For Quick Alerts
ALLOW NOTIFICATIONS  
For Daily Alerts
 

Ind Vs Aus Test : ವಿರಾಟ್ ಕೊಹ್ಲಿ ಈಗ 25,000 ರನ್‌ಗಳ ಸರದಾರ: 'ಕಿಂಗ್‌ ಕೊಹ್ಲಿ' ಮತ್ತೊಂದು ದಾಖಲೆ

Ind Vs Aus Test : Virat Kohli Completes 25,000 Runs In International Cricket

ವಿರಾಟ್ ಕೊಹ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 25,000 ರನ್ ಪೂರೈಸಿದ ಬ್ಯಾಟರ್ ಎನ್ನುವ ದಾಖಲೆ ಬರೆದಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿ ಈ ದಾಖಲೆ ಬರೆದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರು ಮಾದರಿ ಕ್ರಿಕೆಟ್‌ನಲ್ಲಿ ಕೊಹ್ಲಿ ಕಿಂಗ್ ಆಗಿದ್ದಾರೆ. ಮೂರು ಮಾದರಿಯಲ್ಲಿ ಒಟ್ಟು 492 ಪಂದ್ಯಗಳಲ್ಲಿ 549 ಇನ್ನಿಂಗ್ಸ್ ಆಡಿರುವ ಕೊಹ್ಲಿ 25 ಸಾವಿರ ರನ್ ಪೂರೈಸಿದ ದಾಖಲೆ ಬರೆದರು.

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25 ಸಾವಿರ ರನ್ ಪೂರೈಸಿದ 6ನೇ ಆಟಗಾರ ಎನಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ (34,357 ರನ್), ಕುಮಾರ್ ಸಂಗಾಕ್ಕರ (28,016 ರನ್), ರಿಕಿ ಪಾಂಟಿಂಗ್ (27,483), ಮಹೇಲಾ ಜಯವರ್ಧನೆ (25,957 ರನ್), ಜಾಕ್ ಕಾಲಿಸ್ (25,534 ರನ್) ಅಗ್ರ 5 ಸ್ಥಾನದಲ್ಲಿರುವ ಬ್ಯಾಟರ್ ಆಗಿದ್ದಾರೆ.

ಕೊಹ್ಲಿ ಕಡಿಮೆ ಇನ್ನಿಂಗ್ಸ್‌ನಲ್ಲಿ 25000 ರನ್ ಪೂರೈಸಿದ ಆಟಗಾರ ಎನಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ನಂತರ ಈ 25 ಸಾವಿರ ರನ್ ಪೂರೈಸಿದ 2ನೇ ಆಟಗಾರ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

Ind Vs Aus Test : Virat Kohli Completes 25,000 Runs In International Cricket

ವಿರಾಟ್ ಕೊಹ್ಲಿ ಸಾಧನೆಯ ವಿವರ

ಇದುವರೆಗೆ 106 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 180 ಇನ್ನಿಂಗ್ಸ್‌ಗಳಿಂದ 48.73 ಸರಾಸರಿಯಲ್ಲಿ 8186 ರನ್ ಗಳಿಸಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಅವರು 27 ಶತಕಗಳನ್ನು ಸಿಡಿಸಿದ್ದು, 7 ದ್ವಿಶತಕ ಮತ್ತು 28 ಅರ್ಧಶತಕಗಳನ್ನು ಗಳಿಸಿದ್ದಾರೆ.

271 ಏಕದಿನ ಪಂದ್ಯಗಳಲ್ಲಿ 262 ಇನ್ನಿಂಗ್ಸ್‌ಗಳಿಂದ 57.7 ಸರಾಸರಿಯಲ್ಲಿ 12809 ರನ್ ಗಳಿಸುವ ಮೂಲಕ ಕಿಂಗ್ ಎನಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅವರು 46 ಶತಕಗಳನ್ನು ಗಳಿಸಿದ್ದು, 64 ಅರ್ಧಶತಕಗಳನ್ನು ಗಳಿಸಿದ್ದಾರೆ.

115 ಟಿ20 ಪಂದ್ಯಗಳನ್ನಾಡಿರುವ ಅವರು 107 ಇನ್ನಿಂಗ್ಸ್‌ಗಳಿಂದ 52.74 ಸರಾಸರಿಯಲ್ಲಿ 4008 ರನ್ ಗಳಿಸಿದ್ದಾರೆ. ಟಿ20 ಮಾದರಿಯಲ್ಲಿ 1 ಶತಕ ಮತ್ತು 37 ಅರ್ಧಶತಕಗಳನ್ನು ಗಳಿಸಿದ್ದಾರೆ.

Ind Vs Aus Test : Virat Kohli Completes 25,000 Runs In International Cricket

20 ರನ್ ಗಳಿಸಿ ಔಟಾದ ವಿರಾಟ್ ಕೊಹ್ಲಿ

ದೆಹಲಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ 20 ರನ್ ಗಳಿಸಿ ಔಟಾದರು. ಟಾಡ್ ಮುರ್ಫಿ ಬೌಲಿಂಗ್‌ನಲ್ಲಿ ಸ್ಟಂಪೌಟ್ ಆಗುವ ಮೂಲಕ ಔಟಾದರು. ವಿಶೇಷ ಎಂದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಸ್ಟಂಪೌಟ್ ಆಗಿದ್ದು.

ಕಳೆದ ಮೂರು ವರ್ಷಗಳಿಂದ ಉತ್ತಮ ಫಾರ್ಮ್‌ಗೆ ಮರಳಲು ಪರದಾಡಿದ್ದ ಕೊಹ್ಲಿ, ಸದ್ಯ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಟಿ20 ಮತ್ತು ಏಕದಿನ ಮಾದರಿಯಲ್ಲಿ ಈಗಾಗಲೇ ಶತಕ ಸಿಡಿಸಿದ್ದಾರೆ. ಈಗ ಟೆಸ್ಟ್ ಮಾದರಿಯಲ್ಲಿ ಅವರು ಶತಕ ಸಿಡಿಸಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

Story first published: Sunday, February 19, 2023, 13:30 [IST]
Other articles published on Feb 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+