IND vs AUS 4th Test: ರೋಹಿತ್ ಶರ್ಮಾರಿಂದ ಮತ್ತೊಂದು ದಾಖಲೆ; ಈ ಸಾಧನೆ ಮಾಡಿದ 7ನೇ ಭಾರತೀಯ ಬ್ಯಾಟರ್

ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಮತ್ತು ಅಂತಿಮ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡದ 480 ರನ್‌ಗಳಿಗೆ ಪ್ರತ್ಯುತ್ತರವಾಗಿ, ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ಮಾರ್ಚ್ 11ರ ಶನಿವಾರದಂದು ಮೂರನೇ ದಿನದಾಟದ ಭೋಜನ ವಿರಾಮದ ವೇಳೆಗೆ 129 ರನ್‌ಗಳಿಗೆ 1 ವಿಕೆಟ್ ಕಳದುಕೊಂಡಿದೆ.
ಇನ್ನಿಂಗ್ಸ್ ಅರಂಭಿಸಿದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಮೊದಲ ವಿಕೆಟ್‌ಗೆ 74 ರನ್‌ಗಳ ಜೊತೆಯಾಟ ನೀಡಿದರು. ಈ ವೇಲೆ 35 ರನ್ ಗಳಿಸಿದ್ದ ನಾಯಕ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್‌ಗೆ ಬಂದಿರುವ ಚೇತೇಶ್ವರ ಪೂಜಾರ 22 ರನ್ ಮತ್ತು ಶುಭ್ಮನ್ ಗಿಲ್ 65 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದೇ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17,000 ರನ್ ಪೂರೈಸುವ ಮೂಲಕ ಕ್ರಿಕೆಟ್ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದರು.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್‌ನ 3ನೇ ದಿನದಂದು ರೋಹಿತ್ ಶರ್ಮಾ 17,000 ಅಂತಾರಾಷ್ಟ್ರೀಯ ರನ್ ಗಳಿಸಿದ 7ನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು.

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17,000ಕ್ಕೂ ಹೆಚ್ಚು ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಇತರ ಭಾರತೀಯ ಬ್ಯಾಟರ್‌ಗಳ ಪಟ್ಟಿಗೆ ರೋಹಿತ್ ಶರ್ಮಾ ಸೇರಿಕೊಂಡರು. ಭಾರತ ತಂಡಕ್ಕಾಗಿ 17,000 ರನ್ ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ 6ನೇ ಬ್ಯಾಟರ್ ಮತ್ತು ಈ ಮೈಲಿಗಲ್ಲನ್ನು ದಾಟಿದ 7ನೇ ಭಾರತೀಯ ಆಟಗಾರನಾದರು.
ವೀರೇಂದ್ರ ಸೆಹ್ವಾಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17,253 ರನ್ ಗಳಿಸಿದ್ದಾರೆ. ಭಾರತಕ್ಕಾಗಿ 16,892 ರನ್ ಗಳಿಸಿದ್ದರೆ, ಅವರ ಉಳಿದ ರನ್‌ಗಳನ್ನು ಐಸಿಸಿ ಮತ್ತು ಏಷ್ಯಾ ಆಯ್ದ ತಂಡಗಳಿಗಾಗಿ ಗಳಿಸಿದ್ದಾರೆ.
ರೋಹಿತ್ ಶರ್ಮಾ ಅವರ ಹೆಚ್ಚಿನ ರನ್‌ಗಳು ಏಕದಿನ ಕ್ರಿಕೆಟ್‌ನಲ್ಲಿ ಬಂದಿವೆ. ಬಲಗೈ ಆರಂಭಿಕ ಬ್ಯಾಟರ್ 241 ಏಕದಿನ ಪಂದ್ಯಗಳಲ್ಲಿ 9782 ರನ್ ಗಳಿಸಿದ್ದರೆ, 148 ಟಿ20 ಪಂದ್ಯಗಳಲ್ಲಿ 3853 ರನ್ ಗಳಿಸಿದ್ದಾರೆ. 48 ಟೆಸ್ಟ್ ಪಂದ್ಯಗಳಲ್ಲಿ 3344 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಏಕದಿನದಲ್ಲಿ 30 ಶತಕ, ಟೆಸ್ಟ್‌ನಲ್ಲಿ 9 ಮತ್ತು ಟಿ20 ಕ್ರಿಕೆಟ್‌ನಲ್ಲಿ 4 ಶತಕಗಳನ್ನು ಬಾರಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರು
ಸಚಿನ್ ತೆಂಡೂಲ್ಕರ್ - 664 ಪಂದ್ಯಗಳಲ್ಲಿ 34,357 ರನ್
ವಿರಾಟ್ ಕೊಹ್ಲಿ - 494 ಪಂದ್ಯಗಳಲ್ಲಿ 25,047 ರನ್
ರಾಹುಲ್ ದ್ರಾವಿಡ್ - 504 ಪಂದ್ಯಗಳಲ್ಲಿ 24,064 ರನ್
ಸೌರವ್ ಗಂಗೂಲಿ - 421 ಪಂದ್ಯಗಳಲ್ಲಿ 18,433 ರನ್
ಎಂಎಸ್ ಧೋನಿ - 535 ಪಂದ್ಯಗಳಲ್ಲಿ 17,092 ರನ್
ರೋಹಿತ್ ಶರ್ಮಾ - 438 ಪಂದ್ಯಗಳಲ್ಲಿ 17,000 ರನ್
ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ 120 ರನ್ ಭಾರತದ ಗೆಲುವಿಗೆ ಸಹಕಾರಿಯಾಗಿತ್ತು. ಆತಿಥೇಯರು ಸರಣಿಯ ಮೊದಲ ಪಂದ್ಯದಲ್ಲಿ ಇನಿಂಗ್ಸ್ ಮತ್ತು 132 ರನ್‌ಗಳ ಜಯ ಸಾಧಿಸಿದರು.
ಇನ್ನು ನವದೆಹಲಿಯಲ್ಲಿ ನಡೆದ ಎರಡನೇ ಪಂದ್ಯವನ್ನು ಗೆದ್ದ ಭಾರತ ತಂಡ, ಇಂದೋರ್‌ನಲ್ಲಿ ನಡೆದ 3ನೇ ಟೆಸ್ಟ್‌ನಲ್ಲಿ ಭಾರತ ಸೋಲನುಭವಿಸುವ ಮೂಲಕ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications