For Quick Alerts
ALLOW NOTIFICATIONS  
For Daily Alerts
 

ಭಾರತದ ವಿರುದ್ಧ ವಿವಿಯನ್ ರಿಚರ್ಡ್ಸ್, ಪಾಂಟಿಂಗ್, ಸ್ಮಿತ್ ನಿರ್ಮಿಸಿದ್ದ ದಾಖಲೆ ಉಡೀಸ್ ಮಾಡಿ ನಂ.1 ಆದ ರೂಟ್!

IND vs ENG: Joe Root becomes the player with most test centuries against India

ಕಳೆದ ವರ್ಷ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡು ಮುಂದೂಡಲ್ಪಟ್ಟಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಇದೇ ಜುಲೈ 1ರಿಂದ ಮರು ಆಯೋಜನೆಯಾಗಿತ್ತು. ಎಡ್ಜ್ ಬ್ಯಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ಇಂದು ( ಜುಲೈ 5 ) ಮುಕ್ತಾಯಗೊಂಡಿದ್ದು, ಐದನೇ ದಿನದಾಟದಂದು ಆತಿಥೇಯ ಇಂಗ್ಲೆಂಡ್ ಟೀಮ್ ಇಂಡಿಯಾ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ 2 - 2 ಸಮಬಲ ಸಾಧಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿ 416 ಕಲೆಹಾಕಿದ್ದ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು 284 ರನ್‌ಗಳಿಗೆ ಆಲ್ ಔಟ್ ಮಾಡಿ 132 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಮಂಕಾದ ಟೀಮ್ ಇಂಡಿಯಾ 245 ರನ್‌ಗಳಿಗೆ ಆಲ್ ಔಟ್ ಆಗಿ ಆತಿಥೇಯ ಇಂಗ್ಲೆಂಡ್ ತಂಡಕ್ಕೆ 378 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಎದುರು ಮಂಕಾಗಿದ್ದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ಅಕ್ಷರಶಃ ಅಬ್ಬರಿಸಿತು.

ಇಂಗ್ಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದ ಅಲೆಕ್ಸ್ ಲೀಸ್ 56 ರನ್ ಕಲೆಹಾಕಿದರೆ, ಜ್ಯಾಕ್ ಕ್ರಾವ್ಲೆ 46 ರನ್ ಕಲೆಹಾಕಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಒಲ್ಲಿ ಪೋಪ್ ಡಕೌಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಹೀಗೆ ಇಂಗ್ಲೆಂಡ್ 109 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಾಗ ನಾಲ್ಕನೇ ವಿಕೆಟ್‌ಗೆ ಜತೆಯಾದ ಜೋ ರೂಟ್ ಮತ್ತು ಜಾನಿ ಬೈರ್ ಸ್ಟೋ 269 ರನ್‌ಗಳ ಬೃಹತ್ ಜತೆಯಾಟ ಆಡುವುದರ ಮೂಲಕ ತಂಡಕ್ಕೆ ಗೆಲುವನ್ನು ತಂದಿಟ್ಟರು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಜಾನಿ ಬೇರ್ ಸ್ಟೋ ಈ ಇನ್ನಿಂಗ್ಸ್‌ನಲ್ಲಿ ಅಜೇಯ 114 ರನ್ ಗಳಿಸಿದರೆ, ಜೋ ರೂಟ್ 142 ರನ್ ಕಲೆಹಾಕಿ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ತನ್ನ 28ನೇ ಟೆಸ್ಟ್ ಶತಕವನ್ನು ಪೂರೈಸಿದ ಜೋ ರೂಟ್ ಟೀಂ ಇಂಡಿಯಾ ವಿರುದ್ಧ ವಿಶೇಷ ದಾಖಲೆಯೊಂದನ್ನು ನಿರ್ಮಿಸಿ ಸ್ಟೀವ್ ಸ್ಮಿತ್, ವಿವಿಯನ್ ರಿಚರ್ಡ್ಸ್ ಹಾಗೂ ರಿಕಿ ಪಾಂಟಿಂಗ್ ಈ ಹಿಂದೆ ಹೊಂದಿದ್ದ ದಾಖಲೆಯನ್ನು ಪುಡಿಪುಡಿ ಮಾಡಿದ್ದಾರೆ. ಈ ಕುರಿತಾದ ವಿವರ ಮುಂದೆ ಓದಿ.

ಟೀಮ್ ಇಂಡಿಯಾ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಆಟಗಾರ

ಟೀಮ್ ಇಂಡಿಯಾ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಆಟಗಾರ

ಜೋ ರೂಟ್ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಭಾರತದ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿರುವ ಆಟಗಾರರ ಪಟ್ಟಿ ಕೆಳಕಂಡಂತಿದೆ.


1. ಜೋ ರೂಟ್: ಜೋ ರೂಟ್ ಟೀಮ್ ಇಂಡಿಯಾ ವಿರುದ್ಧ 25 ಟೆಸ್ಟ್ ಪಂದ್ಯಗಳನ್ನಾಡಿದ್ದು 9 ಶತಕಗಳನ್ನು ಬಾರಿಸಿ ಟೀಮ್ ಇಂಡಿಯಾ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.


2. ಸ್ಟೀವ್ ಸ್ಮಿತ್: 14 ಪಂದ್ಯಗಳಲ್ಲಿ 8 ಶತಕ

3. ಗ್ಯಾರಿ ಸಾಬರ್ಸ್: 18 ಪಂದ್ಯಗಳಲ್ಲಿ 8 ಶತಕ

4. ವಿವಿಯನ್ ರಿಚರ್ಡ್ಸ್: 28 ಪಂದ್ಯಗಳಲ್ಲಿ 8 ಶತಕ

5. ರಿಕಿ ಪಾಂಟಿಂಗ್‌: 29 ಪಂದ್ಯಗಳಲ್ಲಿ 8 ಶತಕ

ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಹಿಂದಿಕ್ಕಿದ ರೂಟ್

ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಹಿಂದಿಕ್ಕಿದ ರೂಟ್

ರೂಟ್ ಟೀಮ್ ಇಂಡಿಯಾ ವಿರುದ್ಧದ ಈ ಪಂದ್ಯದಲ್ಲಿ ಶತಕ ಬಾರಿಸುವುದರ ಮೂಲಕ 28 ಅಂತರರಾಷ್ಟ್ರೀಯ ಟೆಸ್ಟ್ ಶತಕವನ್ನು ಪೂರೈಸಿದ್ದಾರೆ. ಈ ಮೂಲಕ ತಲಾ 27 ಶತಕಗಳನ್ನು ಬಾರಿಸಿದ್ದ ವಿರಾಟ್ ಕೊಹ್ಲಿ, ಸ್ಟೀವನ್ ಸ್ಮಿತ್, ಗ್ರೇಮ್ ಸ್ಮಿತ್ ಹಾಗೂ ಅಲನ್ ಬಾರ್ಡರ್ ಅವರನ್ನು ಜೋ ರೂಟ್ ಹಿಂದಿಕ್ಕಿದ್ದಾರೆ.

ಯಾವ ದೇಶದ ವಿರುದ್ಧ ಎಷ್ಟು ಶತಕ?

ಯಾವ ದೇಶದ ವಿರುದ್ಧ ಎಷ್ಟು ಶತಕ?

ಜೋ ರೂಟ್ ಸಿಡಿಸಿರುವ ಶತಕಗಳ ದೇಶಾವಾರು ಪಟ್ಟಿ

ಭಾರತದ ವಿರುದ್ಧ - 9 ಶತಕಗಳು

ನ್ಯೂಜಿಲೆಂಡ್‌, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್‌ ವಿರುದ್ಧ - ತಲಾ 4 ಶತಕಗಳು

ಆಸ್ಟ್ರೇಲಿಯಾ ವಿರುದ್ಧ 3 ಶತಕಗಳು

ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ - ತಲಾ 2 ಶತಕಗಳು

Story first published: Tuesday, July 5, 2022, 18:53 [IST]
Other articles published on Jul 5, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+