ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನಗೆ ಯಾರ ಭಯವೂ ಇಲ್ಲ: ಭಾರತದ ಈ ಬೌಲರ್‌ನನ್ನು ಎದುರಿಸಲು ಸಿದ್ಧ ಎಂದ ಜೋಸ್ ಬಟ್ಲರ್

Ind vs Eng: Jos Buttler said I don’t fear anyone on facing Bhuvneshwar Kumar in important clash

ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ಮೇಲುಗೈ ಸಾಧಿಸಲು ಸಿದ್ಧತೆಯನ್ನು ನಡೆಸುತ್ತಿವೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಪ್ರತಿಕ್ರಿಯೆ ನೀಡಿದ್ದು ಭಾರತದ ದಾಳಿಯನ್ನು ಸರ್ಥವಾಗಿ ಎದುರಿಸಲು ಸಿದ್ಧವಾಗಿದ್ದೇವೆ ಎಂಬ ಸೂಚನೆ ನೀಡಿದ್ದಾರೆ.

ಇನ್ನು ಈ ಬಾರಿ ವಿಶ್ವಕಪ್‌ನಲ್ಲಿ ಹೊಸ ಚೆಂಡಿನಲ್ಲಿ ಟೀಮ್ ಇಂಡಿಯಾದ ಅನುಭವಿ ಭುವನೇಶ್ವರ್ ಕುಮಾರ್ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿದ್ದಾರೆ. ಭಾರತದ ಅನುಭವಿ ಬೌಲರ್‌ನ ದಾಳಿಯನ್ನು ಎದುರಿಸಲು ಇಂಗ್ಲೆಂಡ್ ತಂಡ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದಿರುವ ಜೋಸ್ ಬಟ್ಲರ್ ವೈಯಕ್ತಿಕವಾಗಿ ತನಗೆ ಯಾರ ಭಯವೂ ಇಲ್ಲ ಎಂಬ ಮಾತನ್ನು ಹೇಳಿದ್ದಾರೆ. ಈ ಮೂಲಕ ಇಂಗ್ಲೆಂಡ್ ಪರವಾಗಿ ದಾಳಿಗೆ ತಾನು ಸಿದ್ಧ ಎಂಬ ಸೂಚನೆ ನೀಡಿದ್ದಾರೆ.

FIFA World Cup 2022: ನೇಮರ್ ನಾಯಕತ್ವದ 5 ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡ ಪ್ರಕಟFIFA World Cup 2022: ನೇಮರ್ ನಾಯಕತ್ವದ 5 ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡ ಪ್ರಕಟ

ಕುತೂಹಲ ಕೆರಳಿಸಿದೆ ಭುವಿ-ಬಟ್ಲರ್ ಮುಖಾಮುಖಿ

ಕುತೂಹಲ ಕೆರಳಿಸಿದೆ ಭುವಿ-ಬಟ್ಲರ್ ಮುಖಾಮುಖಿ

ಗುರುವಾರ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಮಹತ್ವದ ಸೆಮಿಫೈನಲ್ ಕದನ ನಡೆಯಲಿದ್ದು ಈ ಪಂದ್ಯಕ್ಕೆ ಅಡಿಲೇಡ್ ಓವಲ್ ಆತೊಥ್ಯ ವಹಿಸಲಿದೆ. ಈ ಮುಖಾಮುಖಿಯಲ್ಲಿ ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಹಾಗೂ ಇಂಗ್ಲೆಂಡ್‌ನ ಆರಂಭಿಕ ಆಟಗಾರ ಜೋಸ್ ಬಟ್ಲರ್ ನಡುವಿನ ಸೆಣೆಸಾಟ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಇದರಲ್ಲಿ ಮೇಲುಗೈ ಸಾಧಿಸುವ ವಿಶ್ವಾಸವನ್ನು ಇಂಗ್ಲೆಂಡ್ ನಾಯಕ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ನಾಯಕನ ವಿರುದ್ಧ ಭುವಿ ಭರ್ಜರಿ ಯಶಸ್ಸು

ಇಂಗ್ಲೆಂಡ್ ನಾಯಕನ ವಿರುದ್ಧ ಭುವಿ ಭರ್ಜರಿ ಯಶಸ್ಸು

ಇನ್ನು ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಅದ್ಭುತ ದಾಖಲೆಯನ್ನು ಹೊಂದಿರುವ ಆಟಗಾರ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್. ಆದರೆ ಭಾರತದ ಅನುಭವಿ ಆಟಗಾರ ಭುವನೇಶ್ವರ್ ಕುಮಾರ್ ವಿರುದ್ಧ ಜೋಸ್ ಬಟ್ಲರ್ ಸಾಧನೆ ಕಳಪೆಯಾಗಿದೆ. ಈ ಇಬ್ಬರು ಆಟಗಾರರ ಈವರೆಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಒಟ್ಟು 8 ಬಾರಿ ಮುಖಾಮುಖಿಯಾಗಿದ್ದಾರೆ. ಇದರಲ್ಲಿ ಬಟ್ಲರ್ 5 ಬಾರಿ ಭುವಿಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡಿದ್ದಾರೆ. ಜೋಸ್ ಬಟ್ಲರ್‌ಗೆ 32 ಎಸೆತಗಳನ್ನು ಎಸೆದಿರುವ ಭುವಿ ಕೇವಲ 30 ರನ್ ಮಾತ್ರವೇ ನೀಡಿದ್ದಾರೆ. ಈ ಮೂಲಕ ಇಂಗ್ಲೆಂಡ್ ನಾಯಕನ ವಿರುದ್ಧ ಭರ್ಜರಿ ಯಶಸ್ಸು ಸಾಧಿಸಿದ್ದಾರೆ.

ನನ್ನ ಆಟದ ಮೇಲೆ ನನಗೆ ವಿಶ್ವಾಸವಿದೆ

ನನ್ನ ಆಟದ ಮೇಲೆ ನನಗೆ ವಿಶ್ವಾಸವಿದೆ

ಭುವನೇಶ್ವರ್ ಕುಮಾರ್ ದಾಳಿಯನ್ನು ಎದುರಿಸುವ ಬಗ್ಗೆ ಜೋಸ್ ಬಟ್ಲರ್‌ಗೆ ಪ್ರಶ್ನೆಗಳು ಎದುರಾದಾಗ ನನಗೆ ಯಾರ ಭಯವೂ ಎಂದು ಬಟ್ಲರ್ ಹೇಳಿದ್ದು ತಾನು ಭುವಿ ದಾಳಿ ಎದುರಿಸಲು ಸಜ್ಜಾಗಿದ್ದೇನೆ ಎಂದಿದ್ದಾರೆ. "ನನ್ನ ಆಟದ ಮೇಲೆ ನನಗೆ ಯಾವಾಗಲೂ ಆತ್ಮವಿಶ್ವಾಸವಿದೆ. ಕೆಲ ಸಂದರ್ಭಗಳಲ್ಲಿ ಕೆಲ ಬೌಲರ್‌ಗಳು ನಿಮ್ಮ ವಿರುದ್ಧ ಯಶಸ್ಸು ಸಾಧಿಸುವ ಸಾಧ್ಯತೆಗಳು ಇರುತ್ತವೆ. ಅವರ ವಿರುದ್ಧ ನಿಮಗೆ ಉತ್ತಮ ಅಥವಾ ಕೆಲ ಸಮಯಗಳು ಬರುತ್ತವೆ. ಆದರೆ ನನಗೆ ಯಾರ ಮೇಲೆಯೂ ಭಯವಿಲ್ಲ. ನಾನು ಯಾವಾಗಲೂ ಉತ್ತಮವಾಗಿ ಸಿದ್ಧತೆ ಮಾಡಿಕೊಂಡಿರುತ್ತೇನೆ ಹಾಗೂ ಮುಂದೆ ಬರುವ ಎಸೆತಗಳನ್ನು ಎದುರಿಸಲು ಸಜ್ಜಾಗಿರುತ್ತೇನೆ, ಬೌಲರ್‌ನನ್ನು ಅಲ್ಲ"ಎಂದಿದ್ದಾರೆ ಜೋಸ್ ಬಟ್ಲರ್.

ಸ್ಕ್ವಾಡ್‌ಗಳು ಹೀಗಿದೆ

ಸ್ಕ್ವಾಡ್‌ಗಳು ಹೀಗಿದೆ

ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಫಿಲಿಪ್ ಸಾಲ್ಟ್, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಅಲೆಕ್ಸ್ ಹೇಲ್ಸ್, ಟೈಮಲ್ ಮಿಲ್ಸ್

Story first published: Wednesday, November 9, 2022, 10:33 [IST]
Other articles published on Nov 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X