
ಸ್ಟೇಡಿಯಂನ ಪ್ರೇಕ್ಷಕರಿಂದ ಆರ್‌ಸಿಬಿ, ಆರ್‌ಸಿಬಿ... ಎಂಬ ಘೋಷಣೆ
ಆಸ್ಟ್ರೇಲಿಯಾ ಬ್ಯಾಟಿಂಗ್ ವೇಳೆ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿಗೆ ಸ್ಟೇಡಿಯಂನ ಪ್ರೇಕ್ಷಕರಿಂದ ಆರ್‌ಸಿಬಿ, ಆರ್‌ಸಿಬಿ... ಎಂಬ ಘೋಷಣೆಗಳು ಕೇಳಿಬಂದವು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿದ್ದರೂ, ಭಾರತದ ಅನುಭವಿ ಆಟಗಾರ ಭಾರತೀಯ ಜೆರ್ಸಿ ತೋರಿಸಿದರು. ಆರ್‌ಸಿಬಿ ಬದಲಿಗೆ ರಾಷ್ಟ್ರೀಯ ತಂಡಕ್ಕಾಗಿ ಹುರಿದುಂಬಿಸಲು ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದರು.
ನಂತರ ಪ್ರೇಕ್ಷಕರು ಇಂಡಿಯಾ, ಇಂಡಿಯಾ... ಎಂಬ ಘೋಷಣೆಗಳನ್ನು ಕೂಗಿದಾಗ ವಿರಾಟ್ ಕೊಹ್ಲಿ ಖುಷಿಪಟ್ಟರು ಮತ್ತು ಇನ್ನು ಜೋರಾಗಿ ಕೂಗುವಂತೆ ಮತ್ತೊಮ್ಮೆ ಕೈ ಸನ್ನೆ ಮಾಡಿದರು. ಇದು ವಿರಾಟ್ ಕೊಹ್ಲಿಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

25,000 ರನ್ ಗಳಿಸಿದ ವಿಶ್ವದ ವೇಗದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ
ಇನ್ನು ಆಸ್ಟ್ರೇಲಿಯಾ ವಿರುದ್ಧದ ದೆಹಲಿ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ದಾಖಲೆಗಳ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದರು. ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪಗಳಲ್ಲಿ 25,000 ರನ್ ಗಳಿಸಿದ ವಿಶ್ವದ ಆರನೇ ಮತ್ತು ವೇಗದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 115 ರನ್ ಚೇಸಿಂಗ್ ವೇಳೆ 12ನೇ ಓವರ್‌ನಲ್ಲಿ ನಾಥನ್ ಲಿಯಾನ್ ಅವರ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಭಾರತದ ವಿರಾಟ್ ಕೊಹ್ಲಿ 25,000 ರನ್‌ಗಳ ಸಾಧನೆ ಮಾಡಿದರು.
25,000 ರನ್ ಮೈಲಿಗಲ್ಲನ್ನು ತಲುಪಲು 52 ರನ್‌ಗಳ ಅಗತ್ಯವಿರುವಾಗ ತಮ್ಮ 492ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಿದರು. ವಿರಾಟ್ ಕೊಹ್ಲಿ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ 44 ರನ್ ಗಳಿಸಿದರು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 20 ರನ್‌ಗಳಿಗೆ ಔಟಾಗುವ ಮುನ್ನ 25012 ರನ್ ಪೇರಿಸಿದರು.

ಎಲ್ಲ ಸ್ವರೂಪಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು
ಸಚಿನ್ ತೆಂಡೂಲ್ಕರ್ - ಭಾರತ - 664 ಪಂದ್ಯಗಳಿಂದ 34357 ರನ್
ಕುಮಾರ ಸಂಗಕ್ಕಾರ - ಶ್ರೀಲಂಕಾ - 594 ಪಂದ್ಯಗಳಿಂದ 28016 ರನ್
ಮಹೇಲಾ ಜಯವರ್ಧನೆ - ಶ್ರೀಲಂಕಾ - 652 ಪಂದ್ಯಗಳಿಂದ 25957 ರನ್
ರಿಕಿ ಪಾಂಟಿಂಗ್ - ಆಸ್ಟ್ರೇಲಿಯಾ - 560 ಪಂದ್ಯಗಳಿಂದ 27483 ರನ್
ಜಾಕ್ವೆಸ್ ಕಾಲಿಸ್ - ದಕ್ಷಿಣ ಆಫ್ರಿಕಾ - 519 ಪಂದ್ಯಗಳಿಂದ 25534 ರನ್
ವಿರಾಟ್ ಕೊಹ್ಲಿ - ಭಾರತ - 492 ಪಂದ್ಯಗಳಿಂದ 25012 ರನ್
2008ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ 34 ವರ್ಷದ ವಿರಾಟ್ ಕೊಹ್ಲಿ, ತಮ್ಮ 492 ಪಂದ್ಯಗಳ 549ನೇ ಇನ್ನಿಂಗ್ಸ್‌ನಲ್ಲಿ ಮೈಲಿಗಲ್ಲನ್ನು ತಲುಪಿದರು. ಸಚಿನ್ ತೆಂಡೂಲ್ಕರ್ 25000 ರನ್ ಗಡಿ ತಲುಪಲು 577 ಇನ್ನಿಂಗ್ಸ್ ತೆಗೆದುಕೊಂಡಿದ್ದರೆ, ರಿಕಿ ಪಾಂಟಿಂಗ್ 588 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.


Click it and Unblock the Notifications
