ಕೊಹ್ಲಿಗೆ ಯಾವುದೇ ಗಾಯದ ಸಮಸ್ಯೆ ಇಲ್ಲ, ಬೇಕಂತಲೇ ತಂಡದಿಂದ ಡ್ರಾಪ್ ಮಾಡಲಾಗಿದೆ; ಅನುಮಾನ ಶುರು!

ಪ್ರಸ್ತುತ ಕೆನ್ನಿಂಗ್ಟನ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪ್ರಥಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಕಣಕ್ಕಿಳಿದಿಲ್ಲ. ಈ ಸರಣಿಗೆ ಪ್ರಕಟವಾಗಿದ್ದ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ವಿರಾಟ್ ಕೊಹ್ಲಿ ಪ್ರಥಮ ಏಕದಿನ ಪಂದ್ಯ ಆರಂಭವಾಗುವುದಕ್ಕೂ ಒಂದು ದಿನದ ಮುನ್ನ ಗಾಯದ ಸಮಸ್ಯೆಗೆ ಒಳಗಾಗಿದ್ದು, ಪ್ರಥಮ ಏಕದಿನ ಪಂದ್ಯವನ್ನು ಆಡುವುದು ಅನುಮಾನ ಎಂಬ ಸುದ್ದಿ ಹರಿದಾಡಿತ್ತು.
ಹೌದು, ವಿರಾಟ್ ಕೊಹ್ಲಿ ತೊಡೆಸಂದು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಪ್ರಥಮ ಏಕದಿನ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಅದರಂತೆ ಇದೀಗ ಪ್ರಥಮ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿರುವ ಟೀಂ ಇಂಡಿಯಾ ಆಡುವ ಬಳಗದಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ ಹಾಗೂ ಶ್ರೇಯಸ್ ಅಯ್ಯರ್ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಹೀಗೆ ಪಂದ್ಯದ ಟಾಸ್ ಸಮಯದಲ್ಲಿ ಟೀಂ ಇಂಡಿಯಾ ಆಡುವ ಬಳಗ ಬಹಿರಂಗವಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಅಭಿಮಾನಿಗಳು ಟ್ವಿಟರ್ ವೇದಿಕೆಯಲ್ಲಿ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಕುರಿತು ಸಾಲು ಸಾಲು ಟ್ವೀಟ್ ಮಾಡುವ ಮೂಲಕ ವಿರಾಟ್ ಕೊಹ್ಲಿ ಪ್ರಥಮ ಪಂದ್ಯದಿಂದ ಹೊರಗುಳಿದಿರುವುದರ ಕುರಿತು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿಗೆ ನಿಜವಾಗಿಯೂ ಗಾಯದ ಸಮಸ್ಯೆ ಇದೆಯಾ ಅಥವಾ ಬೇಕಂತಲೇ ತಂಡದಿಂದ ಹೊರ ಹಾಕಲಾಗಿದೆಯಾ ಎಂಬ ಅನುಮಾನಗಳು ಕೂಡ ವ್ಯಕ್ತವಾಗಿದ್ದು, ಈ ಕೆಳಕಂಡಂತೆ ಟ್ವೀಟ್ ಮಾಡಿ ತಮ್ಮ ಅನುಮಾನವನ್ನು ಕೊಹ್ಲಿ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾ ಡ್ರೆಸಿಂಗ್ ರೂಂನಲ್ಲಿ ಕಥೆ ಕಟ್ಟಲಾಗುತ್ತಿದೆಯಾ?
ವಿರಾಟ್ ಕೊಹ್ಲಿ ಪ್ರಥಮ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ ಎಂಬ ವಿಷಯ ಅಧಿಕೃತವಾಗುತ್ತಿದ್ದಂತೆಯೇ ಟ್ವೀಟ್ ಮಾಡಿರುವ ನೆಟ್ಟಿಗನೋರ್ವ 'ವಿರಾಟ್ ಕೊಹ್ಲಿ ನಿಜವಾಗಿಯೂ ಗಾಯದ ಸಮಸ್ಯೆಗೆ ಒಳಗಾಗಿದ್ದಾರಾ ಅಥವಾ ಭಾರತ ತಂಡದ ಡ್ರೆಸ್ಸಿಂಗ್ ರೂಮ್ ಒಳಗಡೆ ಬೇರೆ ಏನಾದರೂ ಜರುಗುತ್ತಿದೆಯಾ' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಗೆ ನಿಜವಾಗಿಯೂ ಗಾಯದ ಸಮಸ್ಯೆ ಇದೆಯಾ ಅಥವಾ ತಂಡದ ರಾಜಕೀಯದಿಂದ ಕೊಹ್ಲಿಯನ್ನು ಹೊರಹಾಕಲಾಗಿದೆಯಾ ಎಂಬ ಅನುಮಾನವನ್ನು ಈ ನೆಟ್ಟಿಗ ಹೊರಹಾಕಿದ್ದಾರೆ.

ಇದೇ ಮೊದಲ ಬಾರಿಗೆ ಕೊಹ್ಲಿ ಡ್ರಾಪ್
ಮತ್ತೋರ್ವ ನೆಟ್ಟಿಗ ಈ ಕುರಿತಾಗಿ ಟ್ವೀಟ್ ಮಾಡಿದ್ದು, ಬಿಸಿಸಿಐ ವಿರಾಟ್ ಕೊಹ್ಲಿ ಗಾಯಗೊಂಡಿದ್ದಾರೆ ಎಂದು ಹೇಳುತ್ತಿದೆ, ಆದರೆ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಡ್ರಾಪ್ ಆಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಆದರೂ ಸಹ ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದಿಂದ ಸಂಪೂರ್ಣವಾಗಿ ಹೊರ ಹಾಕುವುದು ಅಸಾಧ್ಯ ಆದರೆ ಟೆಸ್ಟ್ ತಂಡದಿಂದ ಹೊರ ಹಾಕುವ ಸಾಧ್ಯತೆಗಳಿವೆ, ಕೊಹ್ಲಿ ಟೆಸ್ಟ್ ತಂಡದ ನಾಯಕತ್ವವನ್ನು ಬಿಡಬಾರದಿತ್ತು ಎಂದೂ ಸಹ ಬರೆದುಕೊಂಡಿದ್ದಾರೆ.

ಆಟಕ್ಕಿಂತ ಯಾರೂ ದೊಡ್ಡವರಲ್ಲ ಎಂಬುದನ್ನು ಬಿಸಿಸಿಐ ಮತ್ತೊಮ್ಮೆ ಸಾಬೀತು ಮಾಡಿದೆ
ಮತ್ತೋರ್ವ ನೆಟ್ಟಿಗ ಬಿಸಿಸಿಐ ಪರ ಬ್ಯಾಟ್ ಬೀಸಿದ್ದು, ಆತನೂ ಸಹ ವಿರಾಟ್ ಕೊಹ್ಲಿ ಅವರನ್ನು ಗಾಯದ ಸಮಸ್ಯೆಯಿಂದ ಹೊರ ಹಾಕಿಲ್ಲ ಬದಲಾಗಿ ಕೆಟ್ಟ ಫಾರ್ಮ್ ಕಾರಣಕ್ಕಾಗಿ ಹೊರ ಹಾಕಲಾಗಿದೆ ಎಂಬುದನ್ನು ಪರೋಕ್ಷವಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಕಳಪೆ ಫಾರ್ಮ್ ಹೊಂದಿದರೆ ತಂಡದಿಂದ ಹೊರ ಬೀಳುವುದು ಖಚಿತ ಎಂಬುದನ್ನು ಬಿಸಿಸಿಐ ಕೊಹ್ಲಿ ಅವರನ್ನು ತಂಡದಿಂದ ಹೊರ ಹಾಕುವ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದೆ ಹಾಗೂ ಆಟಕ್ಕಿಂತ ಯಾರೂ ದೊಡ್ಡವರಲ್ಲ ಎಂಬುದಕ್ಕೆ ಇದೇ ಸಾಕ್ಷಿ, ಈ ಹಿಂದೆ ಸಚಿನ್, ಸೆಹ್ವಾಗ್, ದ್ರಾವಿಡ್ ಮತ್ತು ಧೋನಿ ಅವರನ್ನು ಕೂಡ ಇದೇ ರೀತಿ ಡ್ರಾಪ್ ಮಾಡಲಾಗಿತ್ತು ಎಂದು ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications