Ishan Kishan: ದ್ವಿಶತಕದ ವೇಳೆ ವಿರಾಟ್ ಕೊಹ್ಲಿ ನೀಡಿದ ಸಲಹೆ ನೆನೆದ ಇಶಾನ್ ಕಿಶನ್

ಶನಿವಾರ ಡಿಸೆಂಬರ್ 10ರಂದು ನಡೆದ ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಅವಕಾಶ ಪಡೆದು ಇನ್ನಿಂಗ್ಸ್ ಆರಂಭಿಸಿದ ಇಶಾನ್ ಕಿಶನ್ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ದಾಖಲೆಯ ದ್ವಿಶತಕ ಸಿಡಿಸಿದರು.
ಮಾಜಿ ನಾಯಕ ವಿರಾಟ್ ಕೊಹ್ಲಿ ಜೊತೆ ಸೇರಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್ ಎರಡನೇ ವಿಕೆಟ್‌ಗೆ ದಾಖಲೆಯ ಜೊತೆಯಾಟವನ್ನು ನೀಡಿದರು. ಬೌಂಡರಿ, ಸಿಕ್ಸರ್‌ಗಳ ಮೂಲಕ ಬಾಂಗ್ಲಾದೇಶ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಇಶಾನ್ ಕಿಶನ್ ಕೇವಲ 126 ಎಸೆತಗಳಲ್ಲಿ ದ್ವಿಶತಕದ ಮೈಲಿಗಲ್ಲು ದಾಟಿದರು.
ಇಶಾನ್ ಕಿಶನ್ ಅತ್ಯಂತ ವೇಗವಾಗಿ ದ್ವಿಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ 138 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ದಾಖಲೆಯನ್ನು ಇದೀಗ ಭಾರತದ ಇಶಾನ್ ಕಿಶನ್ ಮುರಿದಿದ್ದಾರೆ.

ಸಿಂಗಲ್ಸ್ ರನ್ ತೆಗೆದುಕೊಳ್ಳುವಂತೆ ಸನ್ನೆ ಮಾಡುತ್ತಿದ್ದರು
ತಮ್ಮ ಚೊಚ್ಚಲ ದ್ವಿಶತಕದ ವೇಳೆ ವಿರಾಟ್ ಕೊಹ್ಲಿ ತನಗೆ ಹೇಗೆ ಸಲಹೆ ನೀಡುತ್ತಿದ್ದರು ಎಂಬುದನ್ನು ಇಶಾನ್ ಕಿಶನ್ ಬಹಿರಂಗಪಡಿಸಿದ್ದು, ಲೆಜೆಂಡರಿ ಬ್ಯಾಟರ್ ತನಗೆ ದೊಡ್ಡ ಶಾಟ್ ವೇಳೆ ಔಟಾಗದಂತೆ ಮುನ್ನೆಚ್ಚರಿಕೆ ವಹಿಸಿ ಸಿಂಗಲ್ಸ್ ರನ್ ತೆಗೆದುಕೊಳ್ಳುವಂತೆ ಸನ್ನೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
24 ವರ್ಷದ ಇಶಾನ್ ಕಿಶನ್ ಚಟ್ಟೋಗ್ರಾಮ್‌ನಲ್ಲಿ ನಡೆದ ಪಂದ್ಯದಲ್ಲಿ ಬರೋಬ್ಬರಿ 210 ರನ್ ಗಳಿಸಿ ಬಾಂಗ್ಲಾದೇಶದ ಬೌಲರ್‌ಗಳ ಬೆವರಿಳಿಸಿದರು.

ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ತಮ್ಮ ಶತಕದ ಬರ ಕೊನೆ
ಇದೇ ವೇಳೆ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ತಮ್ಮ ಶತಕದ ಬರವನ್ನು ಕೊನೆಗೊಳಿಸಿದರು ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ಗಿಂತ (71)ಹೆಚ್ಚಿನ ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ (72) ಅಳಿಸಿ ಹಾಕಿದರು.
ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಶಿಖರ್ ಧವನ್ ಅವರ ವಿಕೆಟ್ ಬೇಗನೆ ಕಳೆದುಕೊಂಡ ನಂತರ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ ಅವರು ಎಡಗೈ ಬ್ಯಾಟರ್ ಇಶಾನ್ ಕಿಶನ್ ಜೊತೆಗೂಡಿ ಎರಡನೇ ವಿಕೆಟ್‌ಗೆ 290 ರನ್‌ಗಳ ಜೊತೆಯಾಟ ನೀಡಿದರು.

ಶುಭಮನ್ ಗಿಲ್ ಅವರೊಂದಿಗೆ ಮಾತನಾಡಿದ ಇಶಾನ್ ಕಿಶನ್
ಬಿಸಿಸಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ಶುಭಮನ್ ಗಿಲ್ ಅವರೊಂದಿಗೆ ಮಾತನಾಡಿದ ಇಶಾನ್ ಕಿಶನ್, ವಿರಾಟ್ ಕೊಹ್ಲಿಯೊಂದಿಗಿನ ಜೊತೆಯಾಟ ಮತ್ತು ಅವರು ಹೇಗೆ ಸಲಹೆ ನೀಡುತ್ತಿದ್ದರು ನೀಡಿದರು ಎಂಬುದನ್ನು ತಿಳಿಸಿದರು.
ಬ್ಯಾಟಿಂಗ್ ವೇಳೆ ಆಗಾಗ ಸಿಂಗಲ್ಸ್ ತೆಗೆದುಕೊಳ್ಳಲು ಮತ್ತು ಸ್ಟ್ರೈಕ್ ತಿರುಗಿಸಲು ಸಲಹೆ ನೀಡುವಂತೆ ಇಶಾನ್ ಕಿಶನ್ ಮನವಿ ಮಾಡಿದ್ದರು. ಏಕೆಂದರೆ ತಾನು ದೊಡ್ಡ ಶಾಟ್‌ಗಳನ್ನು ಆಡಲು ಪ್ರಯತ್ನಿಸುತ್ತೇನೆ ಎಂದಿದ್ದರು.
ಕಿಶನ್ ಅವರ ಕೋರಿಕೆಯನ್ನು ಒಪ್ಪಿಕೊಂಡಿದ್ದ ವಿರಾಟ್ ಕೊಹ್ಲಿ ನಾನ್ ಸ್ಟ್ರೈಕರ್‌ನ ತುದಿಯಲ್ಲಿ ನಿಂತು ಸನ್ನೆಗಳ ಮೂಲಕ ಸ್ಟ್ರೈಕ್ ಅನ್ನು ತಿರುಗಿಸಲು ಹೇಳುತ್ತಿದ್ದರು. ಇದು ದೊಡ್ಡ ಜೊತೆಯಾಟ ನೀಡಲು ಮತ್ತು ತನ್ನನ್ನು ಬೇಗ ಔಟಾಗದಂತೆ ಮಾಡಲು ಸಹಾಯವಾಯಿತು ಎಂದರು.

ಅದ್ಭುತ ಗೆಲುವು, ಇಶಾನ್ ಅವರಿಂದ ಸೂಪರ್ ನಾಕ್
"ದಯವಿಟ್ಟು ಸಿಂಗಲ್ಸ್ ತೆಗೆದುಕೊಳ್ಳುವಂತೆ ಹೇಳುತ್ತಾ ಇರಿ ಎಂದು ನಾನು ವಿರಾಟ್ ಕೊಹ್ಲಿಗೆ ಆರಂಭದಲ್ಲಿ ಹೇಳಿದ್ದೆ. ಇಲ್ಲದಿದ್ದರೆ, ನಾನು ಒಳಗೊಳಗೆ ಬಿಗ್ ಶಾಟ್ ಹೊಡೆಯಲು ಅಂದುಕೊಳ್ಳುತ್ತಿರುತ್ತೇನೆ. ಆದ್ದರಿಂದ ದಯವಿಟ್ಟು ನನಗೆ ಮಾರ್ಗದರ್ಶನ ನೀಡಿ ಎಂದು ಕೇಳಿದ್ದೆ. ಇದಕ್ಕೆ ಕೊಹ್ಲಿ ಒಪ್ಪಿ, ನಾನ್ ಸ್ಟ್ರೈಕರ್‌ನ ತುದಿಯಿಂದ ಅವರು ಸಿಂಗಲ್‌ನ ಹಾವಭಾವವನ್ನು ತೋರಿಸುತ್ತಲೇ ಇದ್ದರು. ಇದು ನನಗೆ ದ್ವಿಶತಕ ಬಾರಿಸಲು ನೆರವಾಯಿತು," ಎಂದು ಇಶಾನ್ ಕಿಶನ್ ಹೇಳಿದ್ದಾರೆ.
ಭಾರತ ತಂಡದ ಗೆಲುವಿನ ಬಗ್ಗೆ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕುವ ಮೂಲಕ ಸಂಭ್ರಮಿಸಿದರು ಮತ್ತು ಇಶಾನ್ ಕಿಶನ್ ಅದ್ಭುತ ಪ್ರದರ್ಶನಕ್ಕಾಗಿ ಅಭಿನಂದಿಸಿದ್ದಾರೆ. "ಅದ್ಭುತ ಗೆಲುವು. ಇಶಾನ್ ಅವರಿಂದ ಸೂಪರ್ ನಾಕ್. ಟೆಸ್ಟ್‌ಗೆ ಹೋಗೋಣ" ಎಂದು ವಿರಟ್ ಕೊಹ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತ ತಂಡ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಸೋತಿದ್ದು, ಇದೀಗ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಡಿಸೆಂಬರ್ 14ರಂದು ಟೆಸ್ಟ್ ಪಂದ್ಯ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications