For Quick Alerts
ALLOW NOTIFICATIONS  
For Daily Alerts
 

IND vs ENG: 92 ವರ್ಷಗಳ ಭಾರತ ಟೆಸ್ಟ್ ಇತಿಹಾಸದಲ್ಲಿ ಬೃಹತ್ ದಾಖಲೆ ಬರೆದ ಕುಲದೀಪ್ ಯಾದವ್!

ಗುರುವಾರ, ಮಾರ್ಚ್ 7ರಂದು ಧರ್ಮಶಾಲಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಮೊದಲನೇ ದಿನದಂದು ಭಾರತ ತಂಡದ ಪರ ಸ್ಪಿನ್ನರ್ ಕುಲದೀಪ್ ಯಾದವ್ 5 ವಿಕೆಟ್ ಕಬಳಿಸುವ ಮೂಲಕ ಸಂವೇದನಾಶೀಲ ಪ್ರದರ್ಶನ ನೀಡಿದರು.

ಎಡಗೈ ಮಣಿಕಟ್ಟಿನ ಸ್ಪಿನ್ನರ್ ಪ್ರಚಂಡ ಫಾರ್ಮ್‌ನಲ್ಲಿದ್ದರು ಮತ್ತು ಅವರು 72 ರನ್‌ಗಳಿಗೆ 5 ವಿಕೆಟ್‌ಗಳೊಂದಿಗೆ ಮುಗಿಸಿದರು. ಅದ್ಭುತ ಆರಂಭದ ನಂತರ ಇಂಗ್ಲೆಂಡ್ ತಂಡವನ್ನು ಕೇವಲ 218 ರನ್‌ಗಳಿಗೆ ಆಲೌಟ್ ಮಾಡಿದರು.

IND vs ENG Kuldeep Yadav Wrote A Big Record in 92 Years of India Test History

ಈ ಪ್ರಕ್ರಿಯೆಯಲ್ಲಿ ತೆಗೆದುಕೊಂಡ ಎಸೆತಗಳಿಗೆ ಸಂಬಂಧಿಸಿದಂತೆ ಕುಲದೀಪ್ ಯಾದವ್ ಅತ್ಯಂತ ವೇಗವಾಗಿ 50 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತೀಯ ಕ್ರಿಕೆಟ್ ತಂಡದ ಬೌಲರ್ ಎನಿಸಿಕೊಂಡರು. ಈ ಮೂಲಕ 92 ವರ್ಷಗಳ ಭಾರತ ಟೆಸ್ಟ್ ಇತಿಹಾಸದಲ್ಲಿ ಬೃಹತ್ ದಾಖಲೆ ನಿರ್ಮಿಸಿದರು.

ಕುಲದೀಪ್ ಯಾದವ್ ಅವರು 50 ಟೆಸ್ಟ್ ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಲು ಕೇವಲ 1871 ಎಸೆತಗಳನ್ನು ತೆಗೆದುಕೊಂಡರು. ಈ ಪಟ್ಟಿಯಲ್ಲಿ ಅಕ್ಷರ್ ಪಟೇಲ್ (2205) ಮತ್ತು ಜಸ್ಪ್ರೀತ್ ಬುಮ್ರಾ (2520) ಅವರು ಕುಲದೀಪ್ ಯಾದವ್ ಹಿಂದೆ ಇದ್ದಾರೆ.

ಭಾರತದ ಟೆಸ್ಟ್ ಇತಿಹಾಸದಲ್ಲಿ ಬೌಲರ್‌ನೊಬ್ಬ ಮೊದಲ ಬಾರಿಗೆ 2000ಕ್ಕಿಂತ ಕಡಿಮೆ ಎಸೆತಗಳನ್ನು ಬೌಲಿಂಗ್ ಮಾಡುವ ಮೂಲಕ 50 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಿದ ಪ್ರಸಂಗವಿದು.

IND vs ENG Kuldeep Yadav Wrote A Big Record in 92 Years of India Test History

ಕುಲದೀಪ್ ಯಾದವ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಸ್ಪಿನ್ ಕೈಚಳಕದಿಂದ ಭಾರತ ತಂಡವು ಇಂಗ್ಲೆಂಡ್‌ ತಂಡದ ಮೊದಲ ಇನಿಂಗ್ಸ್ ಅನ್ನು 218 ರನ್‌ಗಳಿಗೆ ನಿಯಂತ್ರಣಗೊಳಿಸಿತು.

ನಂತರ ಟೀಮ್ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅವರ ಅರ್ಧಶತಕಗಳು ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ ಪಂದ್ಯದ ಮೊದಲನೇ ದಿನದಂದು ಭಾರತ ಒಂದು ವಿಕೆಟ್‌ಗೆ 135 ರನ್ ಗಳಿಸುವತ್ತ ಮುನ್ನಡೆಸಿದರು.

ನಾಯಕ ರೋಹಿತ್ 83 ಎಸೆತಗಳಲ್ಲಿ 52 ರನ್ ಮತ್ತು ಯಶಸ್ವಿ ಜೈಸ್ವಾಲ್ 58 ಎಸೆತಗಳಲ್ಲಿ 57 ರನ್ ಗಳಿಸುವ ಮೂಲಕ ಮೊದಲ ವಿಕೆಟ್‌ಗೆ ಕೇವಲ 20.4 ಓವರ್‌ಗಳಲ್ಲಿ 104 ರನ್‌ಗಳ ಜೊತೆಯಾಟವನ್ನು ನಿರ್ಮಿಸಿತು. ಸದ್ಯ ಭಾರತ ತಂಡ ಇದೀಗ 83 ರನ್‌ಗಳ ಹಿನ್ನಡೆಯಲ್ಲಿದೆ.

ಯಶಸ್ವಿ ಜೈಸ್ವಾಲ್ ತಮ್ಮ ಅರ್ಧಶತಕದ ಬಳಿಕ ಶೀಘ್ರದಲ್ಲೇ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ಆಫ್-ಸ್ಪಿನ್ನರ್ ಶೋಯೆಬ್ ಬಶೀರ್ ಬೌಲಿಂಗ್‌ನಲ್ಲಿ ಬೆನ್ ಫೋಕ್ಸ್ ಅವರಿಂದ ಸ್ಟಂಪ್ ಆದರು. ನಂತರ ಶುಭ್ಮನ್ ಗಿಲ್ ಅಜೇಯ 26 ರನ್ ಗಳಿಸಿ ರೋಹಿತ್ ಶರ್ಮಾಗೆ ಸಾಥ್ ನೀಡಿದರು.

ಕುಲದೀಪ್ ಯಾದವ್ 72 ರನ್‌ಗಳಿಗೆ 5 ವಿಕೆಟ್ ಮತ್ತು 100ನೇ ಟೆಸ್ಟ್ ಆಟಗಾರ ರವಿಚಂದ್ರನ್ ಅಶ್ವಿನ್ 51 ರನ್‌ಗಳಿಗೆ 4 ವಿಕೆಟ್ ಪಡೆದು ತಮ್ಮಲ್ಲಿ ಒಂಬತ್ತು ವಿಕೆಟ್‌ಗಳನ್ನು ಹಂಚಿಕೊಂಡರು. ಹೀಗಾಗಿ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಶೋಚನೀಯ ಮೊತ್ತಕ್ಕೆ ಆಲೌಟ್ ಆಯಿತು.

ಭಾರತದ ಸ್ಪಿನ್ ತ್ರಿವಳಿಗಳು ಇಂಗ್ಲೆಂಡ್‌ನ ಎಲ್ಲಾ 10 ವಿಕೆಟ್‌ಗಳನ್ನು ಹಂಚಿಕೊಂಡಾಗ ರವೀಂದ್ರ ಜಡೇಜಾ ಕೂಡ ಒಂದು ವಿಕೆಟ್ ಪಡೆದರು. ಇಂಗ್ಲೆಂಡ್ ಪರ ಝಾಕ್ ಕ್ರಾಲಿ 108 ಎಸೆತಗಳಲ್ಲಿ 79 ರನ್ ಗಳಿಸುವ ಮೂಲಕ ಪ್ರತಿರೋಧ ಒಡ್ಡಿದ ಏಕೈಕ ಆಟಗಾರನಾದರು.

Story first published: Thursday, March 7, 2024, 19:31 [IST]
Other articles published on Mar 7, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+