Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ 18 ತಿಂಗಳಿನಲ್ಲಿ ಬಾರಿಸಿರುವ ರನ್‌ಗಳನ್ನು ಜಾನಿ 25 ದಿನಗಳಲ್ಲಿ ಬಾರಿಸಿದ್ದಾರೆ: ಕೊಹ್ಲಿ ಕಾಲೆಳೆದ ಇಂಗ್ಲೆಂಡ್!

IND vs ENG: Barmy Army trolled Kohli and Indian fans trolled them back with epic replies

ನಿನ್ನೆಯಷ್ಟೇ ( ಜುಲೈ 5 ) ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಐದನೇ ಟೆಸ್ಟ್ ಪಂದ್ಯ ಮುಕ್ತಾಯಗೊಂಡಿದ್ದು, ಈ ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್‍ಗಳ ಐತಿಹಾಸಿಕ ಜಯ ಸಾಧಿಸುವುದರ ಮೂಲಕ ಇತ್ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ 2 - 2 ಅಂತರದಲ್ಲಿ ಡ್ರಾ ಆಯಿತು.

ಮೊದಲನೇ ಇನ್ನಿಂಗ್ಸ್‌ನಲ್ಲಿ 416 ರನ್ ಕಲೆಹಾಕಿ ಇಂಗ್ಲೆಂಡ್ ತಂಡವನ್ನು 284 ರನ್‌ಗಳಿಗೆ ಆಲ್ ಔಟ್ ಮಾಡಿದ್ದ ಟೀಮ್ ಇಂಡಿಯಾ 132 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಆಲ್ ಔಟ್ ಆದ ಟೀಂ ಇಂಡಿಯಾ ಆತಿಥೇಯ ಇಂಗ್ಲೆಂಡ್ ತಂಡಕ್ಕೆ 378 ರನ್‌ಗಳ ಬೃಹತ್ ಗುರಿ ನೀಡಿತು. ಇನ್ನು ಇಲ್ಲಿಯವರೆಗೂ ಇಷ್ಟು ದೊಡ್ಡ ಮೊತ್ತದ ರನ್ ಚೇಸ್ ಮಾಡಿರದೇ ಇದ್ದ ಇಂಗ್ಲೆಂಡ್ ಈ ಮೊತ್ತವನ್ನು ಭೇದಿಸುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಈ ಬೃಹತ್ ಮೊತ್ತವನ್ನು ಕೂಡಾ ಚೇಸ್ ಮಾಡಿದ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 378 ರನ್ ಕಲೆಹಾಕಿ ಗೆಲುವಿನ ಕೇಕೆ ಹಾಕಿತು.

ಹೀಗೆ ಇಂಗ್ಲೆಂಡ್ ಟೀಮ್ ಇಂಡಿಯಾ ವಿರುದ್ಧ ಬೃಹತ್ ಗೆಲುವನ್ನು ದಾಖಲಿಸಿದ ಬೆನ್ನಲ್ಲೇ ಇಂಗ್ಲೆಂಡ್ ತಂಡದ ಅಧಿಕೃತ ಟ್ವಿಟರ್ ಖಾತೆಗಳ ಮೂಲಕ ವಿರಾಟ್ ಕೊಹ್ಲಿ ಕುರಿತು ಸಾಕಷ್ಟು ಟ್ರೋಲ್ಸ್ ನಡೆಯುತ್ತಿವೆ. ಹೌದು, ಇಂಗ್ಲೆಂಡ್ ಕ್ರಿಕೆಟ್‍ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕೊಹ್ಲಿ ಜಾನಿ ಬೈರ್ ಸ್ಟೋವ್ ಅವರನ್ನು ಸ್ಲೆಡ್ಜ್ ಮಾಡಿದ ಚಿತ್ರ ಹಾಗೂ ಪಂದ್ಯ ಸೋತ ನಂತರ ಕೊಹ್ಲಿ ಬೈರ್ ಸ್ಟೋವ್ ಹೆಗಲನ್ನು ತಟ್ಟುತ್ತಿರುವ ಚಿತ್ರಗಳನ್ನು ಹಂಚಿಕೊಳ್ಳುವುದರ ಮೂಲಕ ಕಾಲೆಳೆದಿದೆ. ಅಷ್ಟೇ ಅಲ್ಲದೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಅಭಿಮಾನಿಗಳ ಟ್ವಿಟ್ಟರ್ ಖಾತೆಯಾದ ಬಾರ್ಮಿ ಆರ್ಮಿ ಕೂಡ ವಿರಾಟ್ ಕೊಹ್ಲಿಯ ಕಾಲನ್ನು ಎಳೆದಿದ್ದು, ಜಾನಿ ಬೈರ್ ಸ್ಟೋವ್ ಜತೆ ಕೊಹ್ಲಿಯನ್ನು ಹೋಲಿಸಿ ಟ್ರೋಲ್ ಮಾಡಿದೆ. ಈ ಕುರಿತಾದ ವಿವರ ಮತ್ತು ಇದಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ನೀಡಿದ ಪ್ರತ್ಯುತ್ತರ ಹೇಗಿತ್ತು ಎಂಬುದು ಕೆಳಕಂಡಂತಿದೆ.

ಕೊಹ್ಲಿಗಿಂತ ಬೈರ್ ಸ್ಟೋವ್ ಹೆಚ್ಚು ರನ್ ಹೊಂದಿದ್ದಾರೆ ಎಂದ ಬಾರ್ಮಿ ಆರ್ಮಿ

ವಿರಾಟ್ ಕೊಹ್ಲಿ ಕಳೆದ 18 ತಿಂಗಳುಗಳಲ್ಲಿ ಕಲೆಹಾಕಿರುವ ರನ್‌ಗಳಿಗಿಂತ ಜಾನಿ ಬೈರ್ ಸ್ಟೋವ್ ಕಳೆದ 25 ದಿನಗಳಲ್ಲಿ ಹೆಚ್ಚು ರನ್‌ಗಳನ್ನು ಕಲೆ ಹಾಕಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಬಾರ್ಮಿ ಆರ್ಮಿ ಕೊಹ್ಲಿಯ ಕಾಲೆಳೆದಿದೆ.

ನಿಮ್ಮ ತಂಡದ ಎಲ್ಲಾ ಆಟಗಾರರಿಗಿಂತ ಕೊಹ್ಲಿ ಹೆಚ್ಚು ಸೆಂಚುರಿ ಬಾರಿಸಿದ್ದಾರೆ

ನಿಮ್ಮ ತಂಡದ ಎಲ್ಲಾ ಆಟಗಾರರಿಗಿಂತ ಕೊಹ್ಲಿ ಹೆಚ್ಚು ಸೆಂಚುರಿ ಬಾರಿಸಿದ್ದಾರೆ

ಬಾರ್ಮಿ ಆರ್ಮಿ ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಭಾರತೀಯ ಕ್ರಿಕೆಟ್ ಪ್ರೇಮಿಯೊಬ್ಬರು ವಿರಾಟ್ ಕೊಹ್ಲಿ ಇಲ್ಲಿಯವರೆಗೂ ಬಾರಿಸಿರುವ ಒಟ್ಟು ಅಂತರರಾಷ್ಟ್ರೀಯ ಶತಕಗಳ ಸಂಖ್ಯೆ 70 ಮತ್ತು ಪ್ರಸ್ತುತ ನಿಮ್ಮ ಇಂಗ್ಲೆಂಡ್ ಟೆಸ್ಟ್ ತಂಡದ ಆಡುವ ಬಳಗದಲ್ಲಿ ಇರುವ ಎಲ್ಲಾ ಆಟಗಾರರು ಸಿಡಿಸಿರುವ ಅಂತರರಾಷ್ಟ್ರೀಯ ಶತಕಗಳ ಸಂಖ್ಯೆ 55 ಎಂದು ಬರೆದುಕೊಂಡು ಬಾರ್ಮಿ ಆರ್ಮಿಗೆ ತಿರುಗೇಟು ನೀಡಿದ್ದಾರೆ.

ಕೊಹ್ಲಿಗೂ ಈತನಿಗೂ ಹೋಲಿಕೆ ಬೇಡ

ಕೊಹ್ಲಿಗೂ ಈತನಿಗೂ ಹೋಲಿಕೆ ಬೇಡ

ಮತ್ತೋರ್ವ ಭಾರತದ ಕ್ರಿಕೆಟ್ ಅಭಿಮಾನಿ ಉತ್ತರಿಸಿದ್ದು, ಜಾನಿ ಬೈರ್ ಸ್ಟೋವ್ ಬಾರಿಸಿರುವ ಒಟ್ಟಾರೆ ಅಂತರರಾಷ್ಟ್ರೀಯ ಶತಕಗಳ ಸಂಖ್ಯೆ 23 ಮತ್ತು ವಿರಾಟ್ ಕೊಹ್ಲಿ ಬಾರಿಸಿರುವ ಟೆಸ್ಟ್ ಮಾದರಿಯ ಶತಕಗಳ ಸಂಖ್ಯೆ 27, ಬೈರ್ ಸ್ಟೋವ್ ಬಾರಿಸಿರುವ ಒಟ್ಟಾರೆ ಅಂತರರಾಷ್ಟ್ರೀಯ ರನ್ 10103 ಮತ್ತು ವಿರಾಟ್ ಕೊಹ್ಲಿ ಬಾರಿಸಿರುವ ಅಂತರರಾಷ್ಟ್ರೀಯ ಏಕದಿನ ರನ್ 12311 ಎಂದು ಬರೆದುಕೊಂಡು ಕೊಹ್ಲಿ ಮತ್ತು ಜಾನಿ ಬೈರ್ ಸ್ಟೋವ್ ಇಬ್ಬರಿಗೂ ಯಾವುದೇ ಕಾರಣಕ್ಕೂ ಹೋಲಿಕೆ ಮಾಡಬೇಡಿ ವಿರಾಟ್ ಕೊಹ್ಲಿ ಬೇರೆ ಹಂತದಲ್ಲಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

Story first published: Wednesday, July 6, 2022, 12:28 [IST]
Other articles published on Jul 6, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+