26ಕ್ಕೆ 5 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್: ಭಾರತದ ವಿರುದ್ಧ ಅಲ್ಪಮೊತ್ತಕ್ಕೆ 5 ವಿಕೆಟ್ ಕಳೆದುಕೊಂಡವರ ಪಟ್ಟಿ

ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಆಂಗ್ಲರ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಭರ್ಜರಿ ಜಯ ಸಾಧಿಸುವುದರ ಮೂಲಕ ಟೆಸ್ಟ್ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಂಡು ಇದೀಗ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟಕ್ಕೆ ಇಳಿದಿದೆ.
ಇತ್ತಂಡಗಳ ನಡುವಿನ ಮೊದಲನೇ ಏಕದಿನ ಪಂದ್ಯ ಇಂದು ( ಜುಲೈ 12 ) ಕೆನ್ನಿಂಗ್ಟನ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡು ಅತಿಥೇಯ ಇಂಗ್ಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.
ಅದರಂತೆ ಮೊದಲು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಟೀಮ್ ಇಂಡಿಯಾ ಬೌಲರ್ ಜಸ್ ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ಅಕ್ಷರಶಃ ತತ್ತರಿಸಿ ಮಕಾಡೆ ಮಲಗಿತು. ಮೊಹಮ್ಮದ್ ಶಮಿ ಎಸೆದ ಪಂದ್ಯದ ಮೊದಲ ಓವರ್‌ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 6 ರನ್ ಕಲೆಹಾಕಿದ್ದ ಇಂಗ್ಲೆಂಡ್ ಎರಡನೇ ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಶಮಿ ಎಸೆದ ಮೂರನೇ ಓವರ್‌ನಲ್ಲಿ ತನ್ನ ಮೂರನೇ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಆರನೇ ಮತ್ತು ಎಂಟನೇ ಓವರ್‌ಗಳಲ್ಲಿ ತಲಾ ಒಂದೊಂದು ವಿಕೆಟ್ ಕಳೆದುಕೊಂಡು 7.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 26 ರನ್ ಗಳಿಸಿತು. ಈ ಮೂಲಕ ಇಂಗ್ಲೆಂಡ್ ಟೀಮ್ ಇಂಡಿಯಾ ವಿರುದ್ಧ ಅಲ್ಪ ಮೊತ್ತಕ್ಕೆ ತನ್ನ 5 ವಿಕೆಟ್ ಕಳೆದುಕೊಂಡ ತಂಡ ಎಂಬ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.

ಭಾರತದ ವಿರುದ್ಧ ಅಲ್ಪ ಮೊತ್ತಕ್ಕೆ 5 ವಿಕೆಟ್ ಕಳೆದುಕೊಂಡ ತಂಡಗಳ ಪಟ್ಟಿ
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಟೀಮ್ ಇಂಡಿಯಾ ವಿರುದ್ಧ ಅಲ್ಪ ಮೊತ್ತಕ್ಕೆ ತನ್ನ ಮೊದಲ 5 ವಿಕೆಟ್‍ಗಳನ್ನು ಕಳೆದುಕೊಂಡ ತಂಡಗಳ ಪಟ್ಟಿ ಕೆಳಕಂಡಂತಿದೆ.
ಇಂಗ್ಲೆಂಡ್ - 26/5 ( 2022 )
ಪಾಕಿಸ್ತಾನ - 29/5 ( 1997 )
ಜಿಂಬಾಬ್ವೆ 30/5 (2005)
ವೆಸ್ಟ್ ಇಂಡೀಸ್ 32/5 (1997)
ಹೀಗೆ ಇಂಗ್ಲೆಂಡ್ 26 ರನ್‌ಗಳಿಗೆ ಟೀಮ್ ಇಂಡಿಯಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ತನ್ನ ಮೊದಲ 5 ವಿಕೆಟ್ ಕಳೆದುಕೊಳ್ಳುವುದರ ಮೂಲಕ ಈ ಹಿಂದೆ 29 ರನ್‌ಗಳಿಗೆ ಟೀಮ್ ಇಂಡಿಯಾ ವಿರುದ್ಧ ತನ್ನ 5 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನವನ್ನು ಹಿಂದಿಕ್ಕಿ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.

ಜಸ್ ಪ್ರೀತ್ ಬುಮ್ರಾ ಮ್ಯಾಜಿಕ್
ಇನ್ನು ಇಂಗ್ಲೆಂಡ್ ತಂಡದ ಈ ವೇಗದ ವಿಕೆಟ್ ಬೀಳುವಿಕೆಗೆ ಕಾರಣ ಟೀಮ್ ಇಂಡಿಯಾದ ಜಸ್ ಪ್ರೀತ್ ಬೂಮ್ರಾ. ಪಂದ್ಯದ ಎರಡನೇ ಓವರ್ ಬೌಲಿಂಗ್ ಮಾಡಿದ ಬುಮ್ರಾ ನಾಲ್ಕನೇ ಎಸೆತದಲ್ಲಿ ಜೇಸನ್ ರಾಯ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು ಹಾಗೂ ಆರನೇ ಎಸೆತದಲ್ಲಿ ಜೋ ರೂಟ್ ರಿಷಭ್ ಪಂತ್ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಮೂಲಕ ಜಸ್ಪ್ರೀತ್ ಬುಮ್ರಾ ತನ್ನ ಮೊದಲನೇ ಓವರ್‌ನಲ್ಲೇ ಯಾವುದೇ ರನ್ ನೀಡದೇ 2 ವಿಕೆಟ್ ಪಡೆದು ಮೇಡನ್ ಓವರ್ ಮಾಡಿದರು. ನಂತರ ಆರನೇ ಓವರ್ ಮಾಡಿದ ಜಸ್ ಪ್ರೀತ್ ಬುಮ್ರಾ ಮೂರನೇ ಎಸೆತದಲ್ಲಿ ಬೇರ್ ಸ್ಟೊವ್ ಅವರ ವಿಕೆಟ್ ಪಡೆದರು ಹಾಗೂ ಎಂಟನೇ ಓವರ್‌ನ ಐದನೇ ಎಸೆತದಲ್ಲಿ ಜಸ್ ಪ್ರೀತ್ ಬುಮ್ರಾ ಲಿಯಾಮ್ ಲಿವಿಂಗ್ ಸ್ಟನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ನಾಲ್ಕನೇ ವಿಕೆಟ್ ಪಡೆದರು. ಇನ್ನುಳಿದಂತೆ ಮೊಹಮ್ಮದ್ ಶಮಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರ ವಿಕೆಟ್ ಪಡೆದರು.

4 ಡಕ್ ಔಟ್
ಇನ್ನು ಇಂಗ್ಲೆಂಡ್ ತಂಡದ ಈ ವಿಕೆಟ್‍ಗಳ ಪೈಕಿ ನಾಲ್ವರು ಯಾವುದೇ ರನ್ ಗಳಿಸದೇ ಪೆವಿಲಿಯನ್ ಸೇರಿಕೊಂಡರು. ಜೇಸನ್ ರಾಯ್, ಜೋ ರೂಟ್, ಬೆನ್ ಸ್ಟೋಕ್ಸ್ ಮತ್ತು ಲಿಯಾಮ್ ಲಿವಿಂಗ್ ಸ್ಟನ್ ಶೂನ್ಯ ಸುತ್ತಿದರು. ಅದರಲ್ಲಿಯೂ ನಾಯಕ ಬೆನ್ ಸ್ಟೋಕ್ಸ್ ಗೋಲ್ಡನ್ ಡಕ್ ಔಟ್ ಆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications