IND vs ENG: ಕೊಹ್ಲಿಯ ಕಳಪೆ ಫಾರ್ಮ್ ಬಗ್ಗೆ ಮತ್ತೊಮ್ಮೆ ಕೇಳಿದಾಗ ತಾಳ್ಮೆ ಕಳೆದುಕೊಂಡ ರೋಹಿತ್ ಶರ್ಮಾ

ಗುರುವಾರ (ಜುಲೈ 14) ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 100 ರನ್‌ಗಳಿಂದ ಸೋತ ನಂತರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ತಾಳ್ಮೆಯಿಂದಿರಲು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ ಸೊನ್ನೆ ಸುತ್ತಿ ಔಟಾದರೆ, ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೇವಲ 16 ರನ್ ಗಳಿಸಿ ವಿಕೆಟ್ ಒಪ್ಪಿಸಿದ ನಂತರ ತಂಡದ ರನ್ ವೇಗಕ್ಕೆ ಕಡಿವಾಣ ಬಿತ್ತು.
ಎರಡನೇ ಏಕದಿನ ಮತ್ತು ಸರಣಿಯನ್ನು ಗೆಲ್ಲಲು 247 ರನ್ ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ ಕೇವಲ 146 ರನ್‌ಗಳಿಗೆ ಆಲೌಟ್ ಆಗಿ ಮುಖಭಂಗ ಅನುಭವಿಸಿತು. ಕಳೆದ ಪಂದ್ಯದ ಸೋಲಿಗೆ ಇಂಗ್ಲೆಂಡ್ ಸೇಡು ತೀರಿಸಿಕೊಂಡಿತು. ಇದೇ ವೇಳೆ ಮೂರು ಪಂದ್ಯಗಳ ಏಕದಿನ ಸರಣಿ ಈಗ 1-1ರಲ್ಲಿ ಸಮಬಲಗೊಂಡಿದೆ.

ಯಾಕೆ ಹೀಗೆ ಆಗುತ್ತಿದೆ, ನನಗೆ ಅರ್ಥ ಆಗುತ್ತಿಲ್ಲ
ಪತ್ರಕರ್ತರೊಬ್ಬರು ವಿರಾಟ್ ಕೊಹ್ಲಿಯ ಫಾರ್ಮ್ ಬಗ್ಗೆ ಪ್ರಶ್ನೆ ಕೇಳಿದಾಗ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೊಂಚ ತಾಳ್ಮೆ ಕಳೆದುಕೊಂಡಂತಿತ್ತು. ಮತ್ತೆ ಮತ್ತೆ ಕೇಳಿದ ಪ್ರಶ್ನೆಗೆ ಉದ್ರೇಕಗೊಂಡ ಹಿಂದಿಯಲ್ಲಿ ರೋಹಿತ್ ಶರ್ಮಾ ಹೀಗೆ ಹೇಳಿದರು: "ಕ್ಯೂನ್ ಹೋ ರಹೀ ಹೈ ಭಾಯಿ, ಮುಝೆ ಸಮಾಜ್ ಮೇನ್ ನಹೀ ಆತಾ (ಯಾಕೆ ಹೀಗೆ ಆಗುತ್ತಿದೆ, ನನಗೆ ಅರ್ಥ ಆಗುತ್ತಿಲ್ಲ).
"ಅವರು ಹಲವು ಪಂದ್ಯಗಳನ್ನು ಆಡಿದ್ದಾರೆ, ಅವರು ಹಲವು ವರ್ಷಗಳಿಂದ ಆಡುತ್ತಿದ್ದಾರೆ. ಅವರಿಗೆ ಯಾವುದೇ ಭರವಸೆಯ ಅಗತ್ಯವಿಲ್ಲ. ನಾನು ಈ ಹಿಂದೆಯೂ ಹೇಳಿದ್ದೇನೆ, ಪ್ರತಿಯೊಬ್ಬ ಆಟಗಾರನಿಗೂ ಫಾರ್ಮ್ ಏರುತ್ತದೆ ಮತ್ತು ಇಳಿಯುತ್ತದೆ. ಭಾರತಕ್ಕಾಗಿ ಹಲವು ಪಂದ್ಯಗಳನ್ನು ಆಡಿರುವ ಮತ್ತು ಹಲವು ಪಂದ್ಯಗಳನ್ನು ಗೆದ್ದಿರುವ ಅವರಂತಹ ಆಟಗಾರ (ವಿರಾಟ್ ಕೊಹ್ಲಿ), ಫಾರ್ಮ್‌ಗೆ ಮರಳಲು ಕೇವಲ ಒಂದೆರಡು ಇನ್ನಿಂಗ್ಸ್‌ಗಳ ಅಗತ್ಯವಿದೆ," ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಭಾರತ ನಾಯಕ ರೋಹಿತ್ ಶರ್ಮಾ ಹೇಳಿದರು.

ವಿರಾಟ್ ಕೊಹ್ಲಿಯ ರನ್ ಮತ್ತು ಸರಾಸರಿಯನ್ನು ಗಮನಿಸಬೇಕು
"ಚರ್ಚೆಗಳು ಯಾವಾಗಲೂ ಅವರ ಫಾರ್ಮ್ ಬಗ್ಗೆ ನಡೆಯುತ್ತವೆ, ಆದರೆ ಪ್ರತಿಯೊಬ್ಬ ಆಟಗಾರನು ತನ್ನ ವೃತ್ತಿಜೀವನದಲ್ಲಿ ಕುಸಿತದ ಮೂಲಕ ಹೋಗುತ್ತಾನೆ ಎಂದು ನಾವು ಯೋಚಿಸಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಆಡಿದ ಪ್ರತಿ ಪಂದ್ಯದಲ್ಲೂ ಸಾಧನೆ ಮಾಡಿದ ಆಟಗಾರ ಇತಿಹಾಸದಲ್ಲಿ ಇಲ್ಲ. ಏಕದಿನ ಪಂದ್ಯಗಳಲ್ಲಿ ನೀವು ವಿರಾಟ್ ಕೊಹ್ಲಿಯ ರನ್ ಮತ್ತು ಸರಾಸರಿಯನ್ನು ಗಮನಿಸಬೇಕು," ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದರು.
ವಿರಾಟ್ ಕೊಹ್ಲಿ ಆರಂಭದಲ್ಲಿ ಉತ್ತಮವಾಗಿ ಕಾಣಿಸಿಕೊಂಡರು ಮತ್ತು ಅವರು ಉತ್ತಮ ಪ್ರದರ್ಶನ ನೀಡುವಂತೆ ತೋರುತ್ತಿದ್ದರು. ಆದರೆ ಅವರು 25 ಎಸೆತಗಳಲ್ಲಿ 16 ರನ್ ಗಳಿಸಿ ಡೇವಿಡ್ ವಿಲ್ಲಿ ಅವರ ದೂರ ಹೋಗುತ್ತಿರುವ ಎಸೆತದಲ್ಲಿ ಫ್ಲರ್ಟ್ ಮಾಡಲು ಪ್ರಯತ್ನಿಸಿದರು. ಅವರು ಅದನ್ನು ಎಡ್ಜ್ ಮಾಡಿದರು ಮತ್ತು ವಿಕೆಟ್ ಕೀಪರ್ ಜೋಸ್ ಬಟ್ಲರ್ ಸುಲಭವಾಗಿ ಕ್ಯಾಚ್ ಪಡೆದು ವಿರಾಟ್ ಕೊಹ್ಲಿಗೆ ಪೆವಿಲಿಯನ್ ದಾರಿ ತೋರಿಸಿದರು.

ವಿರಾಟ್ ಕೊಹ್ಲಿ 261 ಏಕದಿನ ಪಂದ್ಯಗಳಿಂದ 12,327 ರನ್
ವಿರಾಟ್ ಕೊಹ್ಲಿ 2022ರಲ್ಲಿ 7 ಏಕದಿನ ಪಂದ್ಯಗಳಿಂದ ಕೇವಲ 22.57ರ ಸರಾಸರಿಯಲ್ಲಿ 158 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ ಮತ್ತು ಅವರ ಹೆಸರಿನಲ್ಲಿ ಕೇವಲ ಎರಡು ಅರ್ಧ ಶತಕಗಳು ಮಾತ್ರ ದಾಖಲಾಗಿವೆ. ಒಟ್ಟಾರೆ ವಿರಾಟ್ ಕೊಹ್ಲಿ 261 ಏಕದಿನ ಪಂದ್ಯಗಳಿಂದ 57.87ರ ಸರಾಸರಿಯಲ್ಲಿ 43 ಶತಕ ಮತ್ತು 64 ಅರ್ಧಶತಕಗಳೊಂದಿಗೆ 12,327 ರನ್ ಗಳಿಸಿದ್ದಾರೆ.

ರೀಸ್ ಟೋಪ್ಲೆ ಅವರು 24 ರನ್‌ಗಳಿಗೆ 6 ವಿಕೆಟ್
ಗುರುವಾರ ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಸಾಧಾರಣ ಗುರಿಯನ್ನು ರಕ್ಷಿಸುವ ಸಂದರ್ಭದಲ್ಲಿ ರೀಸ್ ಟೋಪ್ಲೆ ಅವರ 24 ರನ್‌ಗಳಿಗೆ 6 ವಿಕೆಟ್‌ಗಳನ್ನು ಪಡೆದು ಈ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಭಾರತೀಯ ಅಗ್ರ ಕ್ರಮಾಂಕವನ್ನು ಕುಸಿಯುವಂತೆ ಮಾಡಿ ಕೊನೆಗೆ 100 ರನ್‌ಗಳ ಗೆಲುವನ್ನು ಇಂಗ್ಲೆಂಡ್‌ಗೆ ತಂದಿತ್ತರು.
ಮೂರು ಪಂದ್ಯಗಳ ಸರಣಿಯಲ್ಲಿ ಸಮಬಲವನ್ನು ಸ್ಥಾಪಿಸುವುದರೊಂದಿಗೆ, ಭಾನುವಾರದಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುವ ನಿರ್ಣಾಯಕ ಪಂದ್ಯ ಕುತೂಹಲಕ್ಕೆ ಕಾರಣವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications