IND vs BAN 2nd ODI: ಭಾರತ ಗೆಲ್ಲಲೇಬೇಕಾದ ಪಂದ್ಯಕ್ಕೆ ಮಳೆ ಕಾಟ?; ಹೇಗಿದೆ ಹವಾಮಾನ, ಸಂಭಾವ್ಯ 11ರ ಬಳಗ

ಬುಧವಾರ, ಡಿಸೆಂಬರ್ 7ರಂದು ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯವು ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ತಂಡ ಒಂದು ವಿಕೆಟ್‌ನಿಂದ ಪ್ರವಾಸಿ ಭಾರತ ತಂಡವನ್ನು ಸೋಲಿಸಿತು. ಇದೀಗ ಎರಡನೇ ಪಂದ್ಯವನ್ನು ಗೆದ್ದು ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿ ಬಾಂಗ್ಲಾದೇಶವಿದೆ.
ಇತ್ತ ಭಾರತ ತಂಡವು ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಎರಡನೇ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಬೇಕಿದೆ. ಹೀಗಾಗಿ ಪಂದ್ಯ ಆರಂಭಗೊಳ್ಳುವ ಮೊದಲು ಮಿರ್‌ಪುರದ ಮಳೆ ಸಾಧ್ಯತೆ ಮತ್ತು ಹವಾಮಾನ ವರದಿಯನ್ನು ತಿಳಿದುಕೊಳ್ಳಬೇಕಿದೆ.

ಭಾರತ vs ಬಾಂಗ್ಲಾದೇಶ 2ನೇ ಏಕದಿನ ಪಂದ್ಯ ಮಳೆಯಿಂದ ರದ್ದಾಗಲಿದೆಯೇ?
ಹವಾಮಾನ ವರದಿ ಪ್ರಕಾರ, ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಮಳೆಯ ಅಡ್ಡಿ ಕಡಿಮೆ ಇದೆ.
ಭಾರತ vs ಬಾಂಗ್ಲಾದೇಶ 2ನೇ ಏಕದಿನ ಪಂದ್ಯದ ಸಮಯದಲ್ಲಿ ತಾಪಮಾನ ಹೇಗಿದೆ?
2ನೇ ಏಕದಿನ ಪಂದ್ಯದ ವೇಳೆ ಸ್ಥಳದಲ್ಲಿ ತಾಪಮಾನವು ತುಂಬಾ ಸಾಮಾನ್ಯವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಮುನ್ಸೂಚನೆಯ ತೇವಾಂಶವು 41%ರಿಂದ 54% ರವರೆಗೆ ಇರುತ್ತದೆ. ಪಂದ್ಯದುದ್ದಕ್ಕೂ ತಾಪಮಾನವು 26 ಮತ್ತು 27 ಡಿಗ್ರಿಗಳ ನಡುವೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಭಾರತ vs ಬಾಂಗ್ಲಾದೇಶ 2ನೇ ಪಂದ್ಯದಲ್ಲಿ ಟಾಸ್ ನಿರ್ಣಾಯಕ?
ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಿದ 114 ಏಕದಿನ ಪಂದ್ಯಗಳಲ್ಲಿ 60 ತಂಡಗಳು ಚೇಸಿಂಗ್‌ನಲ್ಲಿ ಗೆದ್ದಿವೆ. 53 ನಿದರ್ಶನಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವು ಗೆದ್ದಿದೆ. ಅನುಪಾತವು ಅಷ್ಟು ದೊಡ್ಡದಲ್ಲದಿದ್ದರೂ ಮತ್ತು ಟಾಸ್ ಕೊನೆಯಲ್ಲಿ ಗಮನಾರ್ಹ ಪ್ರಭಾವ ಬೀರಲಿದೆ.
2ನೇ ಏಕದಿನ ಪಂದ್ಯವು ಢಾಕಾದ ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ಸ್ಥಳೀಯ ಕಾಲಮಾನ ಬೆಳಗ್ಗೆ 11:30 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ.

ಭಾರತ vs ಬಾಂಗ್ಲಾದೇಶ 2ನೇ ಪಂದ್ಯಕ್ಕೆ ಸಂಭಾವ್ಯ ಆಡುವ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಸೇನ್, ಶಹಬಾಜ್ ಅಹ್ಮದ್, ದೀಪಕ್ ಚಹಾರ್ ಮತ್ತು ಮೊಹಮ್ಮದ್ ಸಿರಾಜ್.
ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್ (ನಾಯಕ), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ ರಿಯಾದ್, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ಎಬಾಡೋತ್ ಹೊಸೈನ್ ಮತ್ತು ಹಸನ್ ಮಹಮ್ಮದ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications