IND vs BAN: ODI ಕ್ರಿಕೆಟ್‌ನಲ್ಲಿ ತಂಡ ತನಗೆ ಈ ಪಾತ್ರ ನೀಡಿದೆ ಎಂದ ಕೆಎಲ್ ರಾಹುಲ್

ಭಾನುವಾರ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 1 ವಿಕೆಟ್ ಅಂತರದಿಂದ ಸೋಲನುಭವಿಸಿತು. ಈ ಪಂದ್ಯದ ಆರಂಭದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡರೆ, ನಂತರ ಫೀಲ್ಡಿಂಗ್ ಮತ್ತು ಬೌಲಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿ ಪಂದ್ಯ ಬಿಟ್ಟುಕೊಟ್ಟರು.
ಎಲ್ಲ ಬ್ಯಾಟರ್‌ಗಳು ಕಡಿಮೆ ರನ್ ಗಳಿಸಿ ಔಟಾದರೆ, ಉಪನಾಯಕ ಕೆಎಲ್ ರಾಹುಲ್ ಮಾತ್ರ ತಂಡದ ಪರ 73 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿದರು. ಆದರೆ ಈ ಪಂದ್ಯದಲ್ಲಿ ವಿಕೆಟ್ ಕೀಪರ್ ಗ್ಲೌಸ್ ಧರಿಸಿದ್ದ ರಾಹುಲ್ ನಿರ್ಣಾಯಕ ಮೆಹಿದಿ ಹಸನ್ ಮಿರಾಜ್ ಅವರ ಕ್ಯಾಚ್ ಬಿಟ್ಟು ತಂಡದ ಸೋಲಿಗೂ ಕಾರಣರಾದರು.
ಇದೆ ವೇಳೆ ಪಂದ್ಯದ ನಂತರ ಮಾತನಾಡಿದ ಕೆಎಲ್ ರಾಹುಲ್, "ಏಕದಿನ ಪಂದ್ಯಗಳಲ್ಲಿ ವಿಕೆಟ್ ಕೀಪರ್ ಮಾಡಲು ಮತ್ತು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧವಾಗಿರು ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದ ಟೀಮ್ ಮ್ಯಾನೇಜ್‌ಮೆಂಟ್ ಕೇಳಿದೆ," ಎಂದು ಭಾರತೀಯ ಉಪನಾಯಕ ಭಾನುವಾರ ಬಹಿರಂಗಪಡಿಸಿದ್ದಾರೆ.

ವಿಕೆಟ್ ಕೀಪರ್ ಜವಾಬ್ದಾರಿ ಕೆಎಲ್ ರಾಹುಲ್ ಹೆಗಲಿಗೆ
ಕೆಎಲ್ ರಾಹುಲ್ 2021ರಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮತ್ತು ಸಾಂದರ್ಭಿಕವಾಗಿ ವಿಕೆಟ್ ಕೀಪಿಂಗ್ ಮಾಡಿದ್ದರು. ಅನಂತರ ತಂಡದಲ್ಲಿ ರಿಷಭ್ ಪಂತ್ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮತ್ತೆ ವಿಕೆಟ್ ಕೀಪರ್ ಜವಾಬ್ದಾರಿ ಕೆಎಲ್ ರಾಹುಲ್ ಹೆಗಲಿಗೇರಿದೆ.
ವೈದ್ಯಕೀಯ ತಂಡದ ಸಲಹೆಯ ಮೇರೆಗೆ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದ ನಂತರ, ಕೆಎಲ್ ರಾಹುಲ್‌ಗೆ ಈ ಜವಾಬ್ದಾರಿ ನೀಡಲಾಗಿದೆ.

ನಾನು 4 ಅಥವಾ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್
"ಕಳೆದ 8-9 ತಿಂಗಳುಗಳಲ್ಲಿ ನಾವು ಹೆಚ್ಚಿನ ಏಕದಿನ ಪಂದ್ಯಗಳನ್ನು ಆಡಿಲ್ಲ. ಆದರೆ 2020-21ರಲ್ಲಿ ನಾನು ವಿಕೆಟ್ ಕೀಪಿಂಗ್ ಮಾಡಿದ್ದೇನೆ ಮತ್ತು ನಾನು 4 ಮತ್ತು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದೇನೆ. ಇದು ತಂಡದ ಮ್ಯಾನೇಜ್‌ಮೆಂಟ್ ನನಗೆ ನೀಡಿರುವ ಪಾತ್ರವಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಈ ಹಿಂದೆ ಮಾಡಿದಂತೆ ಸಿದ್ಧರಾಗಿರಿ ಎಂದು ಹೇಳಿದೆ," ಎಂದು ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಜವಾಬ್ದಾರಿ ಪ್ರಶ್ನೆಗೆ ಕೆಎಲ್ ರಾಹುಲ್ ಉತ್ತರಿಸಿದ ರೀತಿ ಇದು.
ಭಾರತ ತಂಡದ ಉಪನಾಯಕ ಆಗಿರುವ ಕಾರಣಕ್ಕೂ ಟೀಮ್ ಮ್ಯಾನೇಜ್‌ಮೆಂಟ್‌ನ ಭಾಗವಾಗಿರುವ ಕೆಎಲ್ ರಾಹುಲ್, ರಿಷಭ್ ಪಂತ್ ಅವರಿಗೆ ಕೆಲಸದ ಹೊರೆ ನಿರ್ವಹಣೆಯ ಕಾರಣದಿಂದ ವಿಶ್ರಾಂತಿ ನೀಡಲಾಗಿದೆಯೇ ಅಥವಾ ಬ್ಯಾಟಿಂಗ್ ಫಾರ್ಮ್ ಇಲ್ಲವೆಂದು ತಂಡದಿಂದ ಹೊರಗಿಡಲಾಗಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ.

ಇದು ಕ್ರಿಕೆಟ್, ಇಲ್ಲಿ ಅನಿರೀಕ್ಷಿತವಾದದ್ದನ್ನು ನಿರೀಕ್ಷಿಸಬೇಕು
ಇನ್ನು ಮೊದಲ ಏಕದಿನ ಪಂದ್ಯದ ಸೋಲಿಗೆ ಬ್ಯಾಟರ್‌ಗಳಾಗಲಿ ಅಥವಾ ಬೌಲರ್‌ಗಳಾಗಲಿ ಹೊಣೆಗಾರರನ್ನಾಗಿ ಮಾಡಲು ಕೆಎಲ್ ರಾಹುಲ್ ಬಯಸಲಿಲ್ಲ.
"ಇದು ಕ್ರಿಕೆಟ್, ಇಲ್ಲಿ ಅನಿರೀಕ್ಷಿತವಾದದ್ದನ್ನು ನಿರೀಕ್ಷಿಸಬೇಕು. ಕ್ರಿಕೆಟ್ ಆಡುವವರೆಗೂ ಈ ರೀತಿಯ ವಿಷಯಗಳು ನಡೆಯುತ್ತಲೇ ಇರುತ್ತವೆ. ನಾವು ಕೊನೆಯವರೆಗೂ ಚೆನ್ನಾಗಿ ಹೋರಾಡಿದೆವು, ಆದರೆ ಕೈಬಿಟ್ಟ ಒಂದೆರಡು ಕ್ಯಾಚ್‌ಗಳು ಮತ್ತು ಮೆಹಿದಿ ಹಸನ್ ಮಿರಾಜ್ ಅವರ ಅದ್ಭುತ ಇನ್ನಿಂಗ್ಸ್‌ನಿಂದಾಗಿ ಸೋಲಬೇಕಾಯಿತು," ಎಂದು ವಿವರಿಸಿದರು.
"ನಾನು ಆಡಿದ ಬ್ಯಾಟಿಂಗ್‌ನಿಂದ ಸಂತೋಷ ನೀಡಿದೆ ಮತ್ತು ತಂಡಕ್ಕೆ ಅಗತ್ಯವಿರುವಾಗ ಇಂತಹ ಆಟ ಮುಖ್ಯವಾಗಿತ್ತು. ಆದರೆ ನಾವು ಇನ್ನೂ 40 ರನ್‌ಗಳನ್ನು ಹೆಚ್ಚು ಗಳಿಸಬೇಕಾಗಿತ್ತು. ನಾನು ಕೊನೆಯವರೆಗೂ ಬ್ಯಾಟ್ ಮಾಡಿದ್ದರೆ 230ರಿಂದ 240 ರನ್ ಗಳಿಸಬಹುದಿತ್ತು," ಎಂದು ತಂಡದ ಬ್ಯಾಟಿಂಗ್ ಬಗ್ಗೆ ಕೆಎಲ್ ರಾಹುಲ್ ಮಾತನಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications