For Quick Alerts
ALLOW NOTIFICATIONS  
For Daily Alerts
 

IND vs BAN: ಒಂದು ಐಪಿಎಲ್‌ನಲ್ಲಿ ಮಿಂಚಿದ ಮಾತ್ರಕ್ಕೆ ಭಾರತದ ಕ್ಯಾಪ್ ನೀಡುವ ಅಗತ್ಯವಿಲ್ಲ; ಮಾಜಿ ಕ್ರಿಕೆಟಿಗ

IND vs BAN: Former Cricketer Wasim Jaffer Reaction On Team India Selection Process

2023ರ ಐಪಿಎಲ್‌ಗಾಗಿ ಇದೇ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಇದರಲ್ಲಿ ಹತ್ತು ಫ್ರಾಂಚೈಸಿಗಳು ಪಾಲ್ಗೊಳ್ಳಲಿದ್ದಾರೆ. ಯಾವ ಆಟಗಾರರು ಯಾವ ತಂಡದ ಪಾಲಾಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಇದೇ ವೇಳೆ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವಾಸಿಂ ಜಾಫರ್ ಅವರು ಐಪಿಎಲ್ ಪ್ರದರ್ಶನ ಆಧರಿಸಿ ಭಾರತ ತಂಡಕ್ಕೆ ಆಯ್ಕೆ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ ಅನ್ನು ಅಷ್ಟು ಸುಲಭವಾಗಿ ಮತ್ತು ಜರೂರಾಗಿ ನೀಡಬಾರದು. ಒಂದು ಅತ್ಯುತ್ತಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನ ಪ್ರದರ್ಶನದ ಆಧಾರದ ಮೇಲೆ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಬಾರದು ಎಂದು ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್ ಹೊರತುಪಡಿಸಿ ಸತತವಾಗಿ ಎರಡು-ಮೂರು ದೇಶೀಯ ಋತುಗಳಲ್ಲಿ ಸ್ಥಿರ ಪ್ರದರ್ಶನ ನೀಡಲು ಆಟಗಾರರಿಗೆ ಸಮಯ ನೀಡಬೇಕು ಎಂದು ವಾಸಿಂ ಜಾಫರ್ ತಿಳಿಸಿದರು.

"ಭಾರತ ಕ್ರಿಕೆಟ್ ತಂಡದ ಆಯ್ಕೆಗಾರರು, ತಮ್ಮ 1ನೇ ಐಪಿಎಲ್ ಋತುವಿನಲ್ಲಿ ಯಾರು ಉತ್ತಮವಾಗಿ ಆಡುತ್ತಾರೋ ಅಂತಹ ಆಟಗಾರರನ್ನು ಆಯ್ಕೆ ಮಾಡುವ ಅಗತ್ಯವಿಲ್ಲ. ಅವರು ದೇಶೀಯ ಟೂರ್ನಿಗಳ 2ರಿಂದ 3 ಸೀಸನ್‌ಗಳಲ್ಲಿ ಸ್ಥಿರ ಪ್ರದರ್ಶನ ನೀಡಲಿ. ಅವರು ಸಂಪೂರ್ಣವಾಗಿ ಸಿದ್ಧರಾಗಬೇಕು. ಒಂದು ಐಪಿಎಲ್ ಪ್ರದರ್ಶನದಿಂದ ಆಟಗಾರರಿಗೆ ಭಾರತದ ಕ್ಯಾಪ್ ಅನ್ನು ಸುಲಭವಾಗಿ ಮತ್ತು ತ್ವರಿತವಾಗಿ ನೀಡಬಾರದು, ಅದನ್ನು ಅವರು ಗಳಿಸುವಂತಾಗಬೇಕು," ಎಂದು ವಾಸಿಂ ಜಾಫರ್ ಟ್ವೀಟ್ ಮಾಡಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಭಾರತ ರಾಷ್ಟ್ರೀಯ ತಂಡವು ಗಮನಾರ್ಹವಾಗಿ ಅನೇಕ ಆಟಗಾರರನ್ನು ಪ್ರಯತ್ನಿಸಿದೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಬಹಳಷ್ಟು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಈ ಆಟಗಾರರಲ್ಲಿ ಶಹಬಾಜ್ ಅಹ್ಮದ್, ಉಮ್ರಾನ್ ಮಲಿಕ್, ಅರ್ಶ್‌ದೀಪ್ ಸಿಂಗ್, ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್‌ವಾಡ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ದೀಪಕ್ ಹೂಡಾ ಅವರಂತಹ ಮುಂತಾದ ಆಟಗಾರರು ಸೇರಿದ್ದಾರೆ.

ಇನ್ನು ಇದೇ ಡಿಸೆಂಬರ್ 23ರಂದು ನಡೆಯುವ ಐಪಿಎಲ್‌ನ ಮಿನಿ ಹರಾಜಿನಲ್ಲಿ ಒಟ್ಟು 991 ಆಟಗಾರರು ಹೆಸರು ನೋಂದಾಯಿಸಿದ್ದಾರೆ. ಅದರಲ್ಲಿ 714 ಭಾರತೀಯ ಮತ್ತು 277 ವಿದೇಶಿ ಆಟಗಾರರು ಸೇರಿದ್ದಾರೆ. ಈ ಆಟಗಾರರ ಪಟ್ಟಿಯಲ್ಲಿ 185 ಕ್ಯಾಪ್ಡ್, 786 ಅನ್‌ಕ್ಯಾಪ್ಡ್ ಮತ್ತು 20 ಅಸೋಸಿಯೇಟ್ ನೇಷನ್ಸ್ ಆಟಗಾರರು ಸೇರಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.

Story first published: Saturday, December 3, 2022, 22:15 [IST]
Other articles published on Dec 3, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+