
ಟಿ20 ಮಾದರಿಯಲ್ಲಿ ನಂಬರ್ 1 ಬ್ಯಾಟರ್ ಆಗಿರುವ ಸೂರ್ಯಕುಮಾರ್ ಯಾದವ್ ಏಕದಿನ ಮಾದರಿಯಲ್ಲಿ ಸತತವಾಗಿ ಕಳಪೆ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿಯೂ ಸೂರ್ಯ ಮೊದಲ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡಿದ್ದು ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಹೀಗಾಗಿ ಏಕದಿನ ಮಾದರಿಯಲ್ಲಿ ಸೂರ್ಯಕುಮಾರ್ ಯಾದವ್ ಭವಿಷ್ಯದ ಬಗ್ಗೆ ಪ್ರಶ್ನೆಗಳು ಏಳಲು ಆರಂಭಿಸಿದೆ. ಈ ಸಂದರ್ಭದಲ್ಲಿ ಮತ್ತೋರ್ವ ಆಟಗಾರ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯಗಳು ಜೋರಾಗುತ್ತಿದ್ದು ಮಾಜಿ ಕ್ರಿಕೆಟಿಗ ವಾಇಸಂ ಜಾಫರ್ ಕೂಡ ಅದೇ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಒಂದೇ ರೀತಿಯಾಗಿ ವಿಕೆಟ್ ಕಳೆದುಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಹಾಗೂ ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಮೊದಲ ಎಸೆತದಲ್ಲಿಯೇ ಎಲ್‌ಬಿಡಬ್ಲ್ಯು ಆಗಿ ವಿಕೆಟ್ ಕಳೆದುಕೊಂಡರು.
ಇಎಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆಗೆ ಅನಿಸಿಕೆ ಹಂಚಿಕೊಂಡಿರುವ ವಾಸಿಂ ಜಾಫರ್ ಅಂತಿಮ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬದಲಿಗೆ ಆಡಲು ಸಂಜು ಸ್ಯಾಮ್ಸನ್‌ಗೆ ಅವಕಾಶವನ್ನು ಕಲ್ಪಿಸಬೇಕು ಎಂದಿದ್ದಾರೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಸಂಜು ಸ್ಯಾಮ್ಸನ್ ಆಯ್ಕೆಯಾಗಿಲ್ಲ ಎಂಬುದು ಗಮನಿಸಬೇಕಾದ ಅಂಶ.
"ಮೊದಲ ಎಸೆತದಲ್ಲಿಯೇ 145 ಕಿ.ಮೀ ವೇಗದಲ್ಲಿ ಅಂಥಾ ಎಸೆತವನ್ನು ಎದುರಿಸಬೇಕಾಗಿ ಬಂದಿದ್ದಕ್ಕೆ ಸೂರ್ಯಕುಮಾರ್ ಯಾದವ್ ಬಗ್ಗೆ ಅನುಕಂಪವಿದೆ. ನೀವು ಬ್ಯಾಟಿಂಗ್ ನಡೆಸಲು ಕಣಕ್ಕಿಳಿದ ಕೂಡಲೇ ಎಡಗೈ ವೇಗಿಯಿಂದ ಅಂಥಾ ಎಸೆತ ಬಂದರೆ ಅದು ದೊಡ್ಡ ಸವಾಲು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಸ್ಟಾರ್ಕ್ ಬೌಲಿಂಗ್ ನಡೆಸುತ್ತಿದ್ದಾರೆ ಎಂದರೆ ವಿಕೆಟನ್ನು ಗುರಿಯಾಗಿರಿಸಿಯೇ ಬೌಲಿಂಗ್ ನಡೆಸಲಿದ್ದಾರೆ ಎಂಬುದನ್ನು ಅವರು ಊಹಿಸಬಹುದಾಗಿತ್ತು" ಎಂದಿದ್ದಾರೆ ವಾಸಿಂ ಜಾಫರ್.
ಇನ್ನು ಇದೇ ಸಂದರ್ಭದಲ್ಲಿ ಅವರು ಏಕದಿನ ಮಾದರಿಉಲ್ಲಿ ಸಿಕ್ಕ ಸೀಮಿತ ಅವಕಾಶದಲ್ಲಿ ಸಂಜು ಸ್ಯಾಮ್ಸನ್ ಅದ್ಭುತ ಪ್ರದರ್ಶನ ನಿಡಿದ್ದಾರೆ ಎಂದಿದ್ದು ತಂಡದಲ್ಲಿ ಸ್ಥಾನವನ್ನು ಪಡೆಯಲು ಆತ ಅರ್ಹ ಆಟಗಾರ ಎಂದಿದ್ದಾರೆ. ಏಕದಿನ ಮಾದರಿಯಲ್ಲಿ ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾ ಪರವಾಗಿ 11 ಪಂದ್ಯಗಳಲ್ಲಿ ಆಡಿದ್ದು 66ರ ಸರಾಸರಿಯಲ್ಲಿ 330 ರನ್‌ಗಳಿಸಿದ್ದಾರೆ.
"ಮೂರನೇ ಪಂದ್ಯದಲ್ಲಿಯೂ ಮ್ಯಾನೇಜ್‌ಮೆಂಟ್ ಸೂರ್ಯಕುಮಾರ್ ಯಾದವ್ ಅವರನ್ನೇ ಕಣಕ್ಕಿಳಿಸುತ್ತದೋ ಎಂಬುದನ್ನು ಕಾದು ನೋಡಬೇಕು. ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಿದರೆ ಅದು ಕೆಟ್ಟ ನಿರ್ಧಾರವೇನು ಆಗಲಾರದು. ಯಾಕೆಂದರೆ ಅಇಕ್ಕ ಅವಕಾಶದಲ್ಲಿ ಆತ ಅದ್ಭುತವಾಗಿ ಆಡಿ ಮಿಂಚಿದ್ದಾರೆ. ಆತನೊಬ್ಬ ಉತ್ತಮ ಆಟಗಾರ" ಎಂದಿದ್ದಾರೆ ವಾಸಿಂ ಜಾಫರ್.