For Quick Alerts
ALLOW NOTIFICATIONS  
For Daily Alerts
 

Ind vs Eng 5th Test: ಪಂದ್ಯದ ಪ್ರಿವ್ಯೂ, ಹೆಡ್‌ ಟು ಹೆಡ್, ಪ್ಲೇಯಿಂಗ್‌ 11 ಡೀಟೈಲ್ಸ್‌

England vs India

ಭಾರತ-ಇಂಗ್ಲೆಂಡ್‌ ನಡುವಿನ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಬಹುದಿನಗಳಿಂದ ಕಾಯುತ್ತಿದ್ದ ಮಹತ್ವದ ಟೆಸ್ಟ್ ಹೋರಾಟಕ್ಕೆ ಬರ್ಮಿಂಗ್‌ಹ್ಯಾಮ್‌ ಸಜ್ಜಾಗಿದೆ. ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯವು ಸರಣಿಯ ಫಲಿತಾಂಶವನ್ನು ನಿರ್ಧರಿಸಲಿದೆ.

ಈಗಾಗಲೇ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಹೊಸ ನಾಯಕತ್ವದಡಿಯಲ್ಲಿ ಕಣಕ್ಕಿಳಿಯಲಿದೆ. ನಾಯಕ ರೋಹಿತ್ ಶರ್ಮಾ ಕೋವಿಡ್-19 ಪಾಸಿಟಿವ್ ಆಗಿರುವ ಕಾರಣ, ಜೊತೆಗೆ ಪಾಸಿಟಿವ್ ವರದಿ ಮತ್ತೆ ಬಂದಿರುವ ಬೆನ್ನಲ್ಲೇ ಉಪನಾಯಕ ಜಸ್ಪ್ರೀತ್ ಬುಮ್ರಾ ನೇತೃತ್ವದಲ್ಲಿ ಟೀಂ ಇಂಡಿಯಾ ಅಖಾಡಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಟೀಂ ಇಂಡಿಯಾ ಅಂತಿಮ ಪಂದ್ಯವನ್ನು ಗೆದ್ದು ಸರಣಿಯನ್ನ ಕೈ ವಶ ಮಾಡಿಕೊಳ್ಳುವ ಯೋಜನೆಯಲ್ಲಿದ್ದರೆ, ಭರ್ಜರಿ ಫಾರ್ಮ್‌ನಲ್ಲಿರುವ ಇಂಗ್ಲೆಂಡ್ ತಂಡವು ಕಿವೀಸ್ ತಂಡವನ್ನ ವೈಟ್‌ವಾಶ ಮಾಡಿ ಟೀಂ ಇಂಡಿಯಾವನ್ನ ಎದುರಿಸುತ್ತಿದೆ. ಜೊತೆಗೆ ಸರಣಿಯನ್ನು 2-2ರಿಂದ ಸಮಬಲ ಸಾಧಿಸುವ ಲೆಕ್ಕಾಚಾರ ಹೊಂದಿದೆ.

ಪಿಚ್ ರಿಪೋರ್ಟ್‌

ಪಿಚ್ ರಿಪೋರ್ಟ್‌

ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯವು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಈ ಮೈದಾನವು ಸಾಮಾನ್ಯವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಮಾನವಾಗಿ ಅನುಕೂಲಕರವಾಗಿದೆ. ಆದರೆ ಇಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತದೆ. ಇದಕ್ಕೆ ಹಿಂದಿನ ದಾಖಲೆಗಳೇ ಕಾರಣ.

ಮೊದಲ ದಿನದ ಆಟ ಇಲ್ಲಿನ ವೇಗಿಗಳಿಗೆ ಉತ್ತಮ ಸ್ವಿಂಗ್ ಆಗಿತ್ತು. ಅದೇ ರೀತಿ ಬ್ಯಾಟ್ಸ್‌ಮನ್‌ಗಳು ಪಿಚ್‌ನ ಸ್ವರೂಪವನ್ನು ಅರ್ಥಮಾಡಿಕೊಳ್ಳದೆ ಎಡವುತ್ತಾರೆ. ಸರಾಸರಿಯಾಗಿ, ಈ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡುವ ತಂಡವು 300+ ರನ್ ಗಳಿಸುತ್ತದೆ. 300 ರನ್ ದಾಟುವುದೊಂದೇ ಗೆಲ್ಲುವ ಅವಕಾಶ.

ಇನ್ನು ಬೌಲಿಂಗ್ ವಿಷಯದಲ್ಲಿ ಭಾರತದ ಶಕ್ತಿ ಎಂದರೆ 3 ವೇಗದ ಬೌಲರ್‌ಗಳು ಮತ್ತು 2 ಸ್ಪಿನ್ನರ್‌ಗಳು. ಆದರೆ ಈ ಮೈದಾನದಲ್ಲಿ 4 ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯಬೇಕಾಗಬಹುದು. ಇಂಗ್ಲೆಂಡ್ ತಂಡ ಎಲ್ಲಾ 5 ಬೌಲರ್‌ಗಳನ್ನು ವೇಗದ ಬೌಲರ್‌ಗಳಾಗಿ ಕಣಕ್ಕಿಳಿಸಿದರೂ ಆಶ್ಚರ್ಯಪಡಬೇಕಾಗಿಲ್ಲ.

ಎಡ್ಜ್‌ಬಾಸ್ಟನ್ ಸ್ಟೇಡಿಯಂನ ಗೆಲುವು-ಸೋಲಿನ ಲೆಕ್ಕಾಚಾರ

ಎಡ್ಜ್‌ಬಾಸ್ಟನ್ ಸ್ಟೇಡಿಯಂನ ಗೆಲುವು-ಸೋಲಿನ ಲೆಕ್ಕಾಚಾರ

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಸ್ಟೇಡಿಯಂ ಇದುವರೆಗೂ 53 ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದೆ. ಇಂಗ್ಲೆಂಡ್ 28 ಪಂದ್ಯಗಳನ್ನು ಗೆದ್ದಿದ್ದರೆ, ಪ್ರವಾಸಿ ತಂಡವು 10 ಬಾರಿ ಪಂದ್ಯ ಗೆದ್ದಿದೆ. ಇನ್ನುಳಿದ 15 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದೆ. ಮೊದಲು ಬ್ಯಾಟ್ ಮಾಡಿದ ತಂಡ 18 ಪಂದ್ಯಗಳನ್ನು ಗೆದ್ದಿದೆ ಮತ್ತು ಎರಡನೇ ಬ್ಯಾಟಿಂಗ್ ಮಾಡಿದ ತಂಡ 20 ಬಾರಿ ಗೆದ್ದಿದೆ.

ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಈ ಹಿರಿಯ ಆಟಗಾರನಿಗೆ ಸ್ಥಾನವಿಲ್ಲ: ವರದಿ

ಇಂಗ್ಲೆಂಡ್ ತಂಡದ ಬಲಾಬಲ ಮತ್ತು ಪ್ಲೇಯಿಂಗ್ 11

ಇಂಗ್ಲೆಂಡ್ ತಂಡದ ಬಲಾಬಲ ಮತ್ತು ಪ್ಲೇಯಿಂಗ್ 11

ಇಂಗ್ಲೆಂಡ್ ತಂಡವು ಕಳೆದ ನ್ಯೂಜಿಲೆಂಡ್‌ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಸಿದ್ದ ತಂಡವನ್ನೇ ಟೀಂ ಇಂಡಿಯಾ ಎದುರು ಅಖಾಡ ಪ್ರವೇಶಿಸಲಿದೆ. ಏಕೆಂದರೆ ವಿನ್ನಿಂಗ್ ಕಾಂಬಿನೇಷನ್ ಇಂಗ್ಲೆಂಡ್‌ಗೆ ಹೆಚ್ಚು ಆತ್ಮವಿಶ್ವಾಸವನ್ನು ತರಲಿದೆ. ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಪ್ಲೇಯಿಂಗ್ ಇಲೆವೆನ್‌ಗೆ ಕಂಬ್ಯಾಕ್ ಮಾಡಲಿದ್ದು, ವಿಕೆಟ್ ಕೀಪರ್ ಬೆನ್‌ ಫೋಕ್ಸ್‌ ಲಭ್ಯವಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಖಚಿತಗೊಂಡಿಲ್ಲ.

ಜಾಸ್ ಬಟ್ಲರ್‌ ಟೆಸ್ಟ್‌ಗೆ ಆಯ್ಕೆಯಾಗದೇ ಇರುವುದರಿಂದ ಸ್ಯಾಮ್ ಬಿಲ್ಲಿಂಗ್ಸ್‌ಗೆ ವಿಕೆಟ್ ಕೀಪರ್ ಜವಾಬ್ದಾರಿ ನೀಡುವ ಸಾಧ್ಯತೆಯಿದೆ.

ಇಂಗ್ಲೆಂಡ್ ಸಂಭಾವ್ಯ ಪ್ಲೇಯಿಂಗ್ 11
ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಒಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್/ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಮ್ಯಾಥ್ಯೂ ಪಾಟ್ಸ್, ಜ್ಯಾಕ್ ಲೀಚ್, ಜೇಮ್ಸ್ ಆ್ಯಂಡರ್ಸನ್

ಕೊಹ್ಲಿ ಶತಕಗಳಿಸುವುದು ನಮಗೆ ಬೇಕಿಲ್ಲ, ಆದರೆ..: ಹೀಗೆ ಯಾಕಂದ್ರು ಕೋಚ್ ರಾಹುಲ್ ದ್ರಾವಿಡ್!

ಭಾರತಕ್ಕೆ ಕೋವಿಡ್ ಕಾಟ ಮತ್ತು ಪ್ಲೇಯಿಂಗ್ 11

ಭಾರತಕ್ಕೆ ಕೋವಿಡ್ ಕಾಟ ಮತ್ತು ಪ್ಲೇಯಿಂಗ್ 11

ಟೀಂ ಇಂಡಿಯಾ ಕೋವಿಡ್ ಹಾಗೂ ಗಾಯದ ಕಾರಣ ಅಷ್ಟೊಂದು ಸದೃಢವಾದ ಲೈನ್ ಅಪ್ ಹೊಂದಿಲ್ಲ. ಕೆ.ಎಲ್ ರಾಹುಲ್ ಜರ್ಮನಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾಯಕ ರೋಹಿತ್ ಕೋವಿಡ್-19 ಕಾರಣದಿಂದ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ವೇಗಿ ಬುಮ್ರಾ ತಂಡವನ್ನ ಮುನ್ನಡೆಸುವ ಸಾಧ್ಯತೆಯಿದೆ.

ಇನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಮೊಹಮ್ಮದ್ ಸಿರಾಜ್ ಮತ್ತು ರವಿಚಂದ್ರನ್ ಅಶ್ವಿನ್‌ರಲ್ಲಿ ಯಾರನ್ನ ಕಣಕ್ಕಿಳಿಸಬೇಕು ಎಂಬುದು ಪ್ರಮುಖ ಲೆಕ್ಕಾಚಾರವಾಗಿದೆ. ಪಿಚ್‌ನ ಕಂಡೀಶನ್‌ಗೆ ತಕ್ಕಂತೆ ಇಬ್ಬರಲ್ಲಿ ಒಬ್ಬರ ಆಯ್ಕೆ ನಡೆಯಲಿದೆ.

ಭಾರತ ಸಂಭಾವ್ಯ ಪ್ಲೇಯಿಂಗ್ 11
ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ / ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ (ನಾಯಕ)

Virat Kohli ಶತಕದ ಬದ್ಲು ನಮ್ಗೆ ಬೇಕಾಗಿರೋದು ಇದು...ರಾಹುಲ್ ದ್ರಾವಿಡ್ ಶಾಕಿಂಗ್ ಹೇಳಿಕೆ | *Cricket |OneIndia
ಹೆಡ್‌ ಟು ಹೆಡ್ ರೆಕಾರ್ಡ್

ಹೆಡ್‌ ಟು ಹೆಡ್ ರೆಕಾರ್ಡ್

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇದುವರೆಗೂ 130 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಇಂಗ್ಲೆಂಡ್ 49 ಪಂದ್ಯಗಳನ್ನ ಗೆದ್ದಿದ್ದು, ಟೀಂ ಇಂಡಿಯಾ 31 ಪಂದ್ಯಗಳನ್ನ ಜಯಿಸಿದೆ. 50 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಪ್ರಾರಂಭಗೊಳ್ಳಲಿದ್ದು, ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಸೋನಿ ಲಿವ್ ಆ್ಯಪ್‌ನಲ್ಲಿ ಪಂದ್ಯದ ನೇರಪ್ರಸಾರ ವೀಕ್ಷಿಸಬಹುದಾಗಿದೆ.

Story first published: Thursday, June 30, 2022, 18:20 [IST]
Other articles published on Jun 30, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+