ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಮೇಲೆ ಈಗ ಪ್ರಶ್ನೆಗಳು ಏಳುತ್ತಿವೆ. ಸೂರ್ಯಕುಮಾರ್ ಚುಟುಕು ಕ್ರಿಕೆಟ್‌ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಎಲ್ಲರ ಗಮನ ಸೆಳೆಯುತ್ತಾರೆ. ಆದರೆ, ಏಕದಿನ ಸ್ವರೂಪದಲ್ಲಿ ಏಕೆ ಇವರ ಬ್ಯಾಟ್ ಮೌನಕ್ಕೆ ಶರಣಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
2023ರ ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯನ್ನು ಟೀಮ್ ಇಂಡಿಯಾ ಆಡುತ್ತಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 2 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಗೆದ್ದು 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 42 ಎಸೆತಗಳಲ್ಲಿ 80 ರನ್ ಬಾರಿಸಿದರು.

ಮೊದಲ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಅವರ ಬಿರುಸಿನ ಬ್ಯಾಟಿಂಗ್ ನೋಡಿ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಆದರೆ, ಈ ರೀತಿಯ ಸ್ಥಿರ ಪ್ರದರ್ಶನ ಏಕದಿನ ಪಂದ್ಯಗಳಲ್ಲಿ ನೀಡುವಲ್ಲಿ ಸೂರ್ಯಕುಮಾರ್ ವಿಫಲರಾಗಿದ್ದಾರೆ.
ಸ್ಫೋಟಕ ದಾಂಡಿಗ ಸೂರ್ಯಕುಮಾರ್ ಯಾದವ್ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಸದಸ್ಯರಾಗಿದ್ದರು. ಅವರು ಫೈನಲ್ ಸೇರಿದಂತೆ ಒಟ್ಟು 7 ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದರು, ಅದರಲ್ಲಿ ಅವರು ಕೇವಲ 106 ರನ್ ಗಳಿಸಿದ್ದಾರೆ.

ವಿಶ್ವಕಪ್‌ನಂತಹ ವೇದಿಕೆಯಲ್ಲಿ ಯಾವುದೇ ಆಟಗಾರನಿಗೆ ಏಳು ಪಂದ್ಯಗಳನ್ನು ಆಡಲು ಅವಕಾಶ ನೀಡಿದರೆ, ಅದು ದೊಡ್ಡ ವಿಷಯ. ಫೈನಲ್‌ನಲ್ಲಿ ಅಗ್ರ ಕ್ರಮಾಂಕದ ಬ್ಯಾಟಿಂಗ್ ವಿಫಲವಾದಾಗ, ಸೂರ್ಯಕುಮಾರ್ ರನ್ ಗಳಿಸಬೇಕಾಗಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಹೀಗಿರುವಾಗ ಕಳೆದ ಟಿ20 ಕ್ರಿಕೆಟ್‌ನಲ್ಲಿ ಅಬ್ಬರಿಸಿದ ಸೂರ್ಯ ಏಕದಿನದಲ್ಲಿ ಮಂಕಾದರು, ಅವರ ಬ್ಯಾಟ್‌ನಿಂದ ರನ್ ಏಕೆ ಬರುತ್ತಿಲ್ಲ ಎಂಬುದನ್ನು ದೊಡ್ಡ ಪ್ರಶ್ನೆ ಆಗಿದೆ.
ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಆಟಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರು ಅಬ್ಬರಿಸಿದರೆ ಬೌಲರ್‌ಗಳ ಮೇಲೆ ಯಾವುದೇ ಕರುಣೆ ಇರುವುದಿಲ್ಲ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಅವರ ದಾಖಲೆ ತುಂಬಾ ಕೆಟ್ಟದಾಗಿದೆ. ಇದರ ಹಿಂದಿನ ಪ್ರಮುಖ ಕಾರಣ ಅವರ ನಿರಂತರ ವೈಫಲ್ಯ. ಏಕದಿನದಲ್ಲಿ ಸೂರ್ಯಕುಮಾರ್ ಅವರ ಬ್ಯಾಟ್‌ನಿಂದ ರನ್ ಬರುತ್ತಿಲ್ಲ. ಈ ಕಾರಣದಿಂದಾಗಿ, ಅವರ ಮನಸ್ಸಿನಲ್ಲಿ ಎಲ್ಲೋ ಆತ್ಮವಿಶ್ವಾಸದ ಕೊರತೆಯಿದೆ ಮತ್ತು ನಿರಂತರ ವೈಫಲ್ಯದ ಭಯ ಅವರನ್ನು ಕಾಡುತ್ತಿದೆ.
ಏಕದಿನ ಕ್ರಿಕೆಟ್ ಟಿ20 ಪಂದ್ಯಗಳಿಗಿಂತ ಭಿನ್ನವಾಗಿದೆ. ಟಿ20ಯಲ್ಲಿ ಮೊದಲ ಓವರ್‌ನ ಮೊದಲ ಎಸೆತದಿಂದಲೇ ಬ್ಯಾಟ್ಸ್‌ಮನ್ ಬಿಗ್ ಶಾಟ್‌ಗಳನ್ನು ಪ್ರಯೋಗಿಸುತ್ತಾನೆ. ಆದರೆ, ಏಕದಿನದಲ್ಲಿ ಬ್ಯಾಟರ್ ಕ್ರೀಸ್‌ನಲ್ಲಿ ಸ್ವಲ್ಪ ಸಮಯ ಕಳೆಯಬೇಕಾಗುತ್ತದೆ. ಇದೇ ಕಾರಣಕ್ಕೆ 50 ಓವರ್‌ಗಳ ಕ್ರಿಕೆಟ್ ಸೂರ್ಯ ಅವರಿಗೆ ಸರಿಹೊಂದುವುದಿಲ್ಲ.
ಸೂರ್ಯಕುಮಾರ್ ಯಾದವ್ ಮೈದಾನದಲ್ಲಿ ಟೈಮ್ ಸ್ಪೆಂಡ್ ಮಾಡಿ ಆಡುವ ಬ್ಯಾಟರ್ ಅಲ್ಲ. ಅವರು ಬರುತ್ತಲೇ ರನ್ ರೇಟ್ ಹಿಗ್ಗುತ್ತಲೆ ಸಾಗುತ್ತದೆ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿರುವ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು. ಸೂರ್ಯಕುಮಾರ್ ಯಾದವ್ ಅವರು ಏಕದಿನ ಸ್ವರೂಪದಲ್ಲಿ ಭರ್ಜರಿ ಪ್ರದರ್ಶನ ನೀಡಲು ಸಾಧ್ಯವಾಗದಿರಲು ಇದು ಒಂದು ದೊಡ್ಡ ಕಾರಣವಾಗಿದೆ. ಆದರೆ ಅವರ ಬ್ಯಾಟ್ ಟಿ20ನಲ್ಲಿ ಅಬ್ಬರಿಸುತ್ತದೆ.
ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟ್ಸ್‌ಮನ್ ಎಂದೇ ಖ್ಯಾತಿ ಪಡೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ, ಅವರು ಬೌಲರ್‌ಗಳ ಮೇಲೆ ಸಂಪೂರ್ಣವಾಗಿ ಪ್ರಾಬಲ್ಯ ಹೊಂದಿದ್ದಾರೆ. ಏಕೆಂದರೆ ಈ ಸ್ವರೂಪದಲ್ಲಿ ಬೌಲರ್‌ಗಳು ಎದುರಾಳಿಗಳಿಗೆ ಕಡಿಮೆ ಟಾರ್ಗೆಟ್ ನೀಡಬೇಕೆಂಬ ಒತ್ತಡ ಇದ್ದೇ ಇರುತ್ತದೆ.
ಹೀಗಿರುವಾಗ ಬೌಲರ್ ಒಂದು ಬಾರಿ ತಪ್ಪು ಮಾಡಿದರೆ, ಬ್ಯಾಟರ್ ಅವನನ್ನು ಟಾರ್ಗೆಟ್ ಮಾಡುತ್ತಾರೆ. ಆದರೆ ಏಕದಿನ ಸ್ವರೂಪದಲ್ಲಿ, ಬೌಲರ್‌ಗಳಿಗೆ ಸಮಯವಿದೆ. ಈ ಸ್ವರೂಪದಲ್ಲಿ ಅವರು ತಮ್ಮ ಯೋಜನೆಯಂತೆ ಬೌಲಿಂಗ್ ಮಾಡುತ್ತಾರೆ. ಅಲ್ಲದೆ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ಸಾಕಷ್ಟು ಸಮಯ ಸಿಗುತ್ತದೆ.
ಒಂದು ಓವರ್ ಕೆಟ್ಟದಾಗಿದ್ದರೆ, ಅವರು ಇನ್ನೊಂದರಲ್ಲಿ ಚೆನ್ನಾಗಿ ಮಾಡಬಹುದು. ಎಂಬ ಭವರವಸೆ ಇರುತ್ತದೆ. ಏಕದಿನ ಕ್ರಿಕೆಟ್್‌ನಲ್ಲಿ ಉತ್ತಮ ಬೌಲಿಂಗ್ ವಿರುದ್ಧ ಸೂರ್ಯಕುಮಾರ್ ಯಾದವ್ ವಿಫಲರಾಗಲು ಇದೇ ಕಾರಣ.
ಏಕದಿನ ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ವೈಫಲ್ಯಕ್ಕೆ ಪ್ರಮುಖ ಕಾರಣ ಅವರ ಬ್ಯಾಟಿಂಗ್ ಕ್ರಮಾಂಕ. ಅವರು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬರುತ್ತಾರೆ. ಆದರೆ ಟಿ20ಯಲ್ಲಿ ಸೂರ್ಯ ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಾರೆ. ಸೂರ್ಯ ಅವರ ದಾಖಲೆಯನ್ನು ನೋಡಿದರೆ, ಸೂರ್ಯ ಈ ಸ್ಥಾನದಲ್ಲಿ ಆಡಿದರೆ ರನ್ ಮಳೆ ಸುರಿಸುತ್ತಾರೆ. ಆದರೆ, ಸದ್ಯಕ್ಕೆ ಅವರಿಗೆ ಏಕದಿನ ಕ್ರಿಕೆಟ್‌ನಲ್ಲಿ ಈ ಸ್ಥಾನ ಖಾಲಿ ಇಲ್ಲ.