Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AUS 4th Test: ಭಾರತದ ನೆಲದಲ್ಲಿ ಈ ಸಾಧನೆ ಮಾಡಿದ 6ನೇ ಆಸ್ಟ್ರೇಲಿಯಾ ಕ್ರಿಕೆಟಿಗ ಕ್ಯಾಮೆರಾನ್ ಗ್ರೀನ್!

IND vs AUS: Cameron Green Becomes 6th Australia Cricketer To Score Maiden Test Century On Indian Soil

ಗುರುವಾರ, ಮಾರ್ಚ್ 9ರಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾಗಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಪಂದ್ಯ ನಡೆಯುತ್ತಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ ಬೃಹತ್ ಮೊತ್ತದತ್ತ ಮುನ್ನಡೆಯುತ್ತಿದೆ.

ಇನ್ನು 2020ರ ಕೊನೆಯಲ್ಲಿ ತನ್ನ ಅಂತಾರಾಷ್ಟ್ರೀಯ ಚೊಚ್ಚಲ ಬಾರಿಗೆ ಕ್ರಿಕೆಟ್‌ಗೆ ಪ್ರವೇಶ ಮಾಡಿದ ನಂತರ, ಯುವ ಬ್ಯಾಟರ್ ಕ್ಯಾಮೆರಾನ್ ಗ್ರೀನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಬಾರಿಸಿದರು. ಕ್ಯಾಮೆರಾನ್ ಗ್ರೀನ್ ಕ್ರಿಕೆಟ್‌ನಲ್ಲಿ ದೊಡ್ಡ ಭರವಸೆ ನೀಡಿದ್ದಾರೆ ಮತ್ತು ಟೆಸ್ಟ್ ಸ್ವರೂಪದಲ್ಲಿ ಗಮನಾರ್ಹವಾಗಿ ಪ್ರದರ್ಶನ ನೀಡಿದ್ದಾರೆ.

ಕ್ಯಾಮೆರಾನ್ ಗ್ರೀನ್ ಅನುಪಸ್ಥಿತಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವು ಸದ್ಯ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಸೋತಿತ್ತು. ಇಂದೋರ್ ಟೆಸ್ಟ್‌ ಪಂದ್ಯದಲ್ಲಿ ಗ್ರೀನ್ ಗಾಯದಿಂದ ಮರಳಿದ ನಂತರ, ಆಸ್ಟ್ರೇಲಿಯಾ ತಂಡ ಗೆಲುವಿನ ಹಳಿ ಹಿಡಿಯಿತು. ಅದು ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿಯೂ ಮುಂದುವರೆದಂತೆ ಕಾಣುತ್ತಿದೆ.

IND vs AUS: Cameron Green Becomes 6th Australia Cricketer To Score Maiden Test Century On Indian Soil

ಗಮನಾರ್ಹ ಅಂಶವೆಂದರೆ, 23 ವರ್ಷದ ಕಾಮೆರಾನ್ ಗ್ರೀನ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನು ಬಾರಿಸಿದರು. ಆರಂಭದಲ್ಲಿ ನಿಧಾನಗತಿ ಬ್ಯಾಟಿಂಗ್ ಮಾಡಿದ ಗ್ರೀನ್, ನಂತರ ಭಾರತೀಯ ಬೌಲರ್‌ಗಳ ವಿರುದ್ಧ ರನ್‌ಗಳನ್ನು ಬಾರಿಸುತ್ತಾ ಹೋದರು.

ಭಾರತ ನೆಲದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಡಿದ ಕ್ಯಾಮೆರಾನ್ ಗ್ರೀನ್, ಮೊದಲ ಪಂದ್ಯದಲ್ಲೇ ಚೊಚ್ಚಲ ಟೆಸ್ಟ್ ಶತಕ ಬಾರಿಸಿದರು. ಈ ರೀತಿಯ ಸಾಧನೆ ಮಾಡಿದ ಆರನೇ ಆಸ್ಟ್ರೇಲಿಯನ್ ಕ್ರಿಕೆಟರ್ ಆದರು. ಅಂತಿಮವಾಗಿ 170 ಎಸೆತಗಳಲ್ಲಿ 18 ಬೌಂಡರಿಗಳ ಸಮೇತ 114 ರನ್ ಗಳಿಸಿ ರವಿಚಂದ್ರನ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು.

ಇದೇ ವೇಳೆ, ಆಸ್ಟ್ರೇಲಿಯಾ ತಂಡದ ಪರ ಬ್ಯಾಟ್‌ನೊಂದಿಗೆ ಕ್ಯಾಮೆರಾನ್ ಗ್ರೀನ್ ಪ್ರಮುಖ ಪಾತ್ರ ವಹಿಸುತ್ತಿರುವುದು ಇದೇ ಮೊದಲಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಲ್‌ರೌಂಡರ್ ಬೆರಳಿನ ಮುರಿತದ ನಡುವೆಯೂ ಬ್ಯಾಟಿಂಗ್ ಮಾಡಿ ತಂಡಕ್ಕೆ ನಿರ್ಣಾಯಕ ಅರ್ಧಶತಕವನ್ನು ಗಳಿಸಿದ್ದರು.

IND vs AUS: Cameron Green Becomes 6th Australia Cricketer To Score Maiden Test Century On Indian Soil

ಕ್ಯಾಮೆರಾನ್ ಗ್ರೀನ್ ಯಾವಾಗಲೂ ಉತ್ತಮ ಆರಂಭವನ್ನು ಪಡೆದರೂ, ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾಗುತ್ತಿದ್ದರು. ಆದರೆ ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ತಮ್ಮ ಹಿಂದಿನ ಸಮಸ್ಯೆಗಳನ್ನು ಹಿಮ್ಮೆಟ್ಟಿಸಿದರು. ಪ್ರಬುದ್ಧವಾದ ಬ್ಯಾಟಿಂಗ್ ಪ್ರದರ್ಶನದ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹಾಗೂ ಭಾರತ ನೆಲದಲ್ಲಿ ಮೊದಲ ಶತಕ ದಾಖಲಿಸಿದರು.

ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಪ್ರಸ್ತುತ 2-1 ಅಂತರದಲ್ಲಿ ಹಿನ್ನಡೆಯಲ್ಲಿದೆ. ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಈವರೆಗಿನ ಆಟದಲ್ಲಿ 146 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 409 ರನ್ ಗಳಿಸಿದೆ.

ಟೀ ವಿರಾಮದ ವೇಳೆಗೆ 180 ರನ್ ಗಳಿಸಿರುವ ಉಸ್ಮಾನ್ ಖವಾಜಾ ಮತ್ತು 6 ರನ್ ಗಳಿಸಿರುವ ನಾಥನ್ ಲಿಯಾನ್ ಕ್ರೀಸ್‌ನಲ್ಲಿದ್ದಾರೆ.

ಭಾರತದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದಾರಿ
ಮತ್ತೊಂದೆಡೆ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಈ ಸಮಯದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿರುವುದರಿಂದ, ಬಲವಾದ ಪುನರಾಗಮನವನ್ನು ಮಾಡಲು ಆಶಿಸುತ್ತಿದೆ.

ಅತ್ತ ಕಡೆ, ಶ್ರೀಲಂಕಾ ತಂಡ ನ್ಯೂಜಿಲೆಂಡ್ ವಿರುದ್ಧ ಉತ್ತಮವಾಗಿ ಆಡುವುದರಿಂದ, ಭಾರತದ ಅರ್ಹತಾ ಅವಕಾಶಗಳು ಅಪಾಯದಲ್ಲಿದ್ದು, ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾಗಿದೆ.

Story first published: Friday, March 10, 2023, 14:41 [IST]
Other articles published on Mar 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+