
ರಿಷಭ್ ಪಂತ್ 128 ಪಂದ್ಯಗಳಲ್ಲಿ 4021 ರನ್
ಇನ್ನೂ ಈ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4000 ರನ್ ಗಳಿಸಿದ ಭಾರತದ ಎರಡನೇ ವಿಕೆಟ್ ಕೀಪರ್ ಎನಿಸಿಕೊಂಡರು. ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಆರಂಭಿಕ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಎಡಗೈ ಆಟಗಾರ ಈ ಸಾಧನೆ ಮಾಡಿದರು.
ಟೆಸ್ಟ್ ಮಾದರಿಯಲ್ಲಿ 4000ಕ್ಕೂ ಅಧಿಕ ರನ್ ಸಾಧನೆ ಮಾಡಿದ ಎಂಎಸ್ ಧೋನಿ ಭಾರತದ ಏಕೈಕ ಕೀಪರ್ ಆಗಿದ್ದರು. ಅವರು 535 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 15 ಶತಕಗಳು ಮತ್ತು 108 ಅರ್ಧ ಶತಕಗಳೊಂದಿಗೆ 44.74 ಸರಾಸರಿಯಲ್ಲಿ 17,092 ರನ್ ಗಳಿಸಿದ್ದಾರೆ.

ಆರು ಶತಕಗಳು ಮತ್ತು 15 ಅರ್ಧಶತಕ
ಇಲ್ಲಿಯವರೆಗೆ 128 ಪಂದ್ಯಗಳಲ್ಲಿ ರಿಷಭ್ ಪಂತ್ 33.78 ಸರಾಸರಿಯಲ್ಲಿ ಆರು ಶತಕಗಳು ಮತ್ತು 15 ಅರ್ಧ ಶತಕಗಳೊಂದಿಗೆ 4021 ರನ್ ಗಳಿಸಿದ್ದಾರೆ ಮತ್ತು ಅಜೇಯ 159 ರನ್ ಅತ್ಯಧಿಕ ರನ್ ಆಗಿದೆ.
ಬುಧವಾರ ರಿಷಭ್ ಪಂತ್ 45 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 46 ರನ್ ಗಳಿಸಿ ಔಟಾದರು. ಭಾರತವು ಶುಭಮನ್ ಗಿಲ್, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಅವರ ಆರಂಭಿಕ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡ ನಂತರ ಪಂತ್ ಅವರು ಚೇತೇಶ್ವರ ಪೂಜಾರ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 64 ರನ್‌ಗಳ ಜೊತೆಯಾಟ ನೀಡಿದರು.

ರಿಷಭ್ ಪಂತ್ 2017ರಲ್ಲಿ ತಮ್ಮ ಚೊಚ್ಚಲ ಪಂದ್ಯ
ಮೂರು ಪಂದ್ಯಗಳ ಏಕದಿನ ಸರಣಿಯನ್ನು ಬಾಂಗ್ಲಾದೇಶ 2-1 ಅಂತರದಿಂದ ಗೆದ್ದಿದೆ. ಈ ವೇಳೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿರುವ ಮೆಹಿದಿ ಹಸನ್ ಮಿರಾಜ್ ಅವರ ಬೌಲಿಂಗ್ ದಾಳಿಯನ್ನು ಎದುರಿಸುತ್ತಿರುವಾಗ ರಿಷಭ್ ಪಂತ್ ವಿಕೆಟ್ ನೀಡಿದರು.
ರಿಷಭ್ ಪಂತ್ 2017ರಲ್ಲಿ ತಮ್ಮ ಚೊಚ್ಚಲ ಪಂದ್ಯವಾಡಿದರು ಮತ್ತು ಪ್ರಾರಂಭದಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ಅವರು ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದಾರೆ.


Click it and Unblock the Notifications
