For Quick Alerts
ALLOW NOTIFICATIONS  
For Daily Alerts
 

IND vs AUS T20 Series: ವಿರಾಟ್ ಕೊಹ್ಲಿ, ಬಾಬರ್ ಅಜಂ ದಾಖಲೆ ಮೇಲೆ ಕಣ್ಣಿಟ್ಟ ಸೂರ್ಯಕುಮಾರ್!

ನವೆಂಬರ್ 23ರಂದು ವಿಶಾಖಪಟ್ಟಣದಲ್ಲಿ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡದ ಆಯ್ಕೆ ಮಾಡಲಾಗಿದೆ.

2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತೀಯ ತಂಡದ ಭಾಗವಾಗಿದ್ದ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿರುವುದರಿಂದ, ಟಿ20 ತಂಡವು ತಾಜಾ ಹಾಗೂ ಯುವ ಮುಖಗಳನ್ನು ಹೊಂದಿದೆ.

IND vs AUS T20 Series: Suryakumar Yadav Eyes On Virat Kohli, Babar Azam Record


ಇದೇ ವೇಳೆ ಭಾರತ ತಂಡದ ನೂತನ ನಾಯಕ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 2000 ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗುವ ಸಮೀಪದಲ್ಲಿದ್ದಾರೆ. 2000 ಟಿ20 ರನ್ ದಾಖಲೆಯನ್ನು ನಿರ್ಮಿಸಲು ಬಲಗೈ ಬ್ಯಾಟರ್ ಸೂರ್ಯಕುಮಾರ್ ಅವರ ಮುಂದಿನ ಇನ್ನಿಂಗ್ಸ್‌ಗಳಿಂದ 159 ರನ್‌ಗಳ ಅಗತ್ಯವಿದೆ.

ಸೂರ್ಯಕುಮಾರ್ ಯಾದವ್ ತಮ್ಮ ಮುಂದಿನ ಎರಡು ಇನ್ನಿಂಗ್ಸ್‌ಗಳಲ್ಲಿ 159 ರನ್‌ಗಳನ್ನು ಗಳಿಸಿದರೆ, ಅವರು 52 ಇನ್ನಿಂಗ್ಸ್‌ಗಳಲ್ಲಿ ಜಂಟಿ-ವೇಗವಾಗಿ 2000 ರನ್‌ಗಳ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಮೈಲಿಗಲ್ಲನ್ನು ಸರಿಗಟ್ಟುತ್ತಾರೆ.

ಸೂರ್ಯಕುಮಾರ್ ಯಾದವ್ ತನ್ನ ಮುಂದಿನ ಐದು ಪಂದ್ಯಗಳಲ್ಲಿ 159 ರನ್ ಗಳಿಸಿದರೆ, ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 2000 ರನ್ ಗಳಿಸಿದ ಭಾರತೀಯ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.

IND vs AUS T20 Series: Suryakumar Yadav Eyes On Virat Kohli, Babar Azam Record

ಪ್ರಸ್ತುತ 33 ವರ್ಷದ ಸೂರ್ಯಕುಮಾರ್ ಯಾದವ್ 50 ಇನ್ನಿಂಗ್ಸ್‌ಗಳಿಂದ 46.02ರ ಸರಾಸರಿ ಮತ್ತು 172.70 ಸ್ಟ್ರೈಕ್-ರೇಟ್‌ನಲ್ಲಿ 1841 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ತಮ್ಮ ಹೆಸರಿಗೆ ಮೂರು ಶತಕಗಳು ಮತ್ತು 15 ಅರ್ಧಶತಕಗನ್ನು ಹೊಂದಿದ್ದಾರೆ.

ಸೂರ್ಯಕುಮಾರ್ ಯಾದವ್ ಸದ್ಯ ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ತವರಿನಲ್ಲಿ ವಿಶ್ವಕಪ್ 2023ರ ಅಭಿಯಾನದ ನಂತರ, ವಿಶ್ರಾಂತಿ ಪಡೆದಿರುವ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್‌ನನ್ನು ಆಸ್ಟ್ರೇಲಿಯಾ ವಿರುದ್ಧದ ಭಾರತದ ಮುಂಬರುವ ಟಿ20 ಸರಣಿಗೆ ನಾಯಕನಾಗಿ ಹೆಸರಿಸಲಾಯಿತು.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನಲ್ಲಿ ಸೂರ್ಯಕುಮಾರ್ ಯಾದವ್ 18 ರನ್ ಗಳಿಸಿದ್ದಾಗ ಜೋಶ್ ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ವಿಕೆಟ್ ನೀಡಿದರು.

ಆಸ್ಟ್ರೇಲಿಯಾ ವಿರುದ್ಧ ಭಾರತದ ಮೊದಲ ಟಿ20 ಪಂದ್ಯವು ಗುರುವಾರ, ನವೆಂಬರ್ 23ರಂದು ವಿಶಾಖಪಟ್ಟಣದ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

Story first published: Tuesday, November 21, 2023, 17:06 [IST]
Other articles published on Nov 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+