IND vs BAN: ಬಾಂಗ್ಲಾ ಗೆಲುವಿಗಾಗಿ ಶ್ರಮಿಸಿತು; ಮೊದಲ ಟೆಸ್ಟ್ ಪಂದ್ಯದ ನಂತರ ಕೆಎಲ್ ರಾಹುಲ್ ಹೇಳಿದ್ದೇನು?

ಡಿಸೆಂಬರ್ 18ರಂದು ಭಾನುವಾರ ಚಟ್ಟೋಗ್ರಾಮ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಪ್ರವಾಸಿ ಭಾರತ ತಂಡ ಆತಿಥೇಯ ಬಾಂಗ್ಲಾದೇಶ ವಿರುದ್ಧ 188 ರನ್‌ಗಳ ಪ್ರಯಾಸದ ಗೆಲುವು ದಾಖಲಿಸಿ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತ ತಂಡದ ಗೆಲುವಿಗಾಗಿ ನಾಯಕ ಕೆಎಲ್ ರಾಹುಲ್ ಹರ್ಷ ವ್ಯಕ್ತಪಡಿಸಿದ್ದಾರೆ.
ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ ಪೂಜಾರ ಮತ್ತು ಶುಭಮನ್ ಗಿಲ್ ಅವರಿಗೆ ಕೆಎಲ್ ರಾಹುಲ್ ಅಭಿನಂದನೆ ಹೇಳಿದರು. ಇನ್ನು ಬಾಂಗ್ಲಾದೇಶ ತಂಡವು ತಮ್ಮ ತಂಡದ ಗೆಲುವಿಗಾಗಿ ಶ್ರಮಿಸಿದರು. ಆದರೆ ಭಾರತದ ಬೌಲಿಂಗ್ ಪಡೆ ಉತ್ತಮ ಪ್ರದರ್ಶನ ನೀಡಿತು. ಬೌಲರ್‌ಗಳಿಗೆ ಅಷ್ಟೊಂದು ಸಹಾಯ ಮಾಡದ ಚಟ್ಟೋಗ್ರಾಮ್ ಟ್ರ್ಯಾಕ್‌ನಲ್ಲಿ ವಿಕೆಟ್‌ಗಳನ್ನು ಪಡೆಯಲು ದೊಡ್ಡ ಮಾರ್ಗವನ್ನು ಕಂಡುಕೊಂಡಿತು.
ಅಂತಿಮವಾಗಿ ಭಾರತ ತಂಡ ಐದನೇ ದಿನದಂದು ಬಾಂಗ್ಲಾದೇಶ ತಂಡವನ್ನು 324 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಮೊದಲ ಟೆಸ್ಟ್ ಪಂದ್ಯವನ್ನು 188 ರನ್‌ಗಳಿಂದ ಗೆದ್ದಿದೆ.

ಏಕದಿನ ಸರಣಿ ನಾವು ಬಯಸಿದಂತೆ ನಡೆಯಲಿಲ್ಲ
ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಭಾರತೀಯ ನಾಯಕ ಕೆಎಲ್ ರಾಹುಲ್, "ನಾವು ಸ್ವಲ್ಪ ಸಮಯದವರೆಗೆ ಇಲ್ಲಿದ್ದೇವೆ. ಏಕದಿನ ಸರಣಿಯು ನಾವು ಬಯಸಿದಂತೆ ನಡೆಯಲಿಲ್ಲ. ಕಠಿಣ ಹೋರಾಟದ ಟೆಸ್ಟ್ ಪಂದ್ಯದ ಗೆಲುವಿಗಾಗಿ ನಾವು ನಿಜವಾಗಿಯೂ ಶ್ರಮಿಸಬೇಕಾಗಿತ್ತು. ನಾವು ಅದನ್ನು ಮಾಡಿದ್ದು ನಿಜಕ್ಕೂ ಸಂತೋಷವಾಗಿದೆ," ಎಂದು ತಿಳಿಸಿದರು.
"ಬ್ಯಾಟರ್‌ಗಳು ಆರಾಮವಾಗಿ ಬ್ಯಾಟಿಂಗ್ ಮಾಡುತ್ತಿರುವಂತೆ ತೋರುತ್ತಿದೆ. ಮೊದಲ ಮೂರು ದಿನಗಳಲ್ಲಿ ರನ್ ಗಳಿಸುವುದು ಕಷ್ಟಕರವಾಗಿತ್ತು. ಬಾಂಗ್ಲಾದೇಶ ತಂಡದ ಆರಂಭಿಕರು ಬ್ಯಾಟ್ ಮಾಡಿದ ರೀತಿ ಮತ್ತು ನಾವು ಕಷ್ಟಪಟ್ಟು ಬ್ಯಾಟಿಂಗ್ ಮಾಡಬೇಕಾಗಿತ್ತು. ನಮ್ಮ ಆಕ್ರಮಣಕಾರಿ ವಿಧಾನ ಅಳವಡಿಸಿಕಕೊಳ್ಳದಿದ್ದರೆ ನಮಗೆ ಯಾವುದೇ ಗೆಲುವು ಬರುವುದಿಲ್ಲ ಎಂದು ನಮಗೆ ತಿಳಿದಿತ್ತು. ನಾವು ಮೊದಲ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿದ್ದೇವೆ," ಎಂದರು.

ಶುಭಮನ್ ಗಿಲ್ ಮತ್ತು ಪೂಜಾರ ಅವರ ಶತಕಗಳು
"ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್ ಮತ್ತು ಚೇತೇಶ್ವರ ಪೂಜಾರ ಉತ್ತಮ ಬ್ಯಾಟಿಂಗ್ ಮಾಡಿದರು. ಇನ್ನು ಪಂತ್ ಪ್ರತಿದಾಳಿ ಕೂಡ ಚೆನ್ನಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಶುಭಮನ್ ಗಿಲ್ ಮತ್ತು ಪೂಜಾರ ಅವರ ಶತಕಗಳು ನಿಜವಾಗಿಯೂ ತಂಡಕ್ಕೆ ನೆರವಾಗಿದೆ. ಇನ್ನು ನಾವು ಬೌಲಿಂಗ್ ಮಾಡಿದ ರೀತಿತಿಂದ ತುಂಬಾ ಸಂತೋಷವಾಗಿದೆ. ಪಿಚ್ ನಿಜವಾಗಿಯೂ ಬೌಲರ್‌ಗಳಿಗೆ ಸಹಾಯ ಮಾಡಲಿಲ್ಲ, ಆದರೂ ಬೌಲರ್‌ಗಳು ವಿಕೆಟ್ ಪಡೆದರು," ಎಂದು ಕೆಎಲ್ ರಾಹುಲ್ ಅಭಿಪ್ರಾಯಪಟ್ಟರು.
ಗೆಲುವಿಗೆ 513 ರನ್ ಬೆನ್ನತ್ತಿದ ಬಾಂಗ್ಲಾದೇಶ ತಂಡ ಎರಡನೇ ಇನ್ನಿಂಗ್ಸ್ ಆರಂಭದಲ್ಲಿ 11.2 ಓವರ್‌ಗಳಲ್ಲಿ 52 ರನ್‌ಗಳನ್ನು ಸೇರಿಸಿತು. ಅನಂತರ 6 ವಿಕೆಟ್‌ಗೆ 272 ರನ್‌ಗಳಿಂದ ಐದನೇ ದಿನದಾಟವನ್ನು ಪುನರಾರಂಭಿಸಿದ ನಂತರ ಬೆಳಗಿನ ಅವಧಿಯಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು.

ಅಕ್ಷರ್ ಪಟೇಲ್ ಅಂತಿಮ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದರು
ಎರಡನೇ ಇನ್ನಿಂಗ್ಸ್‌ನಲ್ಲಿ ಶಕೀಬ್ ಅಲ್ ಹಸನ್ ಅವರ 84 ರನ್‌ಗಳ ಬ್ಯಾಟಿಂಗ್ ಪ್ರದರ್ಶನ ನೀಡಿದರೂ, ಅವರಿಗೆ ಮತ್ತೊಂದು ಕಡೆ ಉತ್ತಮ ಸಾಥ್ ನೀಡದ ಕಾರಣ ಭಾರತದ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ವಿರುದ್ಧ 324 ರನ್‌ಗಳಿಗೆ ಅಲೌಟ್ ಆಯಿತು.
ನಾಲ್ಕನೇ ದಿನದ ಅಂತ್ಯದ ವೇಳೆಗೆ ಅಕ್ಷರ್ ಪಟೇಲ್ ಮೂರು ವಿಕೆಟ್‌ಗಳನ್ನು ಕಬಳಿಸಿ ಪ್ರವಾಸಿ ಭಾರತವನ್ನು ಗೆಲುವಿನ ಗಡಿಗೆ ತಂದು ನಿಲ್ಲಿಸಿದ್ದರು. ಭಾರತದ ಪರ ಬೌಲಿಂಗ್‌ನಲ್ಲಿ ಅಕ್ಷರ್ ಪಟೇಲ್ ಅಂತಿಮ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶದ ನಾಲ್ಕು ವಿಕೆಟ್ ಪಡೆದರೆ, ಕುಲದೀಪ್ ಯಾದವ್ ಮೂರು ವಿಕೆಟ್ ಪಡೆದು ಮಿಂಚಿದರು. ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಡಿಸೆಂಬರ್ 22ರಂದು ಮೀರ್‌ಪುರದಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications