For Quick Alerts
ALLOW NOTIFICATIONS  
For Daily Alerts
 

IND vs BAN 2nd Test: ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಿದ ಬಾಂಗ್ಲಾದೇಶದ U-19 ಕ್ರಿಕೆಟಿಗರು

IND vs BAN 2nd Test: Bangladesh U-19 Cricketers Meet Virat Kohli In Mirpur

ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯದ ಮುನ್ನಾದಿನದಂದು ಮಿರ್‌ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ತಂಡದ ಅಭ್ಯಾಸ ಅವಧಿಯಲ್ಲಿ ಬಾಂಗ್ಲಾದೇಶದ ಯುವ ಕ್ರಿಕೆಟಿಗರು ವಿರಾಟ್ ಕೊಹ್ಲಿಯನ್ನು ಭೇಟಿಯಾಗಿ ಶುಭಾಶಯ ಕೋರಿದರು.

ಬಾಂಗ್ಲಾದೇಶದ ಯುವ ಕ್ರಿಕೆಟಿಗರು ಭಾರತ ತಂಡದ ಮಾಜಿ ನಾಯಕನ ಜೊತೆ ಛಾಯಾಚಿತ್ರಕ್ಕೆ ಪೋಸ್ ನೀಡಿದರು. ಇದು ಯುವ ಪೀಳಿಗೆಗೆ ಸ್ಪೂರ್ತಿ ಎಂದು ಬಿಸಿಸಿಐ ತಿಳಿಸಿದೆ.

ವಿರಾಟ್ ಕೊಹ್ಲಿ ಆಗಾಗ ಅಭಿಮಾನಿಗಳಿಗೆ ಸೆಲ್ಫಿ ಮತ್ತು ಆಟೋಗ್ರಾಫ್‌ಗಳಿಗೆ ಸಮಯ ಮೀಸಲಿಡುತ್ತಾರೆ ಮತ್ತು ವಿಶ್ವ ಕ್ರಿಕೆಟ್‌ನ ರನ್ ಮಷಿನ್ ವಿರಾಟ್ ಕೊಹ್ಲಿ ಮಿರ್‌ಪುರದಲ್ಲಿ ಯುವ ಕ್ರಿಕೆಟಿಗರಿಗೆ ಸಲಹೆ ನೀಡುವ ಅವಕಾಶವನ್ನು ಕಳೆದುಕೊಳ್ಳಲಿಲ್ಲ.

IND vs BAN 2nd Test: Bangladesh U-19 Cricketers Meet Virat Kohli In Mirpur

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಬೇಟಿಯ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ಬಾಂಗ್ಲಾದೇಶ ಅಂಡರ್-19 ತಂಡವು ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಮತ್ತು ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಭೇಟಿ ಮಾಡುವ ಅವಕಾಶವನ್ನು ಸಹ ಹೊಂದಿದ್ದರು ಎಂದು ತಿಳಿಸಿದೆ.

ಬಾಂಗ್ಲಾದೇಶದ ಅಂಡರ್-19 ಕ್ರಿಕೆಟಿಗರು ಭಾರತದ ಅಭ್ಯಾಸದ ನಂತರ ವಿರಾಟ್ ಕೊಹ್ಲಿಯೊಂದಿಗೆ ಪೋಸ್ ನೀಡಿದಾಗ ಬೆರಗಾಗಿದ್ದಾರೆ ಎಂಬುದು ಛಾಯಾಚಿತ್ರಗಳಿಂದ ಸ್ಪಷ್ಟವಾಗಿದೆ. 2ನೇ ಟೆಸ್ಟ್‌ನ ಮುನ್ನಾದಿನದಂದು ತೀವ್ರವಾದ ಬ್ಯಾಟಿಂಗ್ ಅವಧಿಯ ನಂತರ ಕೊಹ್ಲಿ ತಮ್ಮ ಭುಜದ ಸುತ್ತ ಟವೆಲ್ ಸುತ್ತಿಕೊಂಡು ಆಡುತ್ತಿದ್ದರು.

ವಿರಾಟ್ ಕೊಹ್ಲಿ ಟೆಸ್ಟ್‌ನಲ್ಲಿ ಸ್ಥಿರತೆಗಾಗಿ ಇನ್ನೂ ಹೆಣಗಾಡುತ್ತಿದ್ದಾರೆ. ಚಟ್ಟೋಗ್ರಾಮ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಮ್ ಅವರ ಬೌಲಿಂಗ್‌ನಲ್ಲಿ ಮಾಜಿ ನಾಯಕ 1 ರನ್‌ ಗಳಿಸಿ ಔಟಾದರು. ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಸ್ಪಿನ್ನರ್‌ಗಳ ವಿರುದ್ಧ ದೊಡ್ಡ ರನ್ ಗಳಿಸಲು ಬಯಸುತ್ತಿದ್ದಾರೆ ಮತ್ತು ಬ್ಯಾಟಿಂಗ್ ಸೂಪರ್‌ಸ್ಟಾರ್ ಡಿಸೆಂಬರ್ 22ರಿಂದ ಪ್ರಾರಂಭವಾಗುವ 2ನೇ ಟೆಸ್ಟ್‌ನಲ್ಲಿ ದೊಡ್ಡ ಮೊತ್ತ ಗಳಿಸಲು ಎದುರು ನೋಡುತ್ತಿದ್ದಾರೆ.

IND vs BAN 2nd Test: Bangladesh U-19 Cricketers Meet Virat Kohli In Mirpur

ಮೊದಲ ಟೆಸ್ಟ್‌ನಲ್ಲಿ ಭಾರತದ 188 ರನ್‌ಗಳ ಗೆಲುವಿನಲ್ಲಿ ವೇಗದ 46 ರನ್ ಗಳಿಸಿದ ನಂತರ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಸ್ವಲ್ಪ ನಿರಾಳವಾಗಿದ್ದರು. ಇನ್ನು ಕುಲದೀಪ್ ಯಾದವ್ ಮೊದಲ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್ ಪಡೆದರು. ಫೆಬ್ರವರಿ 2021ರ ನಂತರ ಮೊದಲ ಬಾರಿಗೆ ಸುದೀರ್ಘ ಸ್ವರೂಪಕ್ಕೆ ಮರಳಿದರು.

ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ರೇಸ್‌ನಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಲು ಭಾರತ ಪ್ರಯತ್ನಿಸುತ್ತಿದೆ. ಭಾರತವು ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ನಂತರ 2ನೇ ಸ್ಥಾನದಲ್ಲಿದೆ.

Story first published: Wednesday, December 21, 2022, 22:02 [IST]
Other articles published on Dec 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+