
ಭಾರತ ಸಂಭಾವ್ಯ ಆಡುವ 11ರ ಬಳಗ ಹೀಗಿರಲಿದೆ
ಶುಭ್‌ಮನ್ ಗಿಲ್: ಟೆಸ್ಟ್ ಕ್ರಿಕೆಟ್‌ನಲ್ಲಿ ಶುಭ್‌ಮನ್ ಗಿಲ್ ಶತಕ ಗಳಿಸಬೇಕಾಗಿದ್ದು, ಎಲ್ಲಕ್ಕಿಂತ ದೊಡ್ಡ ಹಂತದಲ್ಲಿ ಅದನ್ನು ಮಾಡಲು ಶುಭ್‌ಮನ್ ಗಿಲ್ ಉತ್ಸುಕನಾಗಿದ್ದಾರೆ. ಅವರು ತವರಿನಲ್ಲಿ ಹಲವಾರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಆದರೆ ಅಗ್ರ ಕ್ರಮಾಂಕದ ಬ್ಯಾಟಿಂಗ್ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಅಗತ್ಯವಿದೆ. ಹೀಗಾಗಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ಹೊರಹೊಮ್ಮುವ ಸಾಧ್ಯತೆ ಇದೆ.
ಮಯಾಂಕ್ ಅಗರ್ವಾಲ್: ಇಂಗ್ಲೆಂಡ್‌ನಲ್ಲಿ ಹೊಚ್ಚ ಹೊಸ ಡ್ಯೂಕ್ ಬಾಲ್ ಸದ್ದು ಮಾಡುತ್ತದೆ ಮತ್ತು ಇದು ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ತುಂಬಾ ಕಷ್ಟಕರವಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಟೆಸ್ಟ್ ಪರಿಣಿತರು ಬ್ಯಾಟಿಂಗ್ ತೆರೆಯುವುದು ಮುಖ್ಯ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಅವಕಾಶ ಪಡೆದಿರುವ ಮಯಾಂಕ್ ಅಗರ್ವಾಲ್, ಕೊನೆಯ ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಕಂ-ಬ್ಯಾಕ್ ಮಾಡಬೇಕಾಗಿದೆ.

ಚೇತೇಶ್ವರ ಪೂಜಾರ ದೀರ್ಘ ಬ್ಯಾಟಿಂಗ್ ಅವಶ್ಯಕ
ಚೇತೇಶ್ವರ ಪೂಜಾರ: ಈ ನಿರ್ಣಾಯಕ ಪಂದ್ಯವನ್ನು ಭಾರತ ಗೆಲ್ಲಬೇಕಾದರೆ ಅಥವಾ ಡ್ರಾ ಮಾಡಿಕೊಳ್ಳಬೇಕಾದರೆ ಚೇತೇಶ್ವರ ಪೂಜಾರ ದೀರ್ಘ ಬ್ಯಾಟಿಂಗ್ ಮಾಡಿ ರನ್ ಗಳಿಸಬೇಕು. ಅವರು ಜನವರಿ 2019 ರಿಂದ ಟೆಸ್ಟ್ ಶತಕವನ್ನು ಹೊಂದಿಲ್ಲ ಮತ್ತು ಭಾರತ ತಂಡಕ್ಕೆ ಇದೀಗ ಅವರ ಶತಕ ಅಥವಾ ದ್ವಿಶತಕ ಅವಶ್ಯಕತೆ ಇದೆ. ಕೌಂಟಿ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡಿರುವ ಅವರು, ಟೆಸ್ಟ್ ಪಂದ್ಯದಲ್ಲೂ ಮುಂದುವರೆಸಬೇಕಿದೆ.
ವಿರಾಟ್ ಕೊಹ್ಲಿ: ಭಾರತದ ಮಾಜಿ ನಾಯಕ ಭಾರತ ಈ ಸರಣಿಯನ್ನು ಗೆಲ್ಲಬೇಕೆಂದು ಬಯಸುತ್ತಾರೆ. ಏಕೆಂದರೆ ಅದು ಅವರ ನಾಯಕತ್ವದ ಪರಂಪರೆಯ ತೃಪ್ತಿಕರ ಅಂತ್ಯವಾಗಲಿದೆ. ಕಳೆದ ವರ್ಷ ಅವರ ನಾಯಕತ್ವದಲ್ಲಿ ಭಾರತ 2-1 ಮುನ್ನಡೆ ಸಾಧಿಸಿತ್ತು. ಅವರಿಗೂ ದೊಡ್ಡ ರನ್‌ಗಳ ಅವಶ್ಯಕತೆಯಿದೆ. ಅದರಲ್ಲೂ ಈ ಪಂದ್ಯದಲ್ಲಿ ಶತಕವನ್ನು ಎದುರು ನೋಡುತ್ತಿದ್ದಾರೆ. ಜೇಮ್ಸ್ ಆಂಡರ್ಸನ್ ಬೌಲಿಂಗ್ ಕಂಪನಿಯ ವಿರುದ್ಧ ಹೋರಾಡಲು ವಿರಾಟ್ ಕೊಹ್ಲಿ ಸಿದ್ಧರಾಗಿದ್ದಾರೆ.
ಹನುಮ ವಿಹಾರಿ: ಎಂದೆಂದಿಗೂ ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ಹನುಮ ವಿಹಾರಿ ತಂಡದ ಗೆಲುವಿನ ಉದ್ದೇಶಕ್ಕೆ ಮತ್ತೊಮ್ಮೆ ಕೊಡುಗೆ ನೀಡಲು ಬಯಸುತ್ತಾರೆ. ಅವರು ಮಧ್ಯಮ ಕ್ರಮಾಂಕದಲ್ಲಿ ಗಟ್ಟಿಯಾಗಿ ಮತ್ತು ಬಾಲಂಗೋಚಿಗಳೊಂದಿಗೆ ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಾಗುತ್ತದೆ.

ರಿಷಭ್ ಪಂತ್ ಬ್ಯಾಟ್‌ನೊಂದಿಗೆ ಅಬ್ಬರಿಸಬೇಕಿದೆ
ರಿಷಭ್ ಪಂತ್: ಈ ಪಂದ್ಯದಲ್ಲಿ ಬೌಲರ್‌ಗಳು ಪ್ರಾಬಲ್ಯ ಸಾಧಿಸಿದರೆ ರಿಷಭ್ ಪಂತ್ ತನ್ನ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಪಂದ್ಯದ ಕೀಲಿಯನ್ನು ಹಿಡಿದಿಟ್ಟುಕೊಳ್ಳಬಹುದು. ರಿಷಭ್ ಪಂತ್ ಬ್ಯಾಟ್‌ನೊಂದಿಗೆ ಅಬ್ಬರಿಸಿದರೆ, ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ. ಆಸ್ಟ್ರೇಲಿಯದ ಫಾರ್ಮ್ ಅನ್ನು ಇಲ್ಲಿಯೂ ಮುಂದುವರೆಸಬೇಕಿದೆ.
ರವಿಚಂದ್ರನ್ ಅಶ್ವಿನ್: ಆರ್. ಅಶ್ವಿನ್ ಅವರು ಇತ್ತೀಚಿನ ವಿದೇಶ ಪ್ರವಾಸಗಳಲ್ಲಿ ಹೆಚ್ಚು ಸುಧಾರಿತ ಬೌಲರ್ ಆಗಿದ್ದಾರೆ ಮತ್ತು ಪಂದ್ಯ ವಿಜೇತರಾಗಿ ತಮ್ಮ ಮೌಲ್ಯವನ್ನು ಪ್ರದರ್ಶಿಸಲು ಇದು ಅವರಿಗೆ ಮತ್ತೊಂದು ಅವಕಾಶವಾಗಿದೆ.
ಶಾರ್ದೂಲ್ ಠಾಕೂರ್: ಇಂಗ್ಲೆಂಡ್‌ನಲ್ಲಿ ಬೌಲಿಂಗ್ ಜೊತೆಗೆ ಭಾರತಕ್ಕೆ ಸುದೀರ್ಘ ಬ್ಯಾಟಿಂಗ್ ಲೈನ್‌ಅಪ್ ಅಗತ್ಯವಿದೆ ಮತ್ತು ಶಾರ್ದೂಲ್ ಠಾಕೂರ್ ಅದನ್ನು ಒದಗಿಸುತ್ತಾರೆ. ಅದೇ ರೀತಿ ಪಿಚ್‌ನಿಂದ ಚೆಂಡನ್ನು ಹೊರಗೆ ಬಾರಿಸುವ ಸಾಮರ್ಥ್ಯವು ಮುಖ್ಯವಾಗಿದೆ.

ಮೊಹಮ್ಮದ್ ಶಮಿ ಭಾರತ ತಂಡಕ್ಕೆ ಆಪದ್ಬಾಂಧವ
ಮೊಹಮ್ಮದ್ ಶಮಿ: ಭಾರತದ ಅತ್ಯಂತ ಸ್ಥಿರ ಬೌಲರ್ ಮೊಹಮ್ಮದ್ ಶಮಿ ಭಾರತ ತಂಡಕ್ಕೆ ಆಪದ್ಬಾಂಧವ ಆಗುವ ನಿರೀಕ್ಷ ಇದೆ. ಶಮಿ ಫಾರ್ಮ್‌ನಲ್ಲಿದ್ದರೆ ಜೋ ರೂಟ್ ಮತ್ತು ಜೊತೆಗಾರ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾಗಬಹುದು.
ಜಸ್ಪ್ರೀತ್ ಬುಮ್ರಾ: ನಾಯಕ ಬುಮ್ರಾಗೆ ಹೆಚ್ಚುವರಿ ಜವಾಬ್ದಾರಿಯ ಹೊರೆ ಇರುತ್ತದೆ. ಆದರೆ ಬುಮ್ರಾ ಬೌಲಿಂಗ್ ಗಮನದಲ್ಲಿರಲು ಇಷ್ಟಪಡುವವರಂತೆ ಕಾಣುತ್ತಾರೆ. ಇಂಗ್ಲೆಂಡ್‌ನ ಆಕ್ರಮಣಕಾರಿ ಬ್ಯಾಟಿಂಗ್ ಅನ್ನು ಪಳಗಿಸಲು ಅವರ ಹೆಚ್ಚುವರಿ ವೇಗವು ಸೂಕ್ತವಾಗಿರುತ್ತದೆ.
ಮೊಹಮ್ಮದ್ ಸಿರಾಜ್: ಐಪಿಎಲ್‌ನಲ್ಲಿಕಳಪೆಯಗಿದ್ದರೂ, ಭಾರತ ತಂಡಕ್ಕಾಗಿ ಆಡುವಾಗ ಮೊಹಮ್ಮದ್ ಸಿರಾಜ್ ವಿಭಿನ್ನ ಬೌಲರ್. ಉಮೇಶ್ ಯಾದವ್ ಅವರನ್ನು ಹೊರಗಿಡುವುದು ಕಠಿಣವಾಗಿದೆ. ಆದರೆ ಸಿರಾಜ್ ಟೆಸ್ಟ್‌ನಲ್ಲಿ ಅವರ ಲೈನ್ ಮತ್ತು ಲೆಂಗ್ತ್‌ಗೆ ಹೆಚ್ಚು ಸ್ಥಿರವಾಗಿದೆ.


Click it and Unblock the Notifications
