Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND-W vs AUS-W: ಭಾರತ vs ಆಸೀಸ್ 5ನೇ ಟಿ20 ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ

IND vs AUS: India Women vs Australia Women 5th T20 Toss Report, Playing 11 And Live Score

ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ಮಂಗಳವಾರ (ಡಿಸೆಂಬರ್ 20) ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ.

ಈಗಾಗಲೇ 3-1 ಅಂತರದಲ್ಲಿ ಮುನ್ನಡೆ ಗಳಿಸಿರುವ ಆಸ್ಟ್ರೇಲಿಯಾ ಮಹಿಳಾ ತಂಡ ಕೊನೆಯ ಪಂದ್ಯವನ್ನೂ ಗೆಲ್ಲಲು ಎದುರು ನೋಡುತ್ತಿದ್ದರೆ, ಅಂತಿಮ ಪಂದ್ಯ ಗೆದ್ದು ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲು ಭಾರತ ವನಿತೆಯರು ಸಜ್ಜಾಗಿದ್ದಾರೆ.

ಟಾಸ್ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬೌಲಿಂಗ್ ಆಯ್ದುಕೊಂಡರೆ, ತಹ್ಲಿಯಾ ಮೆಕ್‌ಗ್ರಾತ್ ನಾಯಕತ್ವದ ಆಸ್ಟ್ರೇಲಿಯಾ ಮಹಿಳಾ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.

ವಿಶ್ವ ಚಾಂಪಿಯನ್ ಆಸ್ಟ್ರೇಲಿಯನ್ ತಂಡವು ಆತಿಥೇಯ ಭಾರತ ಮಹಿಳಾ ತಂಡದ ವಿರುದ್ಧ ನಿರ್ಣಾಯಕ ಕೊನೆಯ ಪಂದ್ಯದಲ್ಲಿ ರೋಚಕ 7 ರನ್‌ಗಳ ಗೆಲುವು ಸಾಧಿಸಿತ್ತು.

ಇನ್ನು ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ತವರಿನಲ್ಲಿ ಉತ್ತಮ ಗುಣಮಟ್ಟದ ಕ್ರಿಕೆಟ್ ಅನ್ನು ಪ್ರದರ್ಶಿಸಿದೆ.

ಅಲಿಸ್ಸಾ ಹೀಲಿ ಬದಲಾಗಿ ತಹ್ಲಿಯಾ ಮೆಕ್‌ಗ್ರಾತ್ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡವಾಗಿ ಐಸಿಸಿ ಟೂರ್ನಿ ಅಥವಾ ಕಾಮನ್ವೆಲ್ತ್ ಗೇಮ್ಸ್, ತವರು ಪರಿಸ್ಥಿತಿಗಳು ಮತ್ತು ಹೊರಗಿನ ಪರಿಸ್ಥಿತಿಗಳಲ್ಲಿ ಉತ್ತಮ ತಂಡವೆಂದು ಆಸ್ಟ್ರೇಲಿಯಾ ಸಾಬೀತುಪಡಿಸಿದೆ.

ಭಾರತ vs ಆಸ್ಟ್ರೇಲಿಯಾ ಮಹಿಳಾ ತಂಡಗಳ ಸಂಭಾವ್ಯ 11ರ ಬಳಗ
ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಹರ್ಲಿನ್ ಡಿಯೋಲ್, ದೇವಿಕಾ ವೈದ್ಯ, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಅಂಜಲಿ ಸರ್ವಾನಿ, ರೇಣುಕಾ ಸಿಂಗ್,

ಆಸ್ಟ್ರೇಲಿಯಾ: ತಾಲಿಯಾ ಮೆಕ್‌ಗ್ರಾತ್ (ನಾಯಕಿ), ಬೆತ್ ಮೂನಿ, ಎಲಿಸ್ಸೆ ಪೆರ್ರಿ, ಆಶ್ಲೀಗ್ ಗಾರ್ಡ್ನರ್, ಫೋಬೆ ಲಿಚ್‌ಫೀಲ್ಡ್, ಗ್ರೇಸ್ ಹ್ಯಾರಿಸ್, ಅನ್ನಾಬೆಲ್ ಸದರ್ಲ್ಯಾಂಡ್, ಹೀಥರ್ ಗ್ರಹಾಂ, ಅಲಾನಾ ಕಿಂಗ್, ಕಿಮ್ ಗಾರ್ತ್, ಡಾರ್ಸಿ ಬ್ರೌನ್

Story first published: Tuesday, December 20, 2022, 18:39 [IST]
Other articles published on Dec 20, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+