IND vs AUS T20: ಸರಣಿಯ ವೇಳಾ ಪಟ್ಟಿ, ಟಾಸ್ ಟೈಮ್, ನೇರ ಪ್ರಸಾರದ ಸಂಪೂರ್ಣ ಮಾಹಿತಿ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ ಮುಗಿದಿದೆ. ಇನ್ನು ಟಿ20 ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಏಕದಿನ ಸರಣಿಯನ್ನು ಸೋತಿರುವ ಭಾರತ, ಟಿ20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸುವ ಕನಸು ಕಾಣುತ್ತಿದೆ. ಉಭಯ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದು, ರೋಚಕತೆ ಹೆಚ್ಚಿಸಿದೆ. ಸೂರ್ಯಕುಮಾರ್ ಯಾದವ್ ಪಡೆ ಇತ್ತೀಚಿಗೆ ದುಬೈನಲ್ಲಿ ನಡೆದ ಏಷ್ಯಾ ಕಪ್ ಟಿ20 ಟೂರ್ನಿಯನ್ನು ಗೆದ್ದು ಆತ್ಮ ವಿಶ್ವಾಸದಿಂದ ಕಣಕ್ಕೆ ಇಳಿಯಲಿದೆ. ಆಸೀಸ್ ಸಹ ಏಕದಿನ ಸರಣಿ ಗೆಲುವಿನ ಹುಮ್ಮಸ್ಸಿನಲ್ಲಿದೆ.
ಟಿ20 ಕ್ರಿಕೆಟ್‌ನ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಭಾರತ, ಆಸ್ಟ್ರೇಲಿಯಾಗಿಂತ ಬಲಿಷ್ಠವಾಗಿದೆ. ಸುರ್ಯಕುಮಾರ್ ಯಾದವ್ ಅವರಿಗೆ ವೈಯಕ್ತಿಕವಾಗಿ ಈ ಸರಣಿ ಮಹತ್ವದಾಗಿದೆ. ಈ ಸರಣಿಯಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ, ಮುಂಬರುವ ವಿಶ್ವಕಪ್‌ನಲ್ಲಿ ತಮ್ಮ ಸ್ಥಾನವನ್ನು ಭಧ್ರ ಪಡಿಸಿಕೊಳ್ಳುವ ಆಸೆಯನ್ನು ಸೂರ್ಯ ಹೊಂದಿದ್ದಾರೆ. ಕಳೆದ ಕೆಲವು ಪಂದ್ಯಗಳಲ್ಲಿ ಸೂರ್ಯ ಅವರ ಬ್ಯಾಟ್ ಮೌನಕ್ಕೆ ಶರಣಾಗಿದ್ದರಿಂದ ಇವರ ಮೇಲೆ ಒತ್ತಡ ಹೆಚ್ಚಿದೆ. ಇದೇ ವೇಳೆ ಅಭಿಷೇಕ್ ಶರ್ಮಾ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟಿ20 ಸರಣಿಗಳಲ್ಲಿ ಎಷ್ಟು ಪಂದ್ಯ ನಡೆಯಲಿವೆ?
ಒಟ್ಟು 5 ಪಂದ್ಯಗಳ ಟಿ20 ಸರಣಿ ಇದಾಗಿದೆ.
ಪಂದ್ಯಗಳು ನಡೆಯುವ ದಿನಾಂಕ ಹಾಗೂ ಸ್ಥಳ ಯಾವುದು?
ಅ.29 ಕ್ಯಾನ್‌ಬೆರಾದಲ್ಲಿ ಮೊದಲ ಪಂದ್ಯ, ಅ.31 ಮೆಲ್ಬೋರ್ನ್‌ನಲ್ಲಿ 2ನೇ ಪಂದ್ಯ, ನ.2 ಹೋಬರ್ಟ್‌ನಲ್ಲಿ 3ನೇ ಪಂದ್ಯ, ನ.6 ಗೋಲ್ಡ್ ಕಾಸ್ಟ್‌ನಲ್ಲಿ 4ನೇ ಪಂದ್ಯ, ನ.8 ಬ್ರಿಸ್ಬೇನ್‌ನಲ್ಲಿ 5ನೇ ಪಂದ್ಯ ನಡೆಯಲಿದೆ.
ಭಾರತೀಯ ಕಾಲಮಾನದಲ್ಲಿ ಪಂದ್ಯ ನಡೆಯುವ ಸಮಯ ಏನು?
ಉಭಯ ತಂಡಗಳ ನಡುವಣ ಪಂದ್ಯ 1.45ಕ್ಕೆ ನಡೆಯಲಿದೆ.
ಟಾಸ್ ನಡೆಯುವ ಸಮಯ ಯಾವುದು?
ಟಾಸ್ 1.15ಕ್ಕೆ ನಿಮಿಷಕ್ಕೆ ನಡೆಯಲಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆಯಲಿರುವ ಟಿ20 ಸರಣಿಯನ್ನು ಭಾರತದಲ್ಲಿ ಎಲ್ಲಿ ನೇರಪ್ರಸಾರ ವಾಗಲಿದೆ?
ಭಾರತದಲ್ಲಿ ದ್ವಿಪಕ್ಷೀಯ ಸರಣಿಯನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದಾಗಿದೆ.
ಆನ್‌ಲೈನ್‌ನಲ್ಲಿ ಈ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?
ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಪಂದ್ಯವನ್ನು ಲೈವ್ ನೋಡಬಹುದಾಗಿದೆ.
ಭಾರತ ತಂಡವನ್ನು ಈ ಸರಣಿಯಲ್ಲಿ ಮುನ್ನಡೆಸುವುದು ಯಾರು?
ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ.
ಭಾರತ ತಂಡದಲ್ಲಿರುವ ವಿಕೆಟ್ ಕೀಪರ್‌ಗಳು ಯಾರು ಯಾರು?
ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಹಾಗೂ ಧ್ರುವ್ ಜುರೇಲ್ ಸ್ಥಾನ ಪಡೆದಿದ್ದಾರೆ.
ಭಾರತ ಮೊದಲ ಟಿ20 ಪಂದ್ಯಕ್ಕಾಗಿ ಕಣಕ್ಕೆ ಇಳಿಸಬಹುದಾದ ಸಂಭಾವ್ಯ ತಂಡ ಹೇಗಿರಲಿದೆ?
ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷ್‌ದೀಪ್ ಸಿಂಗ್, ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications