Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind Vs Aus 4th Test: ಶಮಿ ಬೌಲಿಂಗ್‌ನಲ್ಲಿ ಹ್ಯಾಂಡ್ಸ್‌ಕಾಂಬ್‌ ಕ್ಲೀನ್‌ ಬೌಲ್ಡ್‌: ಉರುಳಿಹೋದ ವಿಕೆಟ್

Ind Vs Aus 4th Test: Mohammed Shami Cleaned Up Peter Handscomb During The 4th Test

ಭಾರತ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲನೇ ದಿನ ಆಸ್ಟ್ರೇಲಿಯಾ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ಸುಸ್ಥಿತಿಯಲ್ಲಿದೆ. ಮೊದಲೇ ನಿರೀಕ್ಷೆ ಮಾಡಿದಂತೆ ಪಿಚ್‌ ಬ್ಯಾಟಿಂಗ್‌ಗೆ ಉತ್ತಮವಾಗಿದ್ದು, ಆಸ್ಟ್ರೇಲಿಯಾ ಎಚ್ಚರಿಕೆಯಿಂದ ರನ್ ಗಳಿಸುತ್ತಿದೆ. ಮೊದಲ ಮೂರು ಪಂದ್ಯಗಳಲ್ಲಿ ಸ್ಪಿನ್‌ಗೆ ಹೆಚ್ಚಿನ ನೆರವು ಸಿಕ್ಕಿದ್ದರೆ, ಅಹಮದಾಬಾದ್‌ನಲ್ಲಿ ವೇಗದ ಬೌಲರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೊಹಮ್ಮದ್ ಶಮಿ ಮೊದಲ ದಿನ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಪೀಟರ್ ಹ್ಯಾಂಡ್ಸ್‌ಕಾಂಬ್ ವಿಕೆಟ್ ಪಡೆದು ಆಸ್ಟ್ರೇಲಿಯಾದ ರನ್ ಗಳಿಕೆಗೆ ಕಡಿವಾಣ ಹಾಕಿದರು. ಮಾರ್ನಸ್ ಲ್ಯಾಬುಸ್ಚಾಗ್ನೆ ಶಮಿ ಬೌಲಿಂಗ್‌ನಲ್ಲಿ ಬ್ಯಾಟ್‌ಗೆ ಬಿದ್ದ ಚೆಂಡು ವಿಕೆಟ್‌ಗೆ ಬಡಿಯುವ ಮೂಲಕ ಔಟಾದರು. ಆದರೆ, ಪೀಟರ್ ಹ್ಯಾಂಡ್ಸ್‌ಕಾಂಬ್‌ ಔಟಾಗಿದ್ದು ಮಾತ್ರ ಪ್ರತಿಯೊಬ್ಬರಿಗೂ ನೋಡಲು ಅತ್ಯುತ್ತಮವಾಗಿತ್ತು.

ಮೊಹಮ್ಮದ್ ಶಮಿ ಹ್ಯಾಂಡ್ಸ್‌ಕಾಂಬ್‌ರನ್ನು ಬೌಲ್ಡ್ ಮಾಡಿದ ರೀತಿಗೆ ಕ್ರಿಕೆಟ್ ಅಭಿಮಾನಿಗಳು ಮಾರುಹೋಗಿದ್ದಾರೆ. ಶಮಿ ವಿಕೆಟ್ ಪಡೆಯುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಮಿ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹಾರಿಹೋದ ವಿಕೆಟ್

71ನೇ ಓವರ್ ನಲ್ಲಿ ದಾಳಿಗೆ ಬಂದ ಮೊಹಮ್ಮದ್ ಶಮಿ ಪೀಟರ್ ಹ್ಯಾಂಡ್ಸ್‌ಕಾಂಬ್ ಮತ್ತು ಉಸ್ಮಾನ್ ಖವಾಜಾರ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾದರು. 71ನೇ ಓವರ್ ನ 4ನೇ ಎಸೆತದಲ್ಲಿ ಹ್ಯಾಂಡ್ಸ್‌ಕಾಂಬ್‌ರನ್ನು ಬೀಟ್ ಮಾಡಿದ ಚೆಂಡು ಸೀದಾ ವಿಕೆಟ್‌ಗೆ ಬಡಿಯಿತು.

ಭಾರಿ ವೇಗದಲ್ಲಿ ಚೆಂಡು ಬಂದು ಬಡಿಯುತ್ತಿದ್ದಂತೆ ಮೇಲೆ ಹಾರಿದ ವಿಕೆಟ್ ಕೀಪರ್ ಸಮೀಪದವರೆಗೂ ಉರುಳಿಕೊಂಡು ಹೋಯಿತು. ಶಮಿಯ ಅನುಭವಿ ಬೌಲಿಂಗ್‌ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

Ind Vs Aus 4th Test: Mohammed Shami Cleaned Up Peter Handscomb During The 4th Test

ಉಸ್ಮಾನ್ ಖವಾಜಾ ಉತ್ತಮ ಬ್ಯಾಟಿಂಗ್

ಮೊದಲ ದಿನ ಆಸ್ಟ್ರೇಲಿಯಾ ಗೌರವಾನ್ವಿತ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಿತು. ಟ್ರಾವಿಸ್ ಹೆಡ್ 32 ರನ್ ಗಳಿಸಿ ರವಿಚಂದ್ರನ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು.

ಮಾರ್ನಸ್ ಲ್ಯಾಬುಸ್ಚಾಗ್ನೆ 3 ರನ್ ಗಳಿಸಿ ಔಟಾದರೆ, ನಾಯಕ ಸ್ಟೀವ್ ಸ್ಮಿತ್ 38 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಪೀಟರ್ ಹ್ಯಾಂಡ್ಸ್‌ಕಾಂಬ್ 17 ರನ್ ಗಳಿಸಿ ಶಮಿಗೆ ಕ್ಲೀನ್ ಬೌಲ್ಡ್ ಆದರು. ಉಸ್ಮಾನ್ ಖವಾಜ ಮಾತ್ರ ಎಚ್ಚರಿಕೆಯಿಂದ ಆಡಿದರು. ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ ಅವರು ಶತಕ ಗಳಿಸಿ ಮಿಂಚಿದರು.

Story first published: Thursday, March 9, 2023, 16:33 [IST]
Other articles published on Mar 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+