ಇತಿಹಾಸದಲ್ಲಿ ಯಾವ ನಾಯಕನೂ ಮಾಡಿರದ ದಾಖಲೆ ಮಾಡಿದ ರೋಹಿತ್; ಕೊಹ್ಲಿ ದಾಖಲೆಯೂ ಉಡೀಸ್!

ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಇತ್ತೀಚೆಗಷ್ಟೇ ಮುಕ್ತಾಯವಾದ ಎಡ್ಜ್ ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಸೋಲುವುದರ ಮೂಲಕ ಮುಖಭಂಗ ಅನುಭವಿಸಿತ್ತು. ಇದಾದ ಬೆನ್ನಲ್ಲೇ ನಡೆದ 3 ಪಂದ್ಯಗಳ ಟ್ವೆಂಟಿ ಸರಣಿಯ ಪ್ರಥಮ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ತವರು ನೆಲದಲ್ಲಿಯೇ ಸೋಲಿನ ರುಚಿ ತೋರಿಸಿದ ಟೀಮ್ ಇಂಡಿಯಾ ಟೆಸ್ಟ್ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಂಡಿದೆ.
ಸೌತಾಂಪ್ಟನ್ ಏಜೀಸ್ ಬೌಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟಿ ಟ್ವೆಂಟಿ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 198 ರನ್ ಕಲೆಹಾಕಿ ಎದುರಾಳಿ ಇಂಗ್ಲೆಂಡ್ ತಂಡಕ್ಕೆ 199 ರನ್‌ಗಳ ಗುರಿಯನ್ನು ನೀಡಿತ್ತು.
ಅತ್ತ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾಗಿ ಟೀಮ್ ಇಂಡಿಯಾ ಬೌಲರ್‌ಗಳ ಎದುರು ಮಂಕಾದ ಇಂಗ್ಲೆಂಡ್ 19.3 ಓವರ್‌ಗಳಲ್ಲಿ 148 ರನ್ ಕಲೆಹಾಕಿ ಆಲ್ ಔಟ್ ಆಯಿತು. ಈ ಮೂಲಕ ಟೀಮ್ ಇಂಡಿಯಾ 50 ರನ್‌ಗಳ ಭರ್ಜರಿ ಜಯ ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ ಗೆಲುವಿನ ಖಾತೆ ತೆರೆದು 1-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ. ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿಯೇ ಯಾವುದೇ ನಾಯಕನೂ ಕೂಡ ಮಾಡಿರದಂತಹ ಬೃಹತ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಮುಂದೆ ಓದಿ.

ಸತತವಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿದ ನಾಯಕ
ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟಿ ಟ್ವೆಂಟಿ ಪಂದ್ಯದ ಗೆಲುವು ರೋಹಿತ್ ಶರ್ಮಾ ನಾಯಕನಾಗಿ ಗೆಲ್ಲಿಸಿದ ಸತತ 13ನೇ ಟಿ ಟ್ವೆಂಟಿ ಪಂದ್ಯದ ಗೆಲುವಾಗಿದೆ. ಈ ಮೂಲಕ ಈ ಹಿಂದೆ ಸತತ 12 ಟಿ ಟ್ವೆಂಟಿ ಪಂದ್ಯಗಳನ್ನು ನಾಯಕರಾಗಿ ಗೆದ್ದಿದ್ದ ಆಟಗಾರರ ದಾಖಲೆಗಳನ್ನು ರೋಹಿತ್ ಶರ್ಮಾ ಸರಿಗಟ್ಟಿದ್ದಾರೆ.

ಸತತವಾಗಿ ಅತಿ ಹೆಚ್ಚು ಟಿ ಟ್ವೆಂಟಿ ಪಂದ್ಯ ಗೆಲ್ಲಿಸಿದ ನಾಯಕರು
ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಸತತವಾಗಿ ಅತಿ ಹೆಚ್ಚು ಪಂದ್ಯ ಗೆಲ್ಲಿಸಿರುವ ನಾಯಕರುಗಳ ಪಟ್ಟಿ ಕೆಳಕಂಡಂತಿದೆ
ರೋಹಿತ್ ಶರ್ಮಾ ( ಭಾರತ ): ಸತತ 13 ಪಂದ್ಯಗಳಲ್ಲಿ ಗೆಲುವು
ಅಸ್ಗರ್ ಆಫ್ಘನ್ ( ಅಫ್ಘಾನಿಸ್ತಾನ): ಸತತ 12 ಟಿ ಟ್ವೆಂಟಿ ಪಂದ್ಯಗಳಲ್ಲಿ ಗೆಲುವು
ರಮೇಶ್ ಸತೀಶನ್ ( ರೊಮೇನಿಯ ): ಸತತ 12 ಟಿ ಟ್ವೆಂಟಿ ಪಂದ್ಯಗಳಲ್ಲಿ ಗೆಲುವು
ಈ ಮೂಲಕ ರೋಹಿತ್ ಶರ್ಮಾ ಸತತವಾಗಿ ಅತಿ ಹೆಚ್ಚು ಟಿ ಟ್ವೆಂಟಿ ಪಂದ್ಯಗಳನ್ನು ಗೆಲ್ಲಿಸಿದ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಆಸ್ಕರ್ ಅಫ್ಗನ್ ಮತ್ತು ರಮೇಶ್ ಸತೀಶನ್ ಅವರನ್ನು ಹಿಂದಿಕ್ಕಿ ನೂತನ ದಾಖಲೆಯನ್ನು ನಿರ್ಮಿಸಿದ್ದಾರೆ.

ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ ರೋಹಿತ್ ಶರ್ಮಾ
ರೋಹಿತ್ ಶರ್ಮಾ ಟಿ ಟ್ವೆಂಟಿ ನಾಯಕನಾಗಿ ಅತೀ ವೇಗವಾಗಿ 1000 ರನ್ ಪೂರೈಸಿದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿ 1000 ಟಿ ಟ್ವೆಂಟಿ ರನ್‌ಗಳನ್ನು 29 ಇನ್ನಿಂಗ್ಸ್‌ನಲ್ಲಿ ಪೂರೈಸಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ನಾಯಕನಾಗಿದ್ದಾಗ 1000 ಟಿ ಟ್ವೆಂಟಿ ರನ್ ಪೂರೈಸಲು 30 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಈ ಮೂಲಕ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications