
39 ವರ್ಷಗಳ ಹಳೆಯ ದಾಖಲೆಯನ್ನು ಮುರಿದ ಚಹಾಲ್
ಭಾರತ ಪರ ಯುಜ್ವೇಂದ್ರ ಚಹಾಲ್ 47 ರನ್‌ಗಳಿಗೆ 4 ವಿಕೆಟ್‌ಗಳೊಂದಿಗೆ ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ಉತ್ತಮ ದಾಖಲೆ ಬರೆದಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ನಡೆದ 1983ರ ವಿಶ್ವಕಪ್ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಮೊಹಿಂದರ್ ಅಮರನಾಥ್ 3/12 ಅಂಕಿಅಂಶ ಹೊಂದಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಯುಜ್ವೇಂದ್ರ ಚಹಾಲ್ 4 ವಿಕೆಟ್ ಪಡೆದು ಲಾರ್ಡ್ಸ್ ಮೈದಾನದಲ್ಲಿ ಬೌಲರ್ ಒಬ್ಬ ಹೆಚ್ಚು ವಿಕೆಟ್ ಪಡೆದ 39 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು.

ಡೇವಿಡ್ ವಿಲ್ಲಿ 49 ಎಸೆತಗಳಲ್ಲಿ 41 ರನ್
ಮೊಯಿನ್ ಮತ್ತು ಡೇವಿಡ್ ವಿಲ್ಲಿ (49 ಎಸೆತಗಳಲ್ಲಿ 41) ಏಳನೇ ವಿಕೆಟ್‌ಗೆ 62 ರನ್‌ಗಳನ್ನು ಸೇರಿಸುವ ಮೂಲಕ ಒಂದು ಸಮಯದಲ್ಲಿ 200 ರನ್ ಗಡಿ ದಾಟುವುದು ಅಸಾಧ್ಯವೆಂಬಂದಿತ್ತು. ನಂತರ 250 ರನ್‌ಗಳ ಗುರಿಯನ್ನು ನೀಡಲು ಸಹಾಯ ಮಾಡಿದರು.
ಎರಡು ಗತಿಯ ಟ್ರ್ಯಾಕ್‌ನಲ್ಲಿ ಯುಜ್ವೇಂದ್ರ ಚಹಾಲ್ (10-0-47-4) ಅವರು ಇಂಗ್ಲೆಂಡ್‌ನ "ಬಿಗ್ ಥ್ರೀ' ವಿಕೆಟ್ ಪಡೆದರು. ಜಾನಿ ಬೈರ್‌ಸ್ಟೋವ್ (31), ಜೋ ರೂಟ್ (11) ಮತ್ತು ಬೆನ್ ಸ್ಟೋಕ್ಸ್ (21) ಮತ್ತು ನಂತರ ಮೋಯಿನ್ ಅಲಿ ಅವರು ಅಪಾಯಕಾರಿಯಾಗಿ ಕಾಣುತ್ತಿರುವಾಗ ಅವರನ್ನು ಔಟ್ ಮಾಡಿದರು.

ಜೇಸನ್ ರಾಯ್, ಲಿಯಾಮ್ ಲಿವಿಂಗ್‌ಸ್ಟೋನ್ ಕಿತ್ತ ಹಾರ್ದಿಕ್ ಪಾಂಡ್ಯ
ಇನ್ನೊಂದು ತುದಿಯಲ್ಲಿ ನಿಧಾನವಾಗಿ ತನ್ನ ಬೌಲಿಂಗ್ ಲಯವನ್ನು ಮರಳಿ ಪಡೆಯುತ್ತಿದ್ದ ಹಾರ್ದಿಕ್ ಪಾಂಡ್ಯ (6-0-28-2), ಜೇಸನ್ ರಾಯ್ (23) ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ (33) ಅವರ ವಿಕೆಟ್‌ಗಳೊಂದಿಗೆ ರೋಹಿತ್ ಶರ್ಮಾ ಪಡೆ ಆತಿಥೇಯ ರನ್ ಹರಿವಿಗೆ ಅಡ್ಡಿಪಡಿಸಿದರು.
ಮೊಹಮ್ಮದ್ ಶಮಿ (10-0-48-1) ಎಂದಿನಂತೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ (4) ಅವರನ್ನು ತೀಕ್ಷ್ಣವಾದ ಇನ್‌ಸ್ವಿಂಗರ್‌ನಿಂದ ಬೌಲ್ಡ್ ಮಾಡಿದರು. ಜಸ್ಪ್ರೀತ್ ಬುಮ್ರಾ (10-1-49-2) ಮತ್ತು ಶಮಿ ಮತ್ತೊಮ್ಮೆ ವಲಯದಲ್ಲಿದ್ದರು, ಆದರೂ ಇದು ಆರಂಭಿಕ ಪಂದ್ಯಕ್ಕೆ ಹೋಲಿಸಿದರೆ ಇಂಗ್ಲೆಂಡ್‌ಗೆ ದೊಡ್ಡ ಹಿನ್ನಡೆ ಉಂಟುಮಾಡಲಿಲ್ಲ.

ಭಾರತಕ್ಕೆ 100 ರನ್‌ಗಳ ಸೋಲು
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲವಾಗಿದ್ದು, ಭಾರೀ ಅಂತರದಿಂದ ಸೋಲು ಕಂಡಿತು. ಲಾರ್ಡ್ಸ್ ಮೈದಾನದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಇಂಗ್ಲೆಂಡ್ ತಂಡ ಭಾರತವನ್ನು 146 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 100 ರನ್‌ಗಳ ಬೃಹತ್ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡ 1-1 ಅಂತರದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಇಂಗ್ಲೆಂಡ್ ನೀಡಿದ್ದ 247 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಬ್ಯಾಟಿಂಗ್ ಆರಂಭದಿಂದಲೇ ಕುಂಟುತ್ತಾ ಸಾಗಿತ್ತು. ಒಂದರ ನಂತರ ಒಂದು ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಭಾರತ ತಂಡಕ್ಕೆ ಯಾವುದೇ ಹಂತದಲ್ಲಿ ಉತ್ತಮ ಜೊತೆಯಾಟ ದೊರೆಯಲಿಲ್ಲ. ಅಂತಿಮವಾಗಿ ಭಾರತ 146 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು.


Click it and Unblock the Notifications
