Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AUS: ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಬಗ್ಗೆ ಭವಿಷ್ಯ ನುಡಿದ ಸೌರವ್ ಗಂಗೂಲಿ

IND vs AUS: Indian Former Cricketer Sourav Ganguly Predicts About Border-Gavaskar Trophy Series

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆತಿಥೇಯ ತಂಡ ಗೆಲುವು ಸಾಧಿಸಿ, ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಮೂರು ದಿನಗಳೊಳಗೆ ಜಯ ದಾಖಲಿಸಿದ ನಂತರ, ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮೇಲುಗೈ ಗಳಿಸಿದೆ. ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1ರಂದು ಇಂದೋರ್‌ನಲ್ಲಿ ಆರಂಭವಾಗಲಿದೆ.

ಪ್ರವಾಸಿ ಆಸ್ಟ್ರೇಲಿಯಾ ತಂಡವು ಗಾಯಗಳಿಂದಾಗಿ ಹಲವು ಸಂಕಷ್ಟಗಳನ್ನು ಎದುರಿಸಿದೆ. ಇದೇ ವೇಳೆ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ತಮ್ಮ ತಾಯಿಯ ಅನಾರೋಗ್ಯದ ಕಾರಣ ತವರಿಗೆ ಹಿಂದಿರುಗಿದ್ದರಿಂದ ಮೂರನೇ ಟೆಸ್ಟ್‌ ಪಂದ್ಯಕ್ಕೆ ಲಭ್ಯವಿರುವುದಿಲ್ಲ.

IND vs AUS: Indian Former Cricketer Sourav Ganguly Predicts About Border-Gavaskar Trophy Series

ಟೆಸ್ಟ್ ಸರಣಿಯ ಅರ್ಧ ಭಾಗದ ನಂತರ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ವೈಟ್‌ವಾಶ್ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

"ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯನ್ನು ಭಾರತ 4-0 ಅಂತರದಿಂದ ಗೆಲ್ಲಲಿ ಎಂದು ಎದುರು ನೋಡುತ್ತೇನೆ. ಭಾರತ ತಂಡವನ್ನು ಸೋಲಿಸಲು ಆಸ್ಟ್ರೇಲಿಯಾ ತಂಡಕ್ಕೆ ಕಷ್ಟವಾಗುತ್ತದೆ. ಇಲ್ಲಿನ ಪರಿಸ್ಥಿತಿಗಳಲ್ಲಿ ಭಾರತ ತುಂಬಾ ಬಲಾಢ್ಯ ತಂಡವಾಗಿದೆ," ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

IND vs AUS: Indian Former Cricketer Sourav Ganguly Predicts About Border-Gavaskar Trophy Series

ಆಸ್ಟ್ರೇಲಿಯಾದ ಶ್ರೇಷ್ಠ ಕ್ರಿಕೆಟಿಗ ಗ್ರೆಗ್ ಚಾಪೆಲ್ ಅವರು ಭಾರತದ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಲ್ಲಿ ತಂಡದ ಕಳಪೆ ಪ್ರದರ್ಶನವನ್ನು ಟೀಕಿಸಿದ್ದು, "ಪ್ರವಾಸಿಗರು ಮೊದಲ ಎಸೆತವನ್ನು ಬೌಲ್ ಮಾಡುವ ಮುಂಚೆಯೇ ತಮ್ಮ ಬಾಯಿಯಲ್ಲಿ ಗುದ್ದಿಕೊಂಡರು," ಎಂದು ಸೌರವ್ ಗಂಗೂಲಿ ತಿಳಿಸಿದರು.

ನಾಲ್ಕು ಪಂದ್ಯಗಳ ಸರಣಿಯ ಮೊದಲ ಎರಡು ಟೆಸ್ಟ್‌ಗಳಲ್ಲಿ ಭಾರತಕ್ಕೆ ಸುಲಭ ತುತ್ತಾದ ನಂತರ ಆಸ್ಟ್ರೇಲಿಯಾ ತಂಡ ಈಗಾಗಲೇ ಬಾರ್ಡರ್-ಗವಾಸ್ಕರ್ ಟ್ರೋಫಿ ಆಸೆಯನ್ನು ಕೈಬಿಟ್ಟಿದೆ. ಹೀಗಾಗಿ ತಮ್ಮ ದೇಶದ ಮಾಜಿ ಕ್ರಿಕೆಟಿಗರಿಂದ ಕಟು ಟೀಕೆಗಳನ್ನು ಎದುರಿಸಬೇಕಾಗಿದೆ.

Story first published: Sunday, February 26, 2023, 12:37 [IST]
Other articles published on Feb 26, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+