For Quick Alerts
ALLOW NOTIFICATIONS  
For Daily Alerts
 

IND vs AUS: ಟಿ20ಯಲ್ಲಿ ಭಾರತ ವಿರುದ್ಧ ಅತ್ಯಧಿಕ ಜೊತೆಯಾಟ ದಾಖಲಿಸಿದ ಮೂನಿ-ಮೆಕ್‌ಗ್ರಾತ್ ಜೋಡಿ

IND vs AUS: Beth Mooney and Tahlia McGrath Pair Record Highest Partnership Against India In T20I

ಆಸ್ಟ್ರೇಲಿಯಾ ಮಹಿಳಾ ತಂಡದ ಬ್ಯಾಟರ್‌ಗಳಾದ ತಹ್ಲಿಯಾ ಮೆಕ್‌ಗ್ರಾತ್ ಮತ್ತು ಬೆತ್ ಮೂನಿ ಅವರು ಭಾನುವಾರ, ಡಿಸೆಂಬರ್ 11ರಂದು ಮಹಿಳಾ ಟಿ20 ಪಂದ್ಯಗಳಲ್ಲಿ ಭಾರತದ ವಿರುದ್ಧ ಅತ್ಯಧಿಕ ಜೊತೆಯಾಟ ದಾಖಲಿಸಿದರು.

ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಭಾರತ ಮಹಿಳೆಯರ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಈ ಇಬ್ಬರು ಮಹಿಳಾ ಬ್ಯಾಟರ್‌ಗಳು ಮುರಿಯದ ಎರಡನೇ ವಿಕೆಟ್‌ಗೆ 158 ರನ್‌ಗಳ ಜೊತೆಯಾಟ ನೀಡಿ ವಿಶ್ವದಾಖಲೆ ಬರೆದರು.

2019ರ ಅಕ್ಟೋಬರ್‌ನಲ್ಲಿ ಸೂರತ್‌ನಲ್ಲಿ ದಕ್ಷಿಣ ಆಫ್ರಿಕಾದ ಲಿಜೆಲ್ಲೆ ಲೀ ಮತ್ತು ಸುನೆ ಲೂಸ್ ನಡುವಿನ 144 ರನ್‌ಗಳ ಜೊತೆಯಾಟದ ದಾಖಲೆಯನ್ನು ತಹ್ಲಿಯಾ ಮೆಕ್‌ಗ್ರಾತ್ ಮತ್ತು ಬೆತ್ ಮೂನಿ ಜೋಡಿ ಮುರಿಯಿತು.

ಮಾರ್ಚ್ 2020ರಲ್ಲಿ ಭಾರತದ ವಿರುದ್ಧ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾದ ಹಿಂದಿನ ಅತ್ಯಧಿಕ ರನ್‌ಗಳ ಜೊತೆಯಾಟವನ್ನು ಸಹ ಮುರಿದರು. ಆಗ ಬೆತ್ ಮೂನಿ ಮತ್ತು ಅಲಿಸ್ಸಾ ಹೀಲಿ ಅವರು ಮೆಲ್ಬೋರ್ನ್‌ನಲ್ಲಿ 115 ರನ್‌ಗಳ ಜೊತೆಯಾಟ ನೀಡಿದ್ದರು.

ಇನ್ನು ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತಲ್ಲದೆ, ಭಾರತದ ವಿರುದ್ಧ ತಮ್ಮ ಅತ್ಯಧಿಕ ಟಿ20 ಸ್ಕೋರ್ ದಾಖಲಿಸಿತು. ಇದು ಮಹಿಳಾ ಟಿ20 ಪಂದ್ಯಗಳಲ್ಲಿ ಭಾರತದ ವಿರುದ್ಧ ಎರಡನೇ ಅತಿ ಹೆಚ್ಚು ಟಿ20 ಸ್ಕೋರ್ ಆಗಿದೆ. ಮಾರ್ಚ್ 2018ರಲ್ಲಿ ಇಂಗ್ಲೆಂಡ್ ಮಹಿಳಾ ತಂಡ 3 ವಿಕೆಟ್‌ಗೆ 199 ರನ್ ಗಳಿಸಿದ್ದು, ಅತ್ಯಧಿಕ ಮೊತ್ತವಾಗಿ ಉಳಿದಿದೆ.

ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬೆತ್ ಮೂನಿ 54 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ ಅಜೇಯ 82 ರನ್ ಬಾರಿಸಿದರು. ಮತ್ತೊಂದೆಡೆ ತಹ್ಲಿಯಾ ಮೆಕ್‌ಗ್ರಾತ್ 51 ಎಸೆತಗಳಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 70 ರನ್ ಗಳಿಸಿದರು.

ಬ್ಯಾಟಿಂಗ್ ಮಾಡಲು ಉತ್ತಮವಾದ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ತಾನು ದೊಡ್ಡ ಸ್ಕೋರ್ ಬಾರಿಸುವುದನ್ನು ಮಿಸ್ ಮಾಡಿಕೊಂಡೆ ಎಂದು ಆಸೀಸದ ನಾಯಕಿ ಅಲಿಸ್ಸಾ ಹೀಲಿ ಹೇಳಿದರು. ಅವರು 15 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ 25 ರನ್ ಗಳಿಸಿದರು ನಂತರ, ದೀಪ್ತಿ ಶರ್ಮಾ ಅವರ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಅಲಿಸ್ಸಾ ಹೀಲಿ ಅವರ ವಿಕೆಟ್ ಭಾರತಕ್ಕೆ ದಕ್ಕಿದ ಏಕೈಕ ವಿಕೆಟ್ ಆಗಿತ್ತು. ನಂತರ ಮೂನಿ ಮತ್ತು ಮೆಕ್‌ಗ್ರಾತ್ ಆಸ್ಟ್ರೇಲಿಯಾ ತಂಡ ಬೃಹತ್ ರನ್ ಗಳಿಸಲು ನೆರವಾದರು.

IND vs AUS: Beth Mooney and Tahlia McGrath Pair Record Highest Partnership Against India In T20I

ಸೂಪರ್ ಓವರ್‌ನಲ್ಲಿ ಭಾರತಕ್ಕೆ ಭರ್ಜರಿ ಜಯ
ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸಿತು.

ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣವು ರೋಚಕ ಸೂಪರ್ ಓವರ್‌ಗೆ ಸಾಕ್ಷಿಯಾಯಿತು ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಭಾರತ ಮಹಿಳಾ ತಂಡ ರೋಚಕ 5 ರನ್‌ಗಳ ಅಂತರದಿಂದ ಗೆದ್ದು ಬೀಗಿತು. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಲು ಸಾಧ್ಯವಾಯಿತು.

ಕೊನೆಯಲ್ಲಿ ಗೆಲುವಿಗೆ ಒಂದು ಎಸೆತದಲ್ಲಿ 5 ರನ್ ಬೇಕಿದ್ದಾಗ ದೇವಿಕಾ ವೈದ್ಯ ಬಾರಿಸಿದ ಬೌಂಡರಿಯ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿ ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಆಗ ಸೂಪರ್‌ ಓವರ್‌ನಲ್ಲಿ ಭಾರತದ ಪರ ರಿಚಾ ಘೋಷ್ ಮತ್ತು ಸ್ಮೃತಿ ಮಂಧಾನ ಬ್ಯಾಟಿಂಗ್ ಆರಂಭಿಸಿದರು. ಮೊದಲ ಎಸೆತವನ್ನು ಸಿಕ್ಸರ್‌ಗಟ್ಟಿದ ರಿಚಾ ಘೋಷ್ ಎರಡನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ಇದಾದ ಬಳಿಕ ಸ್ಮೃತಿ ಮಂಧಾನ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದರು. ಅಂತಿಮವಾಗಿ ಭಾರತ ಒಂದು ಓವರ್‌ನಲ್ಲಿ 20 ರನ್ ಕಲೆಹಾಕಲು ಯಶಸ್ವಿಯಾಯಿತು.

21 ರನ್‌ಗಳ ಗುರಿ ಬೆನ್ನತ್ತಿದ ಅಲಿಸ್ಸಾ ಹೀಲಿ ಅವರು ರೇಣುಕಾ ಸಿಂಗ್ ಅವರ ಮೊದಲ ಎಸೆತವನ್ನು ಬೌಂಡರಿ ಬಾರಿಸಿದರು. ಎರಡನೇ ಎಸೆತದಲ್ಲಿ ಸಿಂಗಲ್ ರನ್ ತೆಗೆದುಕೊಂಡರು. ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದ ಆಶ್ಲೀಗ್ ಗಾರ್ಡ್ನರ್ ಅವರು ರಾಧಾ ಯಾದವ್ ಲಾಂಗ್ ಆಫ್‌ನಲ್ಲಿ ಹಿಡಿದ ಉತ್ತಮ ಕ್ಯಾಚ್‌ಗೆ ಔಟಾದರು.

ಅಲಿಸ್ಸಾ ಹೀಲಿ ಅವರು ರೇಣುಕಾ ಸಿಂಗ್ ಬೌಲಿಂಗ್‌ನ ಐದು ಮತ್ತು ಆರನೇ ಎಸೆತದಲ್ಲಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರೂ ಇನ್ನೂ ಐದು ರನ್‌ಗಳ ಅಂತರದಿಂದ ಭಾರತಕ್ಕೆ ವಿಜಯಲಕ್ಷ್ಮಿ ಒಲಿಯಿತು.

Story first published: Monday, December 12, 2022, 2:40 [IST]
Other articles published on Dec 12, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+