IND-W vs AUS-W: ಗಾರ್ಡ್ನರ್, ಹ್ಯಾರಿಸ್ ಸ್ಫೋಟಕ ಬ್ಯಾಟಿಂಗ್; ಭಾರತಕ್ಕೆ ಬೃಹತ್ ಗುರಿ ನೀಡಿದ ಆಸೀಸ್

ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ಮಂಗಳವಾರ (ಡಿಸೆಂಬರ್ 20) ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಭಾರತ ತಂಡಕ್ಕೆ ಬೃಹತ್ ಗುರಿ ನೀಡಲಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ವನಿತೆಯರು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದ್ದು, ಭಾರತ ಮಹಿಳಾ ತಂಡ ಗೆಲ್ಲಲು 197 ರನ್ ಗುರಿ ನೀಡಲಾಗಿದೆ.
ಆಸ್ಟ್ರೇಲಿಯಾ ಪರ ಬ್ಯಾಟಿಂಗ್‌ನಲ್ಲಿ ಸ್ಫೋಟಕ ಪ್ರದರ್ಶನ ನೀಡಿದ ಆಶ್ಲೀಗ್ ಗಾರ್ಡ್ನರ್ 32 ಎಸೆತಗಳಲ್ಲಿ 66 ರನ್ ಗಳಿಸಿದರೆ, ಗ್ರೇಸ್ ಹ್ಯಾರಿಸ್ 35 ಎಸೆತಗಳಲ್ಲಿ 64 ರನ್ ಬಾರಿಸಿ ಮುರಿಯದ ಐದನೇ ವಿಕೆಟ್ ಜೊತೆಯಾಟಕ್ಕೆ 129 ರನ್ ಸೇರಿಸಿದರು.
ಆಸ್ಟ್ರೇಲಿಯಾದ ಆರಂಭ ಉತ್ತಮವಾಗಿರಲಿಲ್ಲ, 1.1 ಓವರ್‌ನಲ್ಲಿ 8 ರನ್ ಗಳಿಸಿದ್ದಾಗ ಬೆತ್ ಮೂನಿ ವಿಕೆಟ್ ಕಳೆದುಕೊಂಡಿತು. ನಂತರ 3.3 ಓವರ್‌ಗಳಲ್ಲಿ 17 ರನ್‌ಗಳಾಗಿದ್ದಾಗ ಫೋಬೆ ಲಿಚ್‌ಫೀಲ್ಡ್ ವಿಕೆಟ್ ಕಿತ್ತು ಭಾರತೀಯ ಬೌಲರ್‌ಗಳು ಸಂಭ್ರಮಿಸಿದರು.

ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. ಏಕೆಂದರೆ, ತಾಹ್ಲಿಯಾ ಮೆಕ್‌ಗ್ರಾತ್(26) ಮತ್ತು ಎಲಿಸ್ಸೆ ಪೆರ್ರಿ (18) ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. 9.4 ಓವರ್‌ಗಳಲ್ಲಿ 67 ರನ್‌ಗಳಾಗುವಷ್ಟರಲ್ಲಿ ಈ ಇಬ್ಬರು ಔಟಾಗಿದ್ದರು. ನಂತರ ಆಶ್ಲೀಗ್ ಗಾರ್ಡ್ನರ್ ಮತ್ತು ಗ್ರೇಸ್ ಹ್ಯಾರಿಸ್ ಬ್ಯಾಟಿಂಗ್ ವೈಭವ ಮುಂದುವರೆಯಿತು.
ಭಾರತ ತಂಡದ ಪರ ಬೌಲಿಂಗ್‌ನಲ್ಲಿ ಅಂಜಲಿ ಸರ್ವಾನಿ, ದೀಪ್ತಿ ಶರ್ಮಾ, ಶಫಾಲಿ ವರ್ಮಾ ಮತ್ತು ದೇವಿಕಾ ವೈದ್ಯ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು ಮತ್ತು ಎಲ್ಲ ಬೌಲರ್‌ಗಳು ಹೆಚ್ಚು ರನ್ ಬಿಟ್ಟುಕೊಟ್ಟು ದುಬಾರಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications