Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shubman vs Suryakumar: ಸೂರ್ಯಕುಮಾರ್‌ಗೆ ಸಚಿನ್ ಬೆಂಬಲ: ಶುಬ್ಮನ್ ಗಿಲ್ ಬಗ್ಗೆ ಹೇಳಿದ್ದೇನು?

Ind vs Aus: Sachin Tendulkar backs Suryakumar Yadav said je looks perfectly equipped to play Test cricket

ಗುರುವಾರದಿಂದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಆರಂಭವಾಗುತ್ತಿರುವ ಕಾರಣ ನಾಗ್ಪುರದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಯಾರೆಲ್ಲಾ ಆಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಪಂದ್ಯದಲ್ಲಿ ಶುಬ್ಮನ್ ಗಿಲ್ ಹಾಗೂ ಸೂರ್ಯಕುಮಾರ್ ಯಾದವ್ ಪೈಕಿ ಯಾರಿಕೆ ಅವಕಾಶ ದೊರೆಯಬಹುದು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಈ ಬಗ್ಗೆ ಹಲವಾರು ಕ್ರಿಕೆಟ್ ಪಂಡಿತರು ನಾನಾ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಕೂಡ ಈ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಟೆಸ್ಟ್ ಕ್ರಿಕೆಟ್ ಮಾದರಿಗೆ ಸೂರ್ಯಕುಮಾರ್ ಸೇರ್ಪಡೆಯ ಬಗ್ಗೆ ಸಚಿನ್ ತೆಂಡೂಲ್ಕರ್ ಮಾತನಾಡಿದ್ದು ಸೂರ್ಯಕುಮಾರ್ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರವಾಗಿ ಆಡುವ ಅವಕಾಶ ಪಡೆದುಕೊಂಡರೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೂರ್ಯಕುಮಾರ್ ಸಾಮರ್ಥ್ಯದ ಬಗ್ಗೆ ಸಚಿನ್ ಮಾತು: "ಟಿ20 ಮತ್ತು ಏಕದಿನ ಕ್ರಿಕೆಟ್‌ನಿಂದ ಶುರುವಾಗಿ ಈಗ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆಯುವವರೆಗೆ ಸೂರ್ಯಕುಮಾರ್ ಯಾದವ್ ಸಾಕಷ್ಟು ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ. ಯಾರೆಲ್ಲಾ ಸೂರ್ಯ ಅವರನ್ನು ನೋಡಿಕೊಂಡು ಬಂದಿದ್ದಾರೋ ಆತನ ಸಾಮರ್ಥ್ಯಕ್ಕೆ ಹಾಗೂ ಆತನ ಯೋಚನಾ ರೀತಿಗೆ ಆತನನ್ನು ಖಂಡಿಯವಾಗಿಯೂ ಇಷ್ಟ ಪಡುತ್ತಾರೆ" ಎಂದಿದ್ದಾರೆ ಸಚಿನ್ ತೆಂಡೂಲ್ಕರ್

ಮುಂದುವರಿದು ಮಾತನಾಡಿರುವ ಅವರು ಸೂರ್ಯಕುಮಾರ್ ಯಾದವ್ ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಎಲ್ ರಾಹುಲ್, ಶುಬ್ಮನ್ ಗಿಲ್ ಅವರಂತೆಯೇ ಅರ್ಹ ಆಟಗಾರ ಎಂದಿದ್ದಾರೆ. "ಟೆಸ್ಟ್ ಕ್ರಿಕೆಟ್ ಆಡಲು ಸೂರ್ಯ ಸಕಲ ರೀತಿಯಲ್ಲೂ ಸನ್ನಧವಾಗಿದ್ದಾರೆ. ಕೆಎಲ್ ರಾಹುಲ್ ಹಾಗೂ ಶುಬ್ಮನ್ ಗಿಲ್ ರೀತಿಯಲ್ಲಿಯೇ ಆತನ ಸಾಮರ್ಥ್ಯವನ್ನು ಕೂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಪರಿಗಣಿಸಬೇಕು" ಎಂದಿದ್ದಾರೆ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್.

ಆರಂಭಿಕ ಸ್ಥಾನಕ್ಕೆ ಗಿಲ್? ಸಚಿನ್ ಹೇಳಿದ್ದಿಷ್ಟು!: ಇನ್ನು ಇತ್ತೀಚಿನ ದಿನಗಳಲ್ಲಿ ಶುಬ್ಮನ್ ಗಿಲ್ ಅವರ ಅದ್ಭುತ ಫಾರ್ಮ್ ಕಂಡು ಟೆಸ್‌ ಕ್ರಿಕೆಟ್‌ನಲ್ಲಿಯೂ ರೋಹಿತ್ ಶರ್ಮಾ ಜೊತೆಗೆ ಶುಬ್ಮನ್ ಗಿಲ್ ಆರಂಭಿಕನಾಗಿ ಕಣಕ್ಕಿಳಿಯಲಿ ಎಂದು ಒತ್ತಾಯಿಸಲಾಗುತ್ತಿದೆ. ಈ ವಿಚಾರವಾಗಿ ಸಚಿನ್ ತೆಂಡೂಲ್ಕರ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ತಂಡದ ಕಾಂಬಿನೇಶನ್ ಹಾಗೂ ಇತರ ವಿಚಾರಗಳ ಬಗ್ಗೆ ನಾನು ಮಾತನಾಡಲು ಇಷ್ಟಪಡುವುದಿಲ್ಲ. ಆದರೆ ಇತ್ತೀಚಿನ ಫಾರ್ಮ್ ನೋಡಿದಾಗ ಶುಬ್ಮನ್ ಗಿಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕೆಎಲ್ ರಾಹುಲ್ ಅವರಿಂದ ಹೆಚ್ಚಾಗಿ ಕೊಡುಗೆ ನೀಡಲು ಸಾಧ್ಯವಾಗುತ್ತಿಲ್ಲ. ಇದು ಜೀವನದಲ್ಲಿನ ಏರಿಳಿದಂತೆಯೇ ಸಾಮಾನ್ಯವಾದದ್ದು. ಇಂಥಾ ಏರಿಳಿತಳನ್ನು ನೀವು ಸಹಜವಾಗಿಯೇ ಎದುರಿಸುತ್ತೀರಿ. ಅವರಿಬ್ಬರು ಕೂಡ ಉತ್ತಮ ಆಟಗಾರರಾಗಿದ್ದು ತಂಡದಲ್ಲಿ ಸ್ಥಾನವನ್ನು ಉಳಿಸಿಕೊಳ್ಳುತ್ತಾರೆ" ಎಂದಿದ್ದಾರೆ ಸಚಿನ್ ತೆಂಡೂಲ್ಕರ್.

Story first published: Wednesday, February 8, 2023, 21:50 [IST]
Other articles published on Feb 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+