IND vs BAN 1st Test: ಮಿಂಚಿದ ಪೂಜಾರ, ಅಯ್ಯರ್, ಅಶ್ವಿನ್; ಸವಾಲಿನ ಗುರಿ ನೀಡಿ ಭಾರತ ಆಲೌಟ್

ಚಟ್ಟೋಗ್ರಾಮ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭಾರತ ತಂಡದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದ್ದು, ಆತಿಥೇಯ ಬಾಂಗ್ಲಾದೇಶ ತಂಡಕ್ಕೆ ಸವಾಲಿನ ಗುರಿ ನೀಡಿದೆ.
ಬುಧವಾರದ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿ, ಎರಡನೇ ದಿನದಾಟ ಆರಂಭಿಸಿದ ಭಾರತ ಅಂತಿಮವಾಗಿ 133.5 ಓವರ್‌ಗಳಲ್ಲಿ 404 ರನ್ ಪೇರಿಸಿ ಸರ್ವಪತನ ಕಂಡಿತು.
ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ತಮ್ಮ 2ನೇ ಟೆಸ್ಟ್ ಶತಕವನ್ನು ತಪ್ಪಿಸಿಕೊಂಡರು ಮತ್ತು 86 ರನ್ ಗಳಿಸಿದ್ದಾಗ ಎಬಾಡೋಟ್ ಹೊಸೇನ್ ಅವರ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

ನಂತರ ಜೊತೆಗೂಡಿದ ರವಿಚಂದ್ರನ್ ಅಶ್ವಿನ್ ಮತ್ತು ಕುಲದೀಪ್ ಯಾದವ್ ಅವರ ಅಗ್ರ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ತಂಡದ ಮೊತ್ತ 400ರ ಗಡಿ ದಾಟಲು ನೆರವಾಯಿತು.
ರವಿಚಂದ್ರನ್ ಅಶ್ವಿನ್(58) ತಮ್ಮ 13ನೇ ಟೆಸ್ಟ್ ಅರ್ಧಶತಕವನ್ನು ಬಾರಿಸಿದರೆ, ಕುಲದೀಪ್ ಯಾದವ್(40) ಟೆಸ್ಟ್‌ನಲ್ಲಿ ಅತ್ಯಧಿಕ ರನ್ ಗಳಿಸಿ ವಿಕೆಟ್ ನೀಡುವ ಮುನ್ನ, ಇವರಿಬ್ಬರು 8ನೇ ವಿಕೆಟ್ ಜೊತೆಯಾಟಕ್ಕೆ 92 ರನ್ ಸೇರಿಸಿದರು.
ರವಿಚಂದ್ರನ್ ಅಶ್ವಿನ್ ಮತ್ತು ಕುಲದೀಪ್ ಯಾದವ್ ಔಟಾದ ನಂತರ ಕ್ರೀಸ್‌ಗೆ ಬಂದ ಉಮೇಶ್ ಯಾದವ್ (ಅಜೇಯ 15 ರನ್) ದೊಡ್ಡ ಹೊಡೆತ ಬಾರಿಸಲು ಮುಂದಾದರು. ಮೊಹಮ್ಮದ್ ಸಿರಾಜ್(4) ವಿಕೆಟ್ ನೀಡುವ ಮೂಲಕ 404 ರನ್ ಗಳಿಸಿ ಭಾರತದ ಇನ್ನಿಂಗ್ಸ್‌ಗೆ ತೆರೆಬಿತ್ತು.

ಮೊದಲ ದಿನದಂದು ಚೇತೇಶ್ವರ ಪೂಜಾರ 90 ರನ್ ಗಳಿಸಿ ಔಟಾಗುವ ಮುನ್ನ ಶ್ರೇಯಸ್ ಅಯ್ಯರ್ ಜೊತೆ 149 ರನ್ ಜೊತೆಯಾಟ ನೀಡಿ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದ್ದರು.
ಬೌಲಿಂಗ್‌ನಲ್ಲಿ ಬಾಂಗ್ಲಾದೇಶ ಪರ ತೈಜುಲ್ ಇಸ್ಲಾಂ ಮತ್ತು ಮೆಹಿದಿ ಹಸನ್ ತಲಾ ನಾಲ್ಕು ವಿಕೆಟ್ ಕಬಳಿಸಿದರೆ, ಎಬಾಡೋಟ್ ಹೊಸೈನ್ ಮತ್ತು ಖಲೀದ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications