IND vs ENG 5ನೇ ಟೆಸ್ಟ್: 98/5ರಿಂದ 416 ರನ್! ಪಂತ್, ಜಡೇಜಾ ಶತಕ; ಅಬ್ಬರಿಸಿದ ಬುಮ್ರಾ

ಕಳೆದ ವರ್ಷದಿಂದ ಮುಂದೂಡಲ್ಪಟ್ಟಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಎಡ್ಜ್ ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ ( ಜುಲೈ 1 ) ಆರಂಭವಾಯಿತು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಇಂದು ನಡೆಯುತ್ತಿರುವ ಎರಡನೇ ದಿನದಂದು ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಮುಗಿಸಿದ್ದು, 416 ರನ್ ಕಲೆಹಾಕಿ ಆಲ್ ಔಟ್ ಆಗಿದೆ.
ಪಂದ್ಯ ಆರಂಭವಾದಾಗ ಆರಂಭಿಕ ಆಘಾತ ಅನುಭವಿಸಿದ್ದ ಟೀಮ್ ಇಂಡಿಯಾ 98 ರನ್‌ಗಳಿಗೆ ತನ್ನ ಮೊದಲ 5 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಂತರ ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ಆರನೇ ವಿಕೆಟ್‌ಗೆ ಜತೆಯಾಗಿ 222 ರನ್‌ಗಳ ಬೃಹತ್ ಜತೆಯಾಟವನ್ನಾಡಿ ತಂಡಕ್ಕೆ ಆಸರೆಯಾದರು. ತಂಡದ ಪರ ರಿಷಬ್ ಪಂತ್ ಹಾಗೂ ರವೀಂದ್ರ ಜಡೇಜಾ ಶತಕಗಳನ್ನು ಬಾರಿಸಿದರೆ, ಅಂತಿಮ ಹಂತದಲ್ಲಿ ಅಬ್ಬರಿಸಿದ ನಾಯಕ ಜಸ್ಪ್ರೀತ್ ಬುಮ್ರಾ 31 ರನ್ ಕಲೆಹಾಕಿ ಅಜೇಯರಾಗಿ ಉಳಿದರು.

ಆರಂಭಿಕ ಆಘಾತಕ್ಕೊಳಗಾದ ಟೀಮ್ ಇಂಡಿಯಾಗೆ ಪಂತ್ ಮತ್ತು ಜಡೇಜಾ ಆಸರೆ
ಮೊದಲನೆಯ ದಿನ ಟೀಮ್ ಇಂಡಿಯಾ ಬ್ಯಾಟಿಂಗ್ ಆರಂಭಿಸಿದಾಗ ಆರಂಭಿಕರಾಗಿ ಕಣಕ್ಕಿಳಿದ ಶುಬ್ ಮನ್ ಗಿಲ್ 17 ರನ್ ಕಲೆಹಾಕಿದರೆ ಚೇತೇಶ್ವರ್ ಪೂಜಾರ 13 ರನ್ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹನುಮ ವಿಹಾರಿ 20, ವಿರಾಟ್ ಕೊಹ್ಲಿ 11, ಶ್ರೇಯಸ್ ಅಯ್ಯರ್ 15, ಶಾರ್ದೂಲ್ ಠಾಕೂರ್ 1 ರನ್ ಗಳಿಸಿ ಔಟ್ ಆದರು. ರಿಷಭ್ ಪಂತ್ 111 ಎಸೆತಗಳಲ್ಲಿ 146 ರನ್ ಕಲೆಹಾಕಿ ಅಬ್ಬರಿಸಿದರು ಹಾಗೂ ರವೀಂದ್ರ ಜಡೇಜಾ 163 ಎಸೆತಗಳಲ್ಲಿ ಅಜೇಯ 83 ರನ್ ಗಳಿಸಿ ಮೊದಲ ದಿನದಾಟದಂತ್ಯಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು. ನಂತರ ಎರಡನೇ ದಿನದಾಟವನ್ನು ಮುಂದುವರಿಸಿದ ರವೀಂದ್ರ ಜಡೇಜಾ 104 ರನ್ ಕಲೆಹಾಕಿ ಶತಕ ಪೂರೈಸಿದರು. ಹೀಗೆ ಕುಸಿತ ಕಂಡಿದ್ದ ಟೀಮ್ ಇಂಡಿಯಾಗೆ ಪಂತ್ ಮತ್ತು ಜಡೇಜಾ ಆಸರೆಯಾದರು. ಇನ್ನುಳಿದಂತೆ ಮೊಹಮ್ಮದ್ ಶಮಿ 16 ರನ್ ಕಲೆಹಾಕಿದರೆ, ಮೊಹಮ್ಮದ್ ಸಿರಾಜ್ 2 ರನ್ ಕಲೆಹಾಕಿ ಔಟ್ ಆದರು ಹಾಗೂ ನಾಯಕ ಜಸ್ಪ್ರೀತ್ ಬುಮ್ರಾ ಅಜೇಯ 31 ರನ್ ಕಲೆ ಹಾಕಿದರು.

ಅಬ್ಬರಿಸಿ ವಿಶ್ವದಾಖಲೆ ಬರೆದ ಬುಮ್ರಾ
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕತ್ವವನ್ನು ವಹಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 16 ಎಸೆತಗಳನ್ನು ಎದುರಿಸಿ ಅಜೇಯ 31 ರನ್ ಕಲೆ ಹಾಕಿದರು. ಅದರಲ್ಲಿಯೂ ಸ್ಟುವರ್ಟ್ ಬ್ರಾಡ್ ಜಸ್ಪ್ರೀತ್ ಬುಮ್ರಾಗೆ ಎಸೆದ ಇನ್ನಿಂಗ್ಸ್‌ನ 84ನೇ ಓವರ್‌ನಲ್ಲಿ ಬರೋಬ್ಬರಿ 35 ರನ್ ಹರಿದು ಬಂತು. ಈ ಮೂಲಕ ಟೆಸ್ಟ್ ಪಂದ್ಯದ ಓವರ್ ಒಂದರಲ್ಲಿ ಅತಿ ಹೆಚ್ಚು ರನ್ ಹರಿದು ಬಂದ ದಾಖಲೆ ಈ ಪಂದ್ಯದ ಮೂಲಕ ನಿರ್ಮಾಣವಾಯಿತು. ಬುಮ್ರಾಗೆ ಸ್ಟುವರ್ಟ್ ಬ್ರಾಡ್ ಎಸೆದ ಆ ಓವರ್‌ನ ಎಲ್ಲಾ ಎಸೆತಗಳಲ್ಲಿ ಹರಿದುಬಂದ ರನ್ ವಿವರ ಹೀಗಿದೆ: 4, 5 ( ವೈಡ್ ಫೋರ್), 6 ( ನೋಬಾಲ್ ), 4, 4, 4, 6 ಮತ್ತು 1 ರನ್.
ಹೀಗೆ ಸ್ಟುವರ್ಟ್ ಬ್ರಾಡ್ ವೈಡ್ ಬೌಂಡರಿ ಹಾಗೂ ನೋ ಬಾಲ್ ಸಿಕ್ಸರ್ ಬಾರಿಸಿಕೊಂಡ ಕಾರಣ ಓವರ್ ಒಂದರಲ್ಲಿ ಅತಿ ಹೆಚ್ಚು ರನ್ ನೀಡಿದಂತಾಯಿತು.

5 ವಿಕೆಟ್ ಪಡೆದ ಜೇಮ್ಸ್ ಆ್ಯಂಡರ್ಸನ್
ಇನ್ನು ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್ಸನ್ 5 ವಿಕೆಟ್ ಗೊಂಚಲು ಪಡೆದು ಮಿಂಚಿದರು. ಮ್ಯಾಟಿ ಪಾಟ್ಸ್ 2 ವಿಕೆಟ್ ಪಡೆದರೆ, ಸ್ಟುವರ್ಟ್ ಬ್ರಾಡ್, ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications