Ind vs Eng: ಮೂರನೇ ಕ್ರಮಾಂಕದಲ್ಲಿ ಈತನೇ ಹೆಚ್ಚು ಸೂಕ್ತ ಎಂದ ಆಕಾಶ್ ಚೋಪ್ರ

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟಿ20 ಸರಣಿ ಗುರುವಾರ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಯುವ ಆಟಗಾರ ಪಡೆ ಭಾರತದ ಪರವಾಗಿ ಕಣಕ್ಕಿಳಿಯಲಿದ್ದು ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿಲಿದ್ದಾರೆ. ಈ ಪಂದ್ಯದಲ್ಲಿ ಭಾರತದ ಮೂರನೇ ಕ್ರಮಾಂಕದಲ್ಲಿ ಈ ಆಟಗಾರನೇ ಹೆಚ್ಚು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ ಆಕಾಶ್ ಚೋಪ್ರ.
ಭಾರತದ ಪರವಾಗಿ ಇತ್ತೀಚಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನಿಡುತ್ತಿರುವ ಆಟಗಾರರ ಪೈಕಿ ದೀಪಕ್ ಹೂಡಾ ಕೂಡ ಒಬ್ಬರು. ಕಳೆ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿದು ದೀಪಕ್ ಹೂಡಾ ಯಶಸ್ಸು ಸಾಧಿಸಿದ್ದರು. ಆ ಸರಣಿಯಲ್ಲಿ ಭಾರತದ ಪರವಾಗಿ ಶತಕವನ್ನು ಕೂಡ ಸಿಡಿಸಿ ಮಿಂಚಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ದೀಪಕ್ ಹೂಡ ಸೂಕ್ತ ಆಟಗಾರ ಎಂದಿದ್ದಾರೆ ಆಕಾಶ್ ಚೋಪ್ರ.

ಭಾರತ ಪರವಾಗಿ ಶತಕ ಸಿಡಿಸಿದ 4ನೇ ಆಟಗಾರ
ಈ ವರ್ಷ ದೀಪಕ್ ಹೂಡಾ ಅದ್ಭುತ ಪ್ರದರ್ಶನ ನಿಡುತ್ತಿದ್ದು ಐಪಿಎಲ್‌ನಲ್ಲಿ ಅಮೋಘ ಫಾರ್ಮ್ ಪ್ರದರ್ಶಿಸಿದ್ದರು. ನಂತರ ಭಾರತ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡ ಅವರು ಸಿಕ್ಕ ಅವಕಾಶವನ್ನು ಅದ್ಣುತವಾಗಿ ಬಳಸಿಕೊಂಡಿದ್ದಾರೆ. ಐರ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ದೀಪಕ್ ಹೂಡಾ ಚುಟುಕು ಮಾದರಿಯಲ್ಲಿ ಭಾರತದ ಪರವಾಗಿ ಶತಕ ಸಿಡಿಸಿದ ಕೇವಲ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ಈ ಸರಣಿಯ ಮೊದಲ ಪಂದ್ಯದಲ್ಲಿಯೂ ಹೂಡಾ 47 ರನ್ ಬಾರಿಸಿ ಮಿಂಚಿದ್ದರು.

ಮೂರನೇ ಕ್ರಮಾಂಕದಲ್ಲೆಯೇ ಮುಂದುವರಿಯಲಿ
ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ದೀಪಕ್ ಹೂಡಾ ಮೂರನೇ ಕ್ರಮಾಂಕದಲ್ಲಿಯೇ ಮುಂದುವರಿಯಲಿ ಎಂದಿದ್ದಾರೆ. "ಮೂರನೇ ಕ್ರಮಾಂಕಕ್ಕೆ ನನ್ನ ಪ್ರಕಾರ ದೀಪಕ್ ಹೂಡಾ ಅವರೇ ಸೂಕ್ತ ಆಟಗಾರ. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ಅದ್ಭುತವಾಗಿ ಆಡಿರುವ ಕಾರಣ ಅವರ ಕ್ರಮಾಂಕದಲ್ಲಿ ಬದಲಾವಣೆ ಮಾಡಲು ನಾನು ಇಷ್ಟಪಡುವುದಿಲ್ಲ. ಅವರು ಒಂದು ಪಂದ್ಯದಲ್ಲಿ ಶತಕ ಸಿಡಿಸಿದ್ದರೆ ಮತ್ತೊಂದರಲ್ಲಿ ಬಹುತೇಕ ಅರ್ಧ ಶತಕಗಳಿಸಿದ್ದರು. ಅವರಿ ನಿಜವಾಗಿಯೂ ಅದ್ಭುತ ಫಾರ್ಮ್‌ನಲ್ಲಿದ್ದಾರೆ" ಎಂದಿದ್ದಾರೆ ಆಕಾಶ್ ಚೋಪ್ರ.

ಯಾವ ಕ್ರಮಾಂಕಕ್ಕೆ ಯಾರು ಸೂಕ್ತ ಎಂದ ಚೋಪ್ರ
ಮುಂದುವರಿದು ಮಾತನಾಡಿದ ಆಕಾಶ್ ಚೋಪ್ರ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೆ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಆಡಿದ ಆಟಗಾರರು ಲಭ್ಯವಿಲ್ಲದ ಕಾರಣ ಯಾವ ಕ್ರಮಾಂಕದಲ್ಲಿ ಯಾವ ಆಟಗಾರರು ಕಣಕ್ಕಿಳಿಯಬೇಕು ಎಂದಿದ್ದಾರೆ. "ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಐದನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ 6ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಹಾಗೂ ನಂತರ ಅಕ್ಷರ್ ಪಟೇಲ್ ಕಣಕ್ಕಿಳಿಯಲಿ" ಎಂದಿದ್ದಾರೆ. ಇನ್ನು ಅಕ್ಷರ್ ಪಟೇಲ್ ಹಾಗೂ ಯುಜುವೇಂದ್ರ ಚಾಹಲ್ ಇಬ್ಬರು ಸ್ಪಿನ್ನರ್‌ಗಳು ಈ ಪಂದ್ಯದಲ್ಲಿ ಆಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೊದಲ ಪಂದ್ಯಕ್ಕೆ ಭಾರತ ಸ್ಕ್ವಾಡ್
ಮೊದಲ T20 ಪಂದ್ಯಕ್ಕೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications