Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rohit Sharma: ಟೆಸ್ಟ್ ಕ್ರಿಕೆಟ್‌ನಲ್ಲಿ ಎಂಎಸ್ ಧೋನಿ, ಬಾಬರ್ ಅಜಂ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ

IND vs AUS: Rohit Sharma Equals MS Dhoni, Babar Azams Record In Test Cricket As Captain

ಭಾನುವಾರ, ಫೆಬ್ರವರಿ 19ರಂದು ಆಸ್ಟ್ರೇಕಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುತ್ತಿದ್ದಂತೆಯೇ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಪಾಕಿಸ್ತಾನದ ಬಾಬರ್ ಅಜಂ ಮತ್ತು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ಎಲೈಟ್ ಪಟ್ಟಿಗೆ ಸೇರಿಕೊಂಡಿದ್ದಾರೆ.

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿತು ಮತ್ತು ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿತು.

ಕಳೆದ 50 ವರ್ಷಗಳ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಎಂಎಸ್ ಧೋನಿ, ರೋಹಿತ್ ಶರ್ಮಾ ಮತ್ತು ಬಾಬರ್ ಅಜಂ ಮಾತ್ರ ರಾಷ್ಟ್ರೀಯ ತಂಡಗಳ ನಾಯಕರಾಗಿ ತಮ್ಮ ಮೊದಲ ನಾಲ್ಕು ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ 2-0 ಅಂತರದ ಮುನ್ನಡೆ

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ 2-0 ಅಂತರದ ಮುನ್ನಡೆ

ಕಳೆದ ವರ್ಷ ರೋಹಿತ್ ಶರ್ಮಾ ಅವರು ಭಾರತ ತಂಡವನ್ನು ದಿಮುತ್ ಕರುಣಾರತ್ನೆ ನಾಯಕತ್ವದ ಶ್ರೀಲಂಕಾ ವಿರುದ್ಧ 2-0 ಸರಣಿ ಜಯಿಸಲು ಮುನ್ನಡೆಸಿದ್ದರು.

ಸದ್ಯ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ 2-0 ಅಂತರದ ಮುನ್ನಡೆ ಸಾಧಿಸಿದ್ದು, ದೆಹಲಿ ಟೆಸ್ಟ್ ಪಂದ್ಯದ ಗೆಲುವಿನೊಂದಿಗೆ ಆತಿಥೇಯ ತಂಡ ಟ್ರೋಫಿಯನ್ನು ಸಹ ಉಳಿಸಿಕೊಂಡಿದೆ.

2008ರಲ್ಲಿ ಎಂಎಸ್ ಧೋನಿ ಮೊದಲ ಬಾರಿಗೆ ಭಾರತ ತಂಡದ ನಾಯಕತ್ವ

2008ರಲ್ಲಿ ಎಂಎಸ್ ಧೋನಿ ಮೊದಲ ಬಾರಿಗೆ ಭಾರತ ತಂಡದ ನಾಯಕತ್ವ

2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಎಂಎಸ್ ಧೋನಿ ಮೊದಲ ಬಾರಿಗೆ ಭಾರತ ತಂಡದ ನಾಯಕತ್ವ ವಹಿಸಿದ್ದರು. ಮೊದಲ ಪಂದ್ಯವನ್ನು ಭಾರತ ಎಂಟು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಅದರ ನಂತರ ಎಂಎಸ್ ಧೋನಿ 2008ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಎರಡು ವಿಜಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ನಂತರ ಡಿಸೆಂಬರ್ 2008ರಲ್ಲಿ ಚೆನ್ನೈನಲ್ಲಿ ಭಾರತ ತಂಡ ಆರು ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು.

ಜಿಂಬಾಬ್ವೆ ತಂಡವನ್ನು 2-0 ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ಸೋಲಿಸಿತ್ತು

ಜಿಂಬಾಬ್ವೆ ತಂಡವನ್ನು 2-0 ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ಸೋಲಿಸಿತ್ತು

ಮತ್ತೊಂದೆಡೆ, ಪಾಕಿಸ್ತಾನದ ಬಾಬರ್ ಅಜಂ ಕಳೆದ ಜನವರಿಯಲ್ಲಿ ಟೆಸ್ಟ್‌ ತಂಡಕ್ಕೆ ಮತ್ತೆ ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡರು. ಈ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ 2-0 ಅಂತರದ ಗೆಲುವಿನಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದರು.

ಅನಂತರ, ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಜಿಂಬಾಬ್ವೆ ತಂಡವನ್ನು 2-0 ಅಂತರದಿಂದ ಸೋಲಿಸಿತು. ಟೆಸ್ಟ್ ಕ್ರಿಕಟ್‌ನಲ್ಲಿ ರೋಹಿತ್ ಶರ್ಮಾ, ಎಂಎಸ್ ಧೋನಿ ಮತ್ತು ಬಾಬರ್ ಅಜಂ ಮಾತ್ರ ತಮ್ಮ ಮೊದಲ ನಾಲ್ಕು ಪಂದ್ಯಗಳ ನಾಯಕತ್ವದಲ್ಲಿ ನಾಲ್ಕೂ ಪಂದ್ಯಗಳನ್ನು ಜಯಿಸಿದ ನಾಯಕರಾಗಿದ್ದಾರೆ.

3 ಮತ್ತು 4ನೇ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ರೋಹಿತ್

3 ಮತ್ತು 4ನೇ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ರೋಹಿತ್

ಇನ್ನು ರೋಹಿತ್ ಶರ್ಮಾ ಅವರು ಮಾರ್ಚ್ 1ರಂದು ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಸರಣಿಯ ಮೂರನೇ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿರುವ ಅಂತಿಮ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ರೋಹಿತ್ ಶರ್ಮ ಬ್ಯಾಟರ್ ಆಗಿಯೂ ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸಿದ್ದಾರೆ. ನಾಗ್ಪುರ ಮೂಲದ ಬಲಗೈ ಬ್ಯಾಟರ್ ನಾಯಕನಾಗಿ ನಾಲ್ಕು ಟೆಸ್ಟ್‌ ಪಂದ್ಯಗಳಿಂದ 45.50 ಸರಾಸರಿಯಲ್ಲಿ 273 ರನ್ ಗಳಿಸಿದ್ದಾರೆ. ಇದರಲ್ಲಿ ಇತ್ತೀಚಿಗೆ ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗಳಿಸಿದ 120 ರನ್ ಅಗ್ರ ಸ್ಕೋರ್ ಆಗಿದೆ.

Story first published: Monday, February 20, 2023, 19:31 [IST]
Other articles published on Feb 20, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+