Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind Vs Eng: ಅಂತಿಮ ಅಭ್ಯಾಸ ಮುಗಿಸಿದ ಟೀಂ ಇಂಡಿಯಾ, ಆಂಗ್ಲರ ಸವಾಲು ಎದುರಿಸಲು ಸಿದ್ಧ

Ind Vs Eng: India Complete Final Training Session, Kohli Looks Aggressive In Nets

ಭಾರತ-ಇಂಗ್ಲೆಂಡ್ ಸೆಮಿಫೈನಲ್‌ ಕದನಕ್ಕೆ ಮುನ್ನ ಟೀಂ ಇಂಡಿಯಾ ತನ್ನ ಅಂತಿಮ ಹಂತದ ಸಿದ್ಧತೆಯನ್ನು ಪೂರ್ಣಗೊಳಿಸಿದೆ. ಬುಧವಾರ ತಂಡದ ಎಲ್ಲಾ ಸದಸ್ಯರು ಅಭ್ಯಾಸದಲ್ಲಿ ಪಾಲ್ಗೊಂಡು ಕಠಿಣ ಅಭ್ಯಾಸ ನಡೆಸಿದರು.

ಮಂಗಳವಾರ ಟೀಂ ಇಂಡಿಯಾ ಐಚ್ಛಿಕ ಅಭ್ಯಾಸದ ಅವಧಿ ಹೊಂದಿತ್ತು. ನಾಯಕ ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಅಭ್ಯಾಸ ನಡೆಸಿದ್ದರು. ಬುಧವಾರ ತಂಡದ ಎಲ್ಲಾ ಸದಸ್ಯರು ಕಠಿಣ ಅಭ್ಯಾಸ ಮಾಡಿದರು.

ಅಡಿಲೇಡ್‌ ಓವೆಲ್‌ನಲ್ಲಿ ಬೆಳಿಗ್ಗೆ 9.30ಕ್ಕೆ ಭಾರತದ ಅಭ್ಯಾಸದ ಸೆಷನ್ ಆರಂಭವಾಯಿತು. ಮಧ್ಯಾಹ್ನ 12 ಗಂಟೆಗೆ ತಮ್ಮ ಅಭ್ಯಾಸವನ್ನು ಪೂರ್ಣಗೊಳಿಸಿದರು. ನೆಟ್ಸ್‌ನಲ್ಲಿ ಅಭ್ಯಾಸ ಮಾಡುವ ವೇಳೆ ವಿರಾಟ್ ಕೊಹ್ಲಿಗೆ ಬಾಲ್ ತಗುಲಿ ಗಾಯಗೊಂಡ ಬಗ್ಗೆ ಆತಂಕವಿತ್ತಾದರೂ ಅವರು ಶೀಘ್ರದಲ್ಲೇ ಚೇತರಿಸಿಕೊಂಡರು.

ರಿಷಬ್ ಪಂತ್ ನೆಟ್‌ನಲ್ಲಿ ಭರ್ಜರಿ ಅಭ್ಯಾಸ ಮಾಡಿದರು. ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್‌ ಅಡಿಲೇಡ್ ಓವಲ್ ಪಿಚ್‌ ಅನ್ನು ವೀಕ್ಷಿಸಿದರು.

ಅಭ್ಯಾಸದ ವೇಳೆ ಕೊಹ್ಲಿ ಗಾಯದ ಆತಂಕ

ಅಭ್ಯಾಸದ ವೇಳೆ ಕೊಹ್ಲಿ ಗಾಯದ ಆತಂಕ

ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಕವರ್ ಡ್ರೈವ್ ಅನ್ನು ಅಭ್ಯಾಸ ಮಾಡಿದರು ನಂತರ ಪಾಯಿಂಟ್‌ನಲ್ಲಿ ಕೆಲವು ಹೊಡೆತಗಳನ್ನು ಹೊಡೆದರು. ಬೌಲರ್‌ನ ಮೇಲೆ ತನ್ನ ಪಾದವನ್ನು ಮುಂದಕ್ಕೆ ಬಂದು ಆಡುತ್ತಿದ್ದ ಕೊಹ್ಲಿ ತುಂಬಾ ಆಕ್ರಮಣಕಾರಿ ಮೂಡ್‌ನಲ್ಲಿ ಕಾಣುತ್ತಿದ್ದರು.

ನಂತರ ಹರ್ಷಲ್ ಪಟೇಲ್ ಎಸೆತದಲ್ಲಿ ಚೆಂಡು ವಿರಾಟ್ ಕೊಹ್ಲಿ ತೊಡೆ ಸಂದಿಗೆ ಬಿದ್ದ ಕಾರಣ ಕೆಲ ಸಮಯ ನೋವು ಅನುಭವಿಸಿದರು. ಗಾಯಗೊಂಡಿದ್ದಾರೆ ಎಂದು ಕೆಲ ಕಾಲ ಆತಂಕ ನಿರ್ಮಾಣವಾಗಿತ್ತು, ಆದರೆ ಕೊಹ್ಲಿ ಕೆಲ ಸಮಯದಲ್ಲೇ ಮತ್ತೆ ತಮ್ಮ ಅಭ್ಯಾಸ ಆರಂಭಿಸುವ ಮೂಲಕ ಆತಂಕವನ್ನು ದೂರ ಮಾಡಿದರು. ಅಭ್ಯಾಸದ ನಂತರ ಅಭಿಮಾನಿಗಳ ಸೆಲ್ಫಿಗೆ ಫೋಸ್ ಕೊಟ್ಟ ಕೊಹ್ಲಿ ಆಟೋಗ್ರಾಫ್ ನೀಡುವ ಮೂಲಕ ಅಭಿಮಾನಗಳ ಜೊತೆ ಸ್ವಲ್ಪ ಸಮಯ ಕಳೆದರು.

ನನಗೆ ಯಾರ ಭಯವೂ ಇಲ್ಲ: ಭಾರತದ ಈ ಬೌಲರ್‌ನನ್ನು ಎದುರಿಸಲು ಸಿದ್ಧ ಎಂದ ಜೋಸ್ ಬಟ್ಲರ್

ರಿಷಬ್ ಪಂತ್ ಕಠಿಣ ಅಭ್ಯಾಸ

ರಿಷಬ್ ಪಂತ್ ಕಠಿಣ ಅಭ್ಯಾಸ

ಜಿಂಬಾಬ್ವೆ ವಿರುದ್ಧ ತಂಡದಲ್ಲಿ ಸ್ಥಾನ ಪಡೆದಿದ್ದ ರಿಷಬ್ ಪಂತ್ ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ ತಂಡದಲ್ಲಿ ಉಳಿಯುತ್ತಾರೋ ಅಥವಾ ರೋಹಿತ್ ಶರ್ಮಾ ಅನುಭವಿ ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡುತ್ತಾರಾ ಎಂದು ನೋಡಬೇಕಿದೆ. ಸೆಮಿಫೈನಲ್‌ನಲ್ಲಿ ತಂಡದ ಮ್ಯಾನೇಜ್‌ಮೆಂಟ್ ದಿನೇಶ್ ಕಾರ್ತಿಕ್ ಅವರನ್ನು ಕರೆತರುವ ಸಾಧ್ಯತೆಯಿದೆ ಎಂದು ರೋಹಿತ್ ಶರ್ಮಾ ಸೂಚನೆ ನೀಡಿದ್ದಾರೆ.

ಎಲ್ಲಾ ಊಹೆಗಳ ಹೊರತಾಗಿ, ರಿಷಬ್ ಪಂತ್ ನೆಟ್ಸ್‌ನಲ್ಲಿ ಸಾಕಷ್ಟು ಬೆವರು ಹರಿಸಿದರು. ವಿಕೆಟ್‌ನಲ್ಲಿ ಮುಂದೆ ಬಂದು ಹೊಡೆಯುವುದನ್ನು ಅವರು ಹೆಚ್ಚು ಅಭ್ಯಾಸ ಮಾಡಿದರು. ಬೌಲರ್ ಹರ್ಷಲ್ ಪಟೇಲ್ ಕೂಡ ಕಠಿಣ ಅಭ್ಯಾಸ ಮಾಡಿದರು.

ವಿಶ್ವಕಪ್‌ನಲ್ಲಿ ಭಾರತ ತಂಡ

ವಿಶ್ವಕಪ್‌ನಲ್ಲಿ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್ದೀಪ್ ಸಿಂಗ್ ಮೊಹಮ್ಮದ್ ಶಮಿ.

ಸ್ಟ್ಯಾಂಡ್‌ಬೈ ಆಟಗಾರರು: ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್

Story first published: Wednesday, November 9, 2022, 16:05 [IST]
Other articles published on Nov 9, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+