Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli Century: ವಿರಾಟ್ ಕೊಹ್ಲಿ ಇನ್ನೂ ಇಷ್ಟು ಶತಕ ಗಳಿಸಲಿದ್ದಾರೆ; ಹರ್ಭಜನ್ ಸಿಂಗ್ ಭವಿಷ್ಯ

IND vs AUS 4th Test: Only Virat Kohli Can Break Sachin Tendulkars Century Record Says Harbhajan Singh

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ 28ನೇ ಟೆಸ್ಟ್ ಶತಕ ಮತ್ತು ಒಟ್ಟಾರೆ 75ನೇ ಅಂತಾರಾಷ್ಟ್ರೀಯ ಶತಕವನ್ನು ಬಾರಿಸಿದರು.

ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತೀಯರೇ ಆದ ಸಚಿನ್ ತೆಂಡೂಲ್ಕರ್ ನಂತರ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರನೆಂದರೆ ಅದು ವಿರಾಟ್ ಕೊಹ್ಲಿ. ಸದ್ಯ ಕ್ರಿಕೆಟ್ ಆಡುತ್ತಿರುವ ಹಾಲಿ ಆಟಗಾರರ ಪೈಕಿ ಅತಿ ಹೆಚ್ಚು ಶತಕ ಗಳಿಸಿರುವ ಬ್ಯಾಟ್ಸ್‌ಮನ್ ಆಗಿದ್ದಾರೆ.

ಇದೇ ವೇಳೆ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಗಳಿಸಲು ಮತ್ತು ಭಾರತದ ಲೆಜೆಂಡ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿಯಲು ಬೆಂಬಲಿಸಿದ್ದು, ವಿರಾಟ್ ಕೊಹ್ಲಿ ಇನ್ನೂ ಕನಿಷ್ಠ 50 ಶತಕಗಳನ್ನು ಗಳಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ಸ್ಪೋರ್ಟ್ಸ್‌ಟಾಕ್‌ನೊಂದಿಗೆ ಮಾತನಾಡಿದ ಹರ್ಭಜನ್ ಸಿಂಗ್, ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಫಿಟ್‌ನೆಸ್ 24 ವರ್ಷ ವಯಸ್ಸಿನ ಆಟಗಾರನಂತಿದೆ. ಅವರು ಖಂಡಿತವಾಗಿಯೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100ಕ್ಕೂ ಹೆಚ್ಚು ಶತಕಗಳನ್ನು ಬಾರಿಸಬಹುದು ಎಂದು ಹೇಳಿದರು.

IND vs AUS 4th Test: Only Virat Kohli Can Break Sachin Tendulkars Century Record Says Harbhajan Singh

"ಇದು ಖಂಡಿತವಾಗಿಯೂ ಸಾಧ್ಯ. ವಿರಾಟ್ ಕೊಹ್ಲಿ 100 ಕ್ಕಿಂತ ಹೆಚ್ಚ ಶತಕ ಗಳಿಸಬಹುದು ಎಂದು ನಾನು ಭಾವಿಸುತ್ತೇನೆ. ಇಲ್ಲಿ ಎರಡು ವಿಷಯಗಳು ವಿರಾಟ್‌ಗೆ ಅನುಕೂಲಕರವಾದ ಅಂಶಗಳೆಂದರೆ, ಆತನ ವಯಸ್ಸು ಮತ್ತು ಫಿಟ್‌ನೆಸ್. ಕೊಹ್ಲಿ ವಯಸ್ಸು 34, ಆದರೆ ಅವರ ಫಿಟ್‌ನೆಸ್ ನೋಡಿದರೆ 24 ವರ್ಷದ ಕ್ರಿಕೆಟಿಗನದ್ದಾಗಿದೆ. ಆ ವಿಚಾರದಲ್ಲಿ ಅವರು ಮುಂದಿದ್ದಾರೆ," ಎಂದು ಹರ್ಭಜನ್ ಸಿಂಗ್ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಇನ್ನೂ ಕನಿಷ್ಠ 50 ಶತಕಗಳನ್ನು ಗಳಿಸಬಹುದು ಎಂದು ಹೇಳಿದ ಹರ್ಭಜನ್ ಸಿಂಗ್, ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲು ವಿರಾಟ್ ಕೊಹ್ಲಿಯಿಂದ ಮಾತ್ರ ಸಾಧ್ಯ ಎಂದರು. ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 27, ಏಕದಿನ ಕ್ರಿಕೆಟ್‌ನಲ್ಲಿ 46 ಮತ್ತು ಟಿ20 ಕ್ರಿಕೆಟ್‌ನಲ್ಲಿ ಏಕೈಕ ಶತಕ ದಾಖಲಿಸಿದ್ದಾರೆ.

"ವಿರಾಟ್ ಕೊಹ್ಲಿ ಈಗಾಗಲೇ 75 ಶತಕಗಳನ್ನು ಗಳಿಸಿದ್ದು, ಆತ ತಮ್ಮ ಆಟ ಏನೆಂದು ತಿಳಿದಿದ್ದಾರೆ. ಕೊಹ್ಲಿ ಈಗಲೂ ಎಲ್ಲಾ ಸ್ವರೂಪಗಳ ಪಂದ್ಯಗಳನ್ನು ಆಡುತ್ತಾರೆ. ನಾನು ಇದರೊಂದಿಗೆ ಅತಿಯಾಗಿ ಹೇಳುತ್ತಿದ್ದೇನೆ ಎಂದು ನೀವು ಭಾವಿಸಬಹುದು. ಆದರೆ ಇದು ಖಂಡಿತವಾಗಿಯೂ ಸಾಧ್ಯ. ಯಾರಾದರೂ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಸಾಧ್ಯವಾದರೆ, ಅದು ವಿರಾಟ್ ಕೊಹ್ಲಿಗೆ ಮಾತ್ರ. ಉಳಿದವರೆಲ್ಲರೂ ತುಂಬಾ ಹಿಂದೆ ಇದ್ದಾರೆ," ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟರು.

IND vs AUS 4th Test: Only Virat Kohli Can Break Sachin Tendulkars Century Record Says Harbhajan Singh

34 ವರ್ಷದ ವಿರಾಟ್ ಕೋಹ್ಲಿ ಬ್ಯಾಟಿಂಗ್ ಸಾಮರ್ಥ್ಯ ದೇವರ ಕೊಡುಗೆಯಾಗಿದೆ ಎಂದಿರುವ ಹರ್ಭಜನ್ ಸಿಂಗ್, ಆತನ ಆಟದಲ್ಲಿ ಯಾವುದೇ ತಾಂತ್ರಿಕ ದೋಷಗಳಿಲ್ಲ ಎಂದು 42ರ ಹರೆಯದ ಹರ್ಭಜನ್ ಸಿಂಗ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 48.12 ಸರಾಸರಿ, ಏಕದಿನದಲ್ಲಿ 57.69 ಮತ್ತು ಟಿ20 ಕ್ರಿಕೆಟ್‌ನಲ್ಲಿ 52.73 ಸರಾಸರಿ ಹೊಂದಿದ್ದಾರೆ.

2023ರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ 297 ರನ್ ಗಳಿಸಿದ್ದಾರೆ. ಪ್ರಸ್ತುತ ನಾಲ್ಕು ಪಂದ್ಯಗಳ ಈ ಸರಣಿಯಲ್ಲಿ ಎರಡನೇ ಅತಿ ಹೆಚ್ಚು ಸ್ಕೋರರ್ ಆಗಿದ್ದಾರೆ. ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ 399 ರನ್‌ಗಳಿಂದ ಮೊದಲ ಸ್ಥಾನದಲ್ಲಿದ್ದಾರೆ.

Story first published: Monday, March 13, 2023, 15:54 [IST]
Other articles published on Mar 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+