For Quick Alerts
ALLOW NOTIFICATIONS  
For Daily Alerts
 

ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಮುನ್ನಡೆ ಸಾಧಿಸಲು 4 ಅಂಶಗಳ ಮೇಲೆ ಇಂಗ್ಲೆಂಡ್ ಚಿತ್ತ

Ind vs Eng: England targeting 4 things of Team India ahead of Lords test

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಎರಡು ತಂಡಗಳು ಕೂಡ ಸಜ್ಜಾಗಿದೆ. ಗುರುವಾರ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಸರಣಿಯ ಎರಡನೇ ಪಂದ್ಯ ನಡೆಯಲಿದೆ. ಮೊದಲ ಪಂದ್ಯದ ಕೊನೆಯ ದಿನ ಮಳೆಗೆ ಆಹುತಿಯಾಗಿದ್ದು ಮಾತ್ರವಲ್ಲದೆ ಇಡೀ ಪಂದ್ಯ ಮಳೆಯಿಂದಾಗಿ ಡ್ರಾ ಫಲಿತಾಂಶ ಪಡೆಯುವಂತಾಗಿತ್ತು. ಪಂದ್ಯದಲ್ಲಿ ಆರಂಭದಿಂದಲೂ ಉತ್ತಮ ಹಿಡಿತ ಹೊಂದಿದ್ದ ಭಾರತ ತಂಡ ಈ ಫಲಿತಾಂಶದಿಂದ ನಿರಾಸೆ ಅನುಭವಿಸಿತು.

ಹಾಗಿದ್ದರೂ ಸರಣಿಯಲ್ಲಿ ಭಾರತ ತಂಡ ಪಡೆದ ಅದ್ಭುತ ಆರಂಭ ನಿಜಕ್ಕೂ ತಂಡದ ಉತ್ಸಾಹವನ್ನು ಹೆಚ್ಚಿಸಿದೆ. ಇಂಗ್ಲೆಂಡ್‌ಗೆ ತವರು ನೆಲದಲ್ಲಿಯೇ ವಿರಾಟ್ ಕೊಹ್ಲಿ ಪಡೆ ಸರ್ವಾಂಗೀರ್ಣ ಪ್ರದರ್ಶನ ನೀಡುವ ಮೂಲಕ ಆರಂಭಿಕ ಮೇಲುಗೈ ಸಾಧಿಸಿದೆ. ಗೆಲ್ಲಬಹುದಾಗಿದ್ದ ಪಂದ್ಯದ ಫಲಿತಾಂಶ ಡ್ರಾ ಆಗಿ ಬದಲಾಗಿದ್ದು ಭಾರತೀಯ ತಂಡದ ಪಾಲಿಗೆ ಬೇಸರದ ಸಂಗತಿ. ಆದರೆ ಇಂಗ್ಲೆಂಡ್ ತಂಡ ಮೊದಲ ಪಂದ್ಯದ ಹಿನ್ನೆಡೆಯನ್ನು ಸರಣಿಯ ಮುಂದಿನ ಪಂದ್ಯಗಳಿಗೆ ಪೂರಕವಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಹೀಗಾಗಿಯೇ ಸರಣಿಯಲ್ಲಿ ಟೀಮ್ ಇಂಡಿಯಾದ ಕೆಲ ಪ್ರಮುಖ ವಿಚಾರಗಳನ್ನು ಗುರಿ ಮಾಡಲು ಇಂಗ್ಲೆಂಡ್ ನಿರ್ಧರಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ

ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ

ಭಾರತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸವಾಲಿನ ಕಠಿಣ ಪಿಚ್‌ನಲ್ಲಿಯೂ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಭಾರತದ ಪರವಾಗಿ ಕೆಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿದು ಮೊದಲ ಇನ್ನಿಂಗ್ಸ್‌ನಲ್ಲಿ 84 ರನ್‌ಗಳ ಕೊಡುಗೆಯನ್ನು ನೀಡಿದ್ದರು. ಆತಿಥೇಯ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 183 ರನ್‌ಗಳಿಗೆ ಕುಸಿದಿದ್ದರೂ ಭಾರತ 273 ರನ್‌ಗಳನ್ನು ಪಡೆದು ಮಹತ್ವದ 95 ರನ್‌ಗಳ ಮುನ್ನಡೆಯನ್ನು ಪಡೆದುಕೊಂಡಿತ್ತು. ಈ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಲು ಭಾರತಕ್ಕೆ ಸಾಧ್ಯವಾಯಿತು. ಆದರೆ ಲಾರ್ಡ್ಸ್ ಟೆಸ್ಟ್‌ನಲ್ಲಿ ಪ್ರವಾಸಿ ಭಾರತಕ್ಕೆ ಅವಕಾಶವನ್ನು ನೀಡದೆ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸುವ ಗುರಿ ಹೊಂದಿದೆ ಇಂಗ್ಲೆಂಡ್.

ಸಮತೋಲಿನ ತಂಡಕ್ಕೆ ಪ್ರತಿಸವಾಲು

ಸಮತೋಲಿನ ತಂಡಕ್ಕೆ ಪ್ರತಿಸವಾಲು

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಅತ್ಯಂತ ಸಮತೋಲಿತ ತಂಡವನ್ನು ಹೊಂದಿದೆ. ಅನುಭವಿಗಳು ಹಾಗೂ ಯುವ ಆಟಗಾರರ ಉತ್ತಮ ಸಮ್ಮಿಶ್ರಣ ಭಾರತ ತಂಡಲ್ಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ಜಸ್ಪ್ರೀತ್ ಬೂಮ್ರಾ ಅವರಂತಾ ಅನುಭವಿಗಳ ಜೊತೆಗೆ ಮೊಹಮ್ಮದ್ ಸಿರಾಜ್, ರಿಷಬ್ ಪಂತ್, ಶಾರ್ದೂಲ್ ಠಾಕೂರ್ ಅವರಂತಾ ಯುವ ಆಟಗಾರರು ತಂಡದಲ್ಲಿದ್ದು ಅದ್ಭುತವಾದ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಈ ಎಲ್ಲಾ ಆಟಗಾರರ ವಿರುದ್ಧವೂ ಇಂಗ್ಲೆಂಡ್ ಪಡೆ ರಣತಂತ್ರವನ್ನು ಹೆಣೆಯುತ್ತಿದೆ.

ಪೂರ್ಣ ಸಾಮರ್ಥ್ಯ ಪರೀಕ್ಷೆಗೆ ಬ್ಯಾಟಿಂಗ್ ವಿಭಾಗ ಚಿತ್ತ

ಪೂರ್ಣ ಸಾಮರ್ಥ್ಯ ಪರೀಕ್ಷೆಗೆ ಬ್ಯಾಟಿಂಗ್ ವಿಭಾಗ ಚಿತ್ತ

ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿದ್ದರೂ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಪಡೆ ಭಾರತದ ಬೌಲಿಂಗ್ ದಾಳಿಯ ಮುಂದೆ ಸಂಪೂರ್ಣವಾಗಿ ನೆಲಕಚ್ಚಿತ್ತು. ಭಾರತದ ಬೌಲಿಂಗ್ ದಾಳಿಯ ವಿರುದ್ಧ ಎರಡು ಇನ್ನಿಂಗ್ಸ್‌ಗಳಲ್ಲಿಯೂ ಭಾರೀ ವೈಫಲ್ಯವನ್ನು ಅನುಭವಿಸಿತ್ತು. ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮಾತ್ರವೇ ಎರಡು ಇನ್ನಿಂಗ್ಸ್‌ಗಳಲ್ಲಿಯೂ ಅದ್ಭುತವಾದ ಹೋರಾಟವನ್ನು ಪ್ರದರ್ಶಿಸಿದ್ದರು. ಲಾರ್ಡ್ಸ್ ಅಂಗಳದಲ್ಲಿ ಬ್ಯಾಟಿಂಗ್ ವಿಭಾಗದ ಉತ್ತಮ ಪ್ರದರ್ಶನದ ಮೂಲಕ ಪ್ರವಾಸಿಗರಿಗೆ ಶಾಕ್ ನೀಡಲು ಇಂಗ್ಲೆಂಡ್ ಮುಂದಾಗಿದೆ.

Shardul Thakur ಎರಡನೇ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ | oneindia kannada
ಆಕ್ರಮಣಕಾರಿ ಬೌಲಿಂಗ್ ಹಿಮ್ಮೆಟ್ಟಿಸಲು ರಣತಂತ್ರ

ಆಕ್ರಮಣಕಾರಿ ಬೌಲಿಂಗ್ ಹಿಮ್ಮೆಟ್ಟಿಸಲು ರಣತಂತ್ರ

ಭಾರತದ ಬೌಲರ್‌ಗಳ ಆಕ್ರಮಣಕಾರಿ ಪ್ರದರ್ಶನ ಆತಿಥೇಯ ಇಂಗ್ಲೆಂಡ್ ದಾಂಡಿಗರಿಗೆ ಮೊದಲ ಪಂದ್ಯದಲ್ಲಿ ಅಗ್ನಿಪರೀಕ್ಷೆಯಾಗಿತ್ತು. ಜಸ್ಪ್ರೀತ್ ಬೂಮ್ರಾ ಮತ್ತೆ ತಮ್ಮ ಹಳೆಯ ಲಯಕ್ಕೆ ಮರಳಿರುವುದು ಇಂಗ್ಲೆಂಡ್ ಪಾಲಿಗೆ ಮತ್ತಷ್ಟು ಎಚ್ಚರಿಕೆ ನೀಡಿದಂತಾಗಿದೆ. ಇನ್ನು ಮೊಹಮ್ಮದ್ ಶಮಿ ಕೂಡ ಬೌಲಿಂಗ್‌ನಲ್ಲಿ ಮೊನಚುತನ ಪ್ರದರ್ಶಿಸಿದ್ದಾರೆ. ಯುವ ಆಟಗಾರರಾದ ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಸ್ವಿಂಗ್ ದಾಳಿಯೊಂದಿಗೆ ನೀಡಿದ ಆಕ್ರಮಣಕಾರಿ ಪ್ರದರ್ಶನ ಇಂಗ್ಲೆಂಡ್ ದಾಂಡಿಗರನ್ನು ಕಂಗೆಡಿಸಿತ್ತು. ಅಲ್ಲದೆ ಭಾರತೀಯ ಬೌಲರ್‌ಗಳು ಇಂಗ್ಲೆಂಡ್‌ನ ಪಿಚ್‌ಅನ್ನು ಮೊದಲ ಪಂದ್ಯದಲ್ಲಿ ಶೀಘ್ರವಾಗಿ ಅರ್ಥೈಸಿಕೊಂಡು ಇಂಗ್ಲೆಂಡ್‌ಗೆ ಆಘಾತ ನೀಡಿದ್ದರು. ಹೀಗಾಗಿ ಭಾರತದ ಬೌಲರ್‌ಗಳ ಕಠಿಣ ಸವಾಲನ್ನು ಸಮರ್ಥವಾಗಿ ಎದುರಿಸಲು ಇಂಗ್ಲೆಂಡ್ ತಂಡ ಸಂಪೂರ್ಣವಾಗಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.

Story first published: Wednesday, August 11, 2021, 12:59 [IST]
Other articles published on Aug 11, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+