Ishan Kishan Records : ಇಶಾನ್ ಕಿಶನ್ ಬಾರಿಸಿದ್ದು ಒಂದು ದ್ವಿಶತಕ, ಅಳಿಸಿ ಹಾಕಿದ್ದು ಹಲವು ದಾಖಲೆ!

ಕೈಬೆರಳು ಗಾಯದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬದಲಿಗೆ ಅವಕಶಾ ಪಡೆದುಕೊಂಡ ಎಡಗೈ ಬ್ಯಾಟರ್ ಇಶಾನ್ ಕಿಶನ್ ಚಟ್ಟೋಗ್ರಾಮ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಏಕದಿನ ದ್ವಿಶತಕ ಸಿಡಿಸಿದರು.
ಇಶಾನ್ ಕಿಶನ್ ಕೇವಲ 131 ಎಸೆತಗಳಲ್ಲಿ 24 ಬೌಂಡರಿ ಮತ್ತು 10 ಸಿಕ್ಸರ್‌ಗಳ ಮೂಲಕ ಬರೋಬ್ಬರಿ 210 ರನ್ ಗಳಿಸಿ ಔಟಾದರು. ಈ ದ್ವಿಶತಕದ ದಾರಿಯಲ್ಲಿ ಹಲವು ವಿಶ್ವ ದಾಖಲೆಗಳನ್ನು ಅಳಿಸಿ ಹಾಕಿದರು.
ಇಶಾನ್ ಕಿಶನ್ ಕೇವಲ 126 ಎಸೆತಗಳಲ್ಲಿ 200 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿದರು. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ 138 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ದಾಖಲೆಯನ್ನು ಇದೀಗ ಭಾರತದ ಇಶಾನ್ ಕಿಶನ್ ಮುರಿದಿದ್ದಾರೆ.

ದೊಡ್ಡ ಹೊಡೆತಗಳ ಮೂಲಕ ರನ್ ವೇಗಕ್ಕೆ ಒತ್ತುಕೊಟ್ಟ ಇಶಾನ್ ಕಿಶನ್
ಬಾಂಗ್ಲಾದೇಶ ವಿರುದ್ಧ ನಿಧಾನವಾಗಿ ಬ್ಯಾಟಿಂಗ್ ಆರಂಭಿಸಿದರು. ಆದರೆ ತಮ್ಮ ಅರ್ಧಶತಕ ಪೂರೈಸಿದ ನಂತರ ದೊಡ್ಡ ಹೊಡೆತಗಳ ಮೂಲಕ ರನ್ ವೇಗಕ್ಕೆ ಒತ್ತುಕೊಟ್ಟರು. ಇನ್ನು ಶತಕದ ನಂತರ ಅವರನ್ನು ದ್ವಿಶತಕ ಬಾರಿಸುವವರೆಗೂ ಅವರನ್ನು ತಡೆಯಲೂ ಯಾರಿದಂಲೂ ಆಗಲಿಲ್ಲ.
ಇದೇ ವೇಳೆ ಇಶಾನ್ ಕಿಶನ್ ಹಲವು ವಿಶ್ವದಾಖಲೆಗಳನ್ನು ಬ್ರೇಕ್ ಮಾಡಿದರು. ತನ್ನ ಚೊಚ್ಚಲ ದ್ವಿಶತಕದ ಮೂಲಕ ಮುರಿದ ಹಲವು ದಾಖಲೆಗಳ ಪಟ್ಟಿ ಇಲ್ಲಿವೆ.

ದ್ವಿಶತಕದ ಮೂಲಕ ಮುರಿದ ಹಲವು ದಾಖಲೆಗಳ ಪಟ್ಟಿ
1) ಕಡಿಮೆ ಏಕದಿನ ಪಂದ್ಯಗಳಲ್ಲಿ 200 ರನ್ ಗಳಿಸಿದ ಬ್ಯಾಟ್ಸ್‌ಮನ್
2) ಏಕದಿನ ಪಂದ್ಯದಲ್ಲಿ ಚೊಚ್ಚಲ 100 ರನ್ ಅನ್ನು 200 ಆಗಿ ಪರಿವರ್ತಿಸಿದ ಮೊದಲಿಗ
3) ಏಕದಿನ ಪಂದ್ಯದಲ್ಲಿ ಅತಿ ವೇಗದ 200 ರನ್ ಗಳಿಸಿದ ಆಟಗಾರ
4) ಏಕದಿನ ಪಂದ್ಯದಲ್ಲಿ 200 ರನ್ ಗಳಿಸಿದ ಮೊದಲ ಭಾರತೀಯ ಎಡಗೈ ಬ್ಯಾಟರ್
5) ಬಾಂಗ್ಲಾದೇಶದಲ್ಲಿ ಅತ್ಯಧಿಕ ಏಕದಿನ ವೈಯಕ್ತಿಕ ಸ್ಕೋರರ್
6) ಬಾಂಗ್ಲಾದೇಶ ವಿರುದ್ಧ ಅತಿ ಹೆಚ್ಚು ಏಕದಿನ ರನ್ ಬಾರಿಸಿದ ಬ್ಯಾಟರ್
7) ಬಾಂಗ್ಲಾದೇಶ ವಿರುದ್ಧ 200 ರನ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್
8) ಬಾಂಗ್ಲಾದೇಶದಲ್ಲಿ ಮೊದಲ ಏಕದಿನ 200 ರನ್ ಗಳಿಸಿದ ಬ್ಯಾಟರ್

ಏಕದಿನ ದ್ವಿಶತಕ ಗಳಿಸಿದ ನಾಲ್ಕನೇ ಭಾರತೀಯ ಇಶಾನ್ ಕಿಶನ್
ಇನ್ನು ಇಶಾನ್ ಕಿಶನ್ ಬಾಂಗ್ಲಾದೇಶ ವಿರುದ್ಧ ದ್ವಿಶತಕ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ರೋಹಿತ್ ಶರ್ಮಾ ನಂತರ ಏಕದಿನ ದ್ವಿಶತಕ ಗಳಿಸಿದ ನಾಲ್ಕನೇ ಭಾರತೀಯ ಆಟಗಾರನಾಗಿದ್ದಾರೆ.
ಹಾಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೂರು ಬಾರಿ ದ್ವಿಶತಕ ಬಾರಿಸಿರುವುದು ದೊಡ್ಡ ದಾಖಲೆಯಾಗಿದೆ. ಐವತ್ತು ಓವರ್‌ಗಳ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ದ್ವಿಶತಕ ಗಳಿಸಿದ ಮೊದಲ ಬ್ಯಾಟರ್ ಇಶಾನ್ ಕಿಶನ್ ಎಂಬುದು ಗಮನಾರ್ಹ.

ಏಕದಿನ ಪಂದ್ಯಗಳಲ್ಲಿ 44ನೇ ಶತಕ ಬಾರಿಸಿದ ವಿರಾಟ್ ಕೊಹ್ಲಿ
ಇನ್ನು ಇಶಾನ್ ಕಿಶನ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ ನಂತರ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ತಮ್ಮ ಬ್ಯಾಟಿಂಗ್ ಆರ್ಭಟ ಮುಂದುವರೆಸಿದರು.
ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ತಮ್ಮ 44ನೇ ಶತಕ ಬಾರಿಸಿ, ಮೂರು ವರ್ಷಗಳ ನಂತರ ಏಕದಿನ ಶತಕದ ಬರವನ್ನು ಕೊನೆಗೊಳಿಸಿದರು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ಗಿಂತ (71)ಹೆಚ್ಚಿನ ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ (72) ಅಳಿಸಿ ಹಾಕಿದರು.
ಇದೀಗ ವಿರಾಟ್ ಕೊಹ್ಲಿ ಅವರು ಭಾರತದ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರಿಗಿಂತ ಹೆಚ್ಚು ಅಂತಾರಾಷ್ಟ್ರೀಯ ಶತಕ ಬಾರಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಒಟ್ಟು 100 ಅಂತಾರಾಷ್ಟ್ರೀಯ ಶತಕಗಳಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications