Ind vs Eng: ಇಂಗ್ಲೆಂಡ್ ಪ್ರವಾಸ ಕಳೆದುಕೊಂಡ ಕೆಎಲ್ ರಾಹುಲ್; ಚಿಕಿತ್ಸೆಗಾಗಿ ಜರ್ಮನಿಗೆ ಪ್ರಯಾಣ

ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ತೊಡೆಸಂದು ಗಾಯದ ಚಿಕಿತ್ಸೆಗಾಗಿ ಶೀಘ್ರದಲ್ಲೇ ಜರ್ಮನಿಗೆ ಪ್ರಯಾಣಿಸಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗುರುವಾರ (ಜೂನ್ 16) ಕ್ರಿಕ್‌ಬಜ್‌ಗೆ ದೃಢಪಡಿಸಿದೆ.
ಮೆನ್ ಇನ್ ಬ್ಲೂ ತಂಡದ ಉಪನಾಯಕ ಅವರು ಪುನರಾವರ್ತಿತ ತೊಡೆಸಂದು ಗಾಯದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ತವರು ಸರಣಿಯಿಂದ ಮತ್ತು ಮುಂಬರುವ ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದಾರೆ. ಗುರುವಾರ ಟೀಮ್ ಇಂಡಿಯಾ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದೆ.
ಜುಲೈ 1ರಿಂದ ಪ್ರಾರಂಭವಾಗುವ ತಲಾ 3 ಏಕದಿನ ಪಂದ್ಯಗಳು ಮತ್ತು ಟಿ20 ಪಂದ್ಯಗಳು ಮತ್ತು ಒಂದು ಟೆಸ್ಟ್ ಪಂದ್ಯ ಸೇರಿದಂತೆ 6 ವೈಟ್ ಬಾಲ್ ಪಂದ್ಯಗಳಿಗಾಗಿ ಭಾರತವು ಇಂಗ್ಲೆಂಡ್‌ಗೆ ಪ್ರಯಾಣಿಸಲಿದೆ. ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಕೆಎಲ್ ರಾಹುಲ್ ಅವರನ್ನು ಪ್ರವಾಸಕ್ಕೆ ಉಪ ನಾಯಕ ಎಂದು ಘೋಷಿಸಲಾಗಿತ್ತು. ಆದರೆ ಬಲಗೈ ಆಟಗಾರ ಗಾಯದ ಕಾರಣದಿಂದ ವಿದೇಶಿ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ.

"ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೆಎಲ್ ರಾಹುಲ್ ಫಿಟ್‌ನೆಸ್‌ನಲ್ಲಿ ಕೆಲಸ ಮಾಡುತ್ತಿದೆ ಮತ್ತು ಅವರು ಶೀಘ್ರದಲ್ಲೇ ಜರ್ಮನಿಗೆ ಹೋಗಲಿದ್ದಾರೆ,'' ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ. ಕೆಎಲ್ ರಾಹುಲ್ ಜೂನ್ ಅಂತ್ಯ ಅಥವಾ ಜುಲೈ ಆರಂಭದಲ್ಲಿ ದೇಶ ತೊರೆದು ಜರ್ಮನಿಗೆ ಹೋಗಲಿದ್ದಾರೆ. ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಶ್ರೀಲಂಕಾ ವಿರುದ್ಧದ ಸ್ವದೇಶಿ ಸರಣಿಯಲ್ಲಿ ರಾಹುಲ್ ಕೊನೆಯದಾಗಿ ಭಾರತಕ್ಕಾಗಿ ಆಡಿದ್ದರು.
ಕೆಎಲ್ ರಾಹುಲ್ ಭಾರತಕ್ಕಾಗಿ 43 ಟೆಸ್ಟ್, 56 ಟಿ20 ಪಂದ್ಯ ಮತ್ತು 42 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಒಟ್ಟು 6,000 ರನ್ ಗಳಿಸಿದ್ದಾರೆ.

ಇಂಗ್ಲೆಂಡ್ vs ಭಾರತ ಟೆಸ್ಟ್ ಸರಣಿ:
5ನೇ ಟೆಸ್ಟ್: ಎಡ್ಜ್‌ಬಾಸ್ಟನ್- ಜುಲೈ 1ರಿಂದ ಜುಲೈ 5ರವರೆಗೆ
ಇಂಗ್ಲೆಂಡ್ ವಿರುದ್ಧ ಭಾರತದ ಟಿ20 ಸರಣಿ ವೇಳಾಪಟ್ಟಿ:
1ನೇ ಟಿ20: ಏಜಿಯಾಸ್ ಬೌಲ್ - ಜುಲೈ 7
2ನೇ ಟಿ20: ಎಡ್ಜ್‌ಬಾಸ್ಟನ್- ಜುಲೈ 9
3ನೇ ಟಿ20: ಟ್ರೆಂಟ್ ಬ್ರಿಡ್ಜ್- ಜುಲೈ 10
ಇಂಗ್ಲೆಂಡ್ ವಿರುದ್ಧ ಭಾರತ 2022, ODI ಸರಣಿ ವೇಳಾಪಟ್ಟಿ:
1ನೇ ಏಕದಿನ: ಕಿಯಾ ಓವಲ್- ಜುಲೈ 12
2ನೇ ಏಕದಿನ: ಲಾರ್ಡ್ಸ್ - ಜುಲೈ 14
3ನೇ ಏಕದಿನ: TBA
ಮತ್ತೊಂದೆಡೆ ಬಿಸಿಸಿಐ ಬುಧವಾರ (ಜೂನ್ 15) ಐರ್ಲೆಂಡ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಎರಡು ಪಂದ್ಯಗಳ ಟಿ20 ಸರಣಿಗೆ ಹೆಸರಿಸಲಾದ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಇದೇ ವೇಳೆ ಸೂರ್ಯಕುಮಾರ್ ಯಾದವ್ ಕೂಡ ಗಾಯದ ನಂತರ ಪುನರಾಗಮನ ಮಾಡುತ್ತಾರೆ. ವೇಗಿ ಭುವನೇಶ್ವರ್ ಕುಮಾರ್ ಅವರು ಸರಣಿಗೆ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಭಾರತವು ಜೂನ್ 26 ಮತ್ತು 28 ರಂದು ಡಬ್ಲಿನ್‌ನಲ್ಲಿ ಎರಡು ಟಿ20 ಪಂದ್ಯಗಳನ್ನು ಆಡಲಿದೆ.
ಐರ್ಲೆಂಡ್ ವಿರುದ್ಧ ಭಾರತದ ಟಿ20 ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪ ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಆರ್. ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications