IND vs BAN: ಆಸ್ಟ್ರೇಲಿಯದ ನೆಚ್ಚಿನ ಪಿಚ್‌ನಲ್ಲಿ ಮುಂದುವರೆದ ಕಿಂಗ್ ಕೊಹ್ಲಿ ಪರಾಕ್ರಮ; ಇಲ್ಲಿದೆ ಅಂಕಿಅಂಶ

ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬುಧವಾರ ಅಡಿಲೇಡ್‌ನಲ್ಲಿ ಭಾರತದ ಗ್ರೂಪ್ 2ರ ಸೆಣಸಾಟದಲ್ಲಿ ಬಾಂಗ್ಲಾದೇಶ ವಿರುದ್ಧ ವೈಯಕ್ತಿಕ ಸ್ಕೋರ್ 16 ತಲುಪಿದಾಗ ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ಇದೇ ವೇಳೆ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ತಮ್ಮ ಮೂರನೇ ಅರ್ಧಶತಕವನ್ನು ಬಾರಿಸಿದರು ಮತ್ತು ವಿರಾಟ್ ಕೊಹ್ಲಿ 2022ರ ಟಿ20 ವಿಶ್ವಕಪ್‌ನಲ್ಲಿ ಬ್ಯಾಟ್‌ನೊಂದಿಗೆ ತಮ್ಮ ರನ್ ಬೇಟೆಯನ್ನು ಮುಂದುವರೆಸಿದರು.
ಅಡಿಲೇಡ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಕೆಎಲ್ ರಾಹುಲ್ 50 (32 ಎಸೆತಗಳಲ್ಲಿ) ಮತ್ತು ಸೂರ್ಯಕುಮಾರ್ ಯಾದವ್ 30 (21 ಎಸೆತಗಳಲ್ಲಿ) ನೆರವಿನೊಂದಿಗೆ ರನ್ ಮಿಷನ್ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 64 ರನ್ ಗಳಿಸಿ ಅಜೇಯರಾಗುಳಿದರು.
ನಿಗದಿತ 20 ಓವರ್‌ಗಳ ನಂತರ ಭಾರತ ತಂಡ 6 ವಿಕೆಟ್‌ಗೆ 184 ರನ್ ಕಲೆ ಹಾಕಿತು. 11/1 ಆಗಿದ್ದಾಗ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ 10 ಓವರ್‌ಗಳ ನಂತರ ಔಟಾಗದೆ 24 ರನ್ ಗಳಿಸಿದರು ಮತ್ತು ಕೆಎಲ್ ರಾಹುಲ್ ಅವರ 32 ಎಸೆತಗಳ ಅರ್ಧಶತಕದ ಹಿನ್ನಲೆಯಲ್ಲಿ ಭಾರತ 84-2 ತಲುಪಿತು.

ಅಡಿಲೇಡ್ ಓವಲ್ ವಿರಾಟ್ ಕೊಹ್ಲಿ ಅವರ ಅತ್ಯಂತ ನೆಚ್ಚಿನ ಮೈದಾನ
ಭಾರತ ಅಡಿಲೇಡ್‌ನಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿದ್ದು, ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಆಸ್ಟ್ರೇಲಿಯದ ಅದರಲ್ಲೂ, ನೆಚ್ಚಿನ ಅಡಿಲೇಡ್ ಪಿಚ್‌ನಲ್ಲಿ ಅಬ್ಬರಿಸಿದರು. ಅಡಿಲೇಡ್ ಓವಲ್ ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿ ಅವರ ಅತ್ಯಂತ ನೆಚ್ಚಿನ ಮೈದಾನಗಳಲ್ಲಿ ಒಂದಾಗಿದೆ. ವಿರಾಟ್ ಕೊಹ್ಲಿ ಈ ವಿಶ್ವಕಪ್‌ನಲ್ಲಿ ನೆದರ್ಲ್ಯಾಂಡ್ಸ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಅರ್ಧಶತಕ ಸೇರಿದಂತೆ ಮೂರು ಅರ್ಧಶತಕಗಳನ್ನು ಗಳಿಸಿ ಭವ್ಯವಾದ ರೂಪದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಅಡಿಲೇಡ್ ಪಿಚ್‌ನಲ್ಲಿ 64 ರನ್ ಸೇರಿದಂತೆ ಇಲ್ಲಿಯವರೆಗೆ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 220 ರನ್ ಗಳಿಸಿದ್ದಾರೆ. 2012ರಲ್ಲಿ ಇದೇ ಮೈದಾನದಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಶತಕ ಬಾರಿಸಿದ್ದರು. ಇದೇ ಮೈದಾನದಲ್ಲಿ ಮೊದಲ ಬಾರಿಗೆ ಭಾರತ ತಂಡದ ನಾಯಕತ್ವ ವಹಿಸಿದ್ದರು. ಆ ಪಂದ್ಯದಲ್ಲಿ ಅವರು ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿರುವುದು ವಿಶೇಷ.

ಹತ್ತು ಪಂದ್ಯಗಳನ್ನು ಆಡಿದ್ದು, 907 ರನ್ ಗಳಿಸಿದ್ದಾರೆ
ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಅವರು ಅಡಿಲೇಡ್ ಓವಲ್‌ನಲ್ಲಿ ಅಸಾಧಾರಣವಾದ ಪ್ರದರ್ಶನ ನೀಡಿದ್ದಾರೆ. 2016ರಲ್ಲಿ ಇದೇ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ 90 ರನ್ ಗಳಿಸಿದ್ದರು. 2015ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಓವಲ್‌ನಲ್ಲಿ ವಿರಾಟ್ ಶತಕವನ್ನೂ ಗಳಿಸಿದ್ದರು.
2019ರಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ 104 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ ಅಡಿಲೇಡ್‌ನಲ್ಲಿ ಹತ್ತು ಪಂದ್ಯಗಳನ್ನು ಆಡಿದ್ದು, 907 ರನ್ ಗಳಿಸಿದ್ದಾರೆ. ನಾಲ್ಕು ಏಕದಿನ ಪಂದ್ಯಗಳಲ್ಲಿ ಅವರು ಎರಡು ಶತಕಗಳೊಂದಿಗೆ 244 ರನ್‌ಗಳನ್ನು ಗಳಿಸಿದರು, ಟೆಸ್ಟ್‌ಗಳಲ್ಲಿ ಅವರು 509 ರನ್‌ಗಳನ್ನು ಗಳಿಸಿದ್ದಾರೆ ಮತ್ತು ಟಿ20 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಈ ಕ್ರೀಡಾಂಗಣದಲ್ಲಿ 154 ರನ್ ಗಳಿಸಿದ್ದಲ್ಲದೆ, ಯಾವಾಗಲೂ ಅಜೇಯರಾಗುಳಿದಿದ್ದಾರೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ
ಅಡಿಲೇಡ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 16 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಟಿ20 ವಿಶ್ವಕಪ್‌ನಲ್ಲಿ ತನ್ನ 25ನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ನಾಯಕ ಮಹೇಲಾ ಜಯವರ್ಧನೆ ಅವರ 1,016 ರನ್‌ಗಳ ಮೊತ್ತವನ್ನು ಭಾರತೀಯ ಬ್ಯಾಟರ್ ಹಿಂದಿಕ್ಕಿದರು. ಮಹೇಲಾ ಜಯವರ್ಧನೆ 31 ಇನ್ನಿಂಗ್ಸ್‌ಗಳ ದಾಖಲೆಯನ್ನು ಸ್ಥಾಪಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications