For Quick Alerts
ALLOW NOTIFICATIONS  
For Daily Alerts
 

IND vs AUS WTC Final: ವಿರಾಟ್ ಕೊಹ್ಲಿ ಬದ್ಧತೆಯನ್ನು ಕೊಂಡಾಡಿದ ಎದುರಾಳಿ ತಂಡದ ಬೌಲರ್

ಜೂನ್ 7ರಿಂದ 11ರ ವೆರೆಗೆ ಇಂಗ್ಲೆಂಡ್‌ನ ಓವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಕಳೆದ ಒಂದು ದಶಕದಿಂದ ಐಸಿಸಿ ಪ್ರಶಸ್ತಿ ಗೆಲ್ಲದ ಭಾರತ ತಂಡಕ್ಕೆ ಈ ಪಂದ್ಯ ಮಹತ್ವದ್ದಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಕ್ಕೂ ಮುನ್ನ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನು ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಹಾಡಿ ಹೊಗಳಿದ್ದಾರೆ.

IND vs AUS WTC Final

ವಿರಾಟ್ ಕೊಹ್ಲಿಯ ಬಲವಾದ ಆಟದ ಬದ್ಧತೆಯು ಅವರನ್ನು ಇತರ ಆಟಗಾರರಿಗಿಂತ ಎದ್ದು ಕಾಣುವಂತೆ ಮಾಡುತ್ತದೆ ಎಂದು ಆಸ್ಟ್ರೇಲಿಯಾ ಹಾಗೂ ಆರ್‌ಸಿಬಿ ವೇಗಿ ಜೋಶ್ ಹ್ಯಾಜಲ್‌ವುಡ್ ಹೇಳಿದ್ದಾರೆ.

ಎರಡು ವರ್ಷಗಳ ತಮ್ಮ ವೃತ್ತಿಜೀವನದ ಕಳಪೆ ಫಾರ್ಮ್‌ನಿಂದ ಹೊರಬಂದ ನಂತರ, ವಿರಾಟ್ ಕೊಹ್ಲಿ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ರನ್‌ಗಳನ್ನು ಬಾರಿಸುತ್ತಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ 2023ರ ಐಪಿಎಲ್ ಋತುವಿನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿ ಕಂಡುಬಂದರು.

ಭಾರತೀಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡಕ್ಕಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು ತಮ್ಮ ಫ್ರಾಂಚೈಸಿಗಾಗಿ 14 ಪಂದ್ಯಗಳಲ್ಲಿ 53.25ರ ಸರಾಸರಿಯಲ್ಲಿ 639 ರನ್ ಗಳಿಸಿದರು.

IND vs AUS WTC Final

ಇನ್ನು ಐಪಿಎಲ್ ಲೀಗ್ ಪಂದ್ಯಗಳ ಕೊನೆಯ ದಿನದಂದು ಆರ್‌ಸಿಬಿ ಪ್ಲೇಆಫ್‌ಗೆ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿತು. ಆದರೆ ವಿರಾಟ್ ಕೊಹ್ಲಿ ಪಂದ್ಯಾವಳಿಯ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಎರಡು ಸತತ ಎರಡು ಶತಕಗಳನ್ನು ಬಾರಿಸಿ ಬ್ಯಾಟಿಂಗ್‌ನಲ್ಲಿ ಮಿಂಚು ಹರಿಸಿದರು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಪ್ರಮುಖ ವಿಕೆಟ್‌ಗಳಲ್ಲಿ ಭಾರತೀಯ ತಾರೆ ವಿರಾಟ್ ಕೊಹ್ಲಿ ಕೂಡ ಒಬ್ಬರಾಗುತ್ತಾರೆ. ಕೊಹ್ಲಿಯ ಆರ್‌ಸಿಬಿ ತಂಡದ ಸಹ ಆಟಗಾರ ಜೋಶ್ ಹ್ಯಾಜಲ್‌ವುಡ್‌ಗೆ ದೊಡ್ಡ ವಿಕಟ್ ಪಡೆಯುವ ಜವಾಬ್ದಾರಿಯನ್ನು ನಿರ್ವಹಿಸಬಹುದು.

WTC ಫೈನಲ್: ಕೊಹ್ಲಿ, ರೋಹಿತ್, ಗಿಲ್ ಅಲ್ಲ: ಆಸ್ಟ್ರೇಲಿಯಾಗೆ ಈ ಭಾರತೀಯನೇ ಕಂಟಕ ಎಂದ ರಿಕಿ ಪಾಂಟಿಂಗ್!

ಐಸಿಸಿಯೊಂದಿಗೆ ಮಾತನಾಡಿದ ಆಸೀಸ್ ವೇಗಿ ಜೋಶ್ ಹ್ಯಾಜಲ್‌ವುಡ್‌, "ಕಳೆದ ಎರಡು ಋತುಗಳಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲು ಸಾಧ್ಯವಾಯಿತು. ಭಾರತೀಯ ಸ್ಟಾರ್ ಬ್ಯಾಟರ್‌ನ ಕೆಲಸದ ಬದ್ಧತೆಯು ಅವರನ್ನು ಉಳಿದವರಿಗಿಂತ ಎದ್ದು ಕಾಣುವಂತೆ ಮಾಡುತ್ತದೆ," ಎಂದು ಹೇಳಿದರು.

IND vs AUS WTC Final

ಜೋಶ್ ಹ್ಯಾಜಲ್‌ವುಡ್‌ ಅವರು 34 ವರ್ಷದ ವಿರಾಟ್ ಕೊಹ್ಲಿ ಫಿಟ್‌ನೆಸ್ ಮತ್ತು ಅವರ ಆಟದ ಇತರ ಅಂಶಗಳನ್ನು ಶ್ಲಾಘಿಸಿದರು. ಅಭ್ಯಾಸದ ವಿಷಯಕ್ಕೆ ಬಂದರೆ ವಿರಾಟ್ ಕೊಹ್ಲಿ ಎಲ್ಲರಿಗಿಂತ ಮೊದಲು ಬರುತ್ತಾರೆ ಮತ್ತು ಎಲ್ಲರಿಗಿಂತ ಕೊನೆಯವರಾಗಿ ನಿರ್ಗಮಿಸುತ್ತಾರೆ ಎಂದು ಹೇಳಿದರು.

"ವಿರಾಟ್ ಕೊಹ್ಲಿ ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಎಂದು ನಾನು ತಿಳಿದುಕೊಂಡಿದ್ದೇನೆ. ಅದು ಇತರ ಆಟಗಾರರಿಗಿಂತ ಎದ್ದು ಕಾಣುತ್ತದೆ," ಎಂದು ಜೋಶ್ ಹ್ಯಾಜಲ್‌ವುಡ್ ಐಸಿಸಿಗೆ ತಿಳಿಸಿದರು.

"ವಿರಾಟ್ ಕೊಹ್ಲಿ ಫಿಟ್ನೆಸ್ ಮೊದಲನೆಯದಾಗಿ ಮತ್ತು ನಂತರ ಅವರ ಕೆಲಸ ಕೌಶಲ್ಯ, ನಿರ್ದಿಷ್ಟವಾಗಿ ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಬೆವರು ಹರಿಸುತ್ತಾರೆ. ಅಭ್ಯಾಸದ ತೀವ್ರತೆಯು ಹೆಚ್ಚಿನ ಮಟ್ಟದಲ್ಲಿದೆ, ಹಾಗಾಗಿ ಎಲ್ಲರನ್ನು ಎಳೆಯುತ್ತಾರೆ. ಇದು ಇತರ ಆಟಗಾರರಿಗೆ ಪಾಠವಾಗಿದೆ ಮತ್ತು ಅವರೂ ಸುಧಾರಣೆ ಕಾಣಲು ನೆರವಾಗುತ್ತದೆ," ಎಂದು ಆಸ್ಟ್ರೇಲಿಯ ವೇಗಿ ಜೋಶ್ ಹ್ಯಾಜಲ್‌ವುಡ್‌ ಅಭಿಪ್ರಾಯಪಟ್ಟಿದ್ದಾರೆ.

Story first published: Wednesday, May 31, 2023, 17:00 [IST]
Other articles published on May 31, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+