವುಗೊಳಿಸುವ ಸಾಧ್ಯತೆ ಹೆಚ್ಚಿದೆ.

ವರದಿಗಳ ಪ್ರಕಾರ, ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಸೆಷನ್‌ನಲ್ಲಿ ಉಭಯ ಪ್ರಧಾನಿಗಳನ್ನು ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಬಹುದು. ಆದರೆ, ಇದುವರೆಗೆ ಯಾವುದೇ ಅಧಿಕಾರಿಗಳು ಅಂತಹ ಯೋಜನೆಗಳನ್ನು ಬಹಿರಂಗಪಡಿಸಿಲ್ಲ.
ಒಂದೆಡೆ ಎರಡೂ ತಂಡಗಳು ಆಟಗಾರರು ಹೈ-ವೋಲ್ಟೇಜ್ ಮತ್ತು ಸರಣಿ ನಿರ್ಣಾಯಕ ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿದ್ದರೆ, ಮತ್ತೊಂದೆಡೆ ಕಾರ್ಮಿಕರು ಹಾಗೂ ಇತರೆ ಅಧಿಕಾರಿಗಳು ಮೈದಾನದ ಸುತ್ತ ಸುಳಿದಾಡುತ್ತಿದ್ದುದು ಕಂಡುಬಂದಿದೆ.
ಭಾರತೀಯ ಕ್ರಿಕೆಟ್ ತಂಡವು ತಮ್ಮ ಅಭ್ಯಾಸದ ಅವಧಿಗೆ ಆಗಮಿಸಿದಾಗ, ಎರಡೂ ದೇಶಗಳ ಉನ್ನತ ನಾಯಕರ ಭದ್ರತೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ತೀವ್ರ ಮೇಲ್ವಿಚಾರಣೆ ಮಾಡುತ್ತಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications