For Quick Alerts
ALLOW NOTIFICATIONS  
For Daily Alerts
 

IND vs ENG: ಸಚಿನ್ ತೆಂಡೂಲ್ಕರ್ ವಿಶಿಷ್ಠ ದಾಖಲೆಯ ಮೇಲೆ ಜೋ ರೂಟ್ ಕಣ್ಣು

ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಮೂರು ಟಿ20 ಪಂದ್ಯಗಳ ತವರಿನಲ್ಲಿ ಸರಣಿ ಆಡುತ್ತಿದೆ. ಇದಾದ ನಂತರ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ತವರಿನಲ್ಲಿ ಸರಣಿ ಆಡಲಿದೆ. ಈ ಟೆಸ್ಟ್‌ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಹಲವು ಆಟಗಾರರು ತಮ್ಮ ದಾಖಲೆಗಳನ್ನು ಸುಧಾರಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಇದಕ್ಕೆ ಇಂಗ್ಲೆಂಡ್ ತಂಡವೂ ಹೊರತಾಗಿಲ್ಲ.

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ, ಜೋ ರೂಟ್ ಭಾರತದ ಮಾಜಿ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ವಿಶೇಷ ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ. ತೆಂಡೂಲ್ಕರ್ ವಿಶೇಷ ದಾಖಲೆಯನ್ನು ಮುರಿಯಲು ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಗೆ ಕೇವಲ 10 ರನ್ ಗಳ ಅಗತ್ಯವಿದೆ.

IND VS ENG: Sachin Tendulkars unique record will be the target of Joe Root

ಭಾರತ ಮತ್ತು ಇಂಗ್ಲೆಂಡ್ ನಡುವೆ ಇದುವರೆಗೆ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಭಾರತ-ಇಂಗ್ಲೆಂಡ್ ಟೆಸ್ಟ್‌ನ 53 ಇನ್ನಿಂಗ್ಸ್‌ಗಳಲ್ಲಿ ಸಚಿನ್ 2535 ರನ್ ಗಳಿಸಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್‌ನ 45 ಇನ್ನಿಂಗ್ಸ್‌ಗಳಲ್ಲಿ 2526 ರನ್ ಗಳಿಸಿರುವ ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಲು ರೂಟ್ ಗೆ 9 ರನ್ ಹಾಗೂ ದಾಖಲೆ ಮುರಿಯಲು 10 ರನ್ ಗಳ ಅಗತ್ಯವಿದೆ. ರೂಟ್ ಸರಣಿಯ ಯಾವ ಪಂದ್ಯದಲ್ಲಿ ಅನುಭವಿ ತೆಂಡೂಲ್ಕರ್ ದಾಖಲೆಯನ್ನು ಮುರಿಯಬಹುದು ಎಂಬುದು ಈಗ ಕುತೂಹಲ ಮೂಡಿಸಿದೆ.

ಭಾರತದ ಮಾಜಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ 67 ಇನ್ನಿಂಗ್ಸ್‌ಗಳಲ್ಲಿ 2483 ರನ್ ಗಳಿಸಿರುವ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಅಲೆಸ್ಟರ್ ಕುಕ್ 54 ಇನ್ನಿಂಗ್ಸ್‌ಗಳಲ್ಲಿ 2431 ರನ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ ಮತ್ತು ವಿರಾಟ್ ಕೊಹ್ಲಿ 50 ಇನ್ನಿಂಗ್ಸ್‌ಗಳಲ್ಲಿ 1991 ರನ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

IND VS ENG: Sachin Tendulkars unique record will be the target of Joe Root

ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿಯು ಜನವರಿ 25 ರಿಂದ ಪ್ರಾರಂಭವಾಗಲಿದೆ. ಸರಣಿಯ ಮೊದಲ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಆದರೆ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಇಡೀ ಸರಣಿಗೆ ತಂಡವನ್ನು ಘೋಷಿಸಿದೆ. ಮಾರ್ಚ್‌ನಲ್ಲಿ ಸರಣಿ ಮುಕ್ತಾಯವಾಗಲಿದೆ.

ಜೋ ರೂಟ್‌ ಭಾರತದ ವಿರುದ್ಧ ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದಾರೆ. ಇವರು ಸ್ಪಿನ್ ಬೌಲರ್‌ಗಳನ್ನು ಉತ್ತಮವಾಗಿ ಆಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಆಡಿದ 10 ಟೆಸ್ಟ್‌ ಪಂದ್ಯಗಳ 20 ಇನ್ನಿಂಗ್ಸ್‌ಗಳಲ್ಲಿ ರೂಟ್‌ 50.10ರ ಸರಾಸರಿಯಲ್ಲಿ 952 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 5 ಅರ್ಧಶತಕಗಳು ಸೇರಿವೆ. ಒಟ್ಟಾರೆ ಭಾರತದ ವಿರುದ್ಧ ಇಂಗ್ಲೆಂಡ್‌ ತಂಡದ ಮಾಜಿ ನಾಯಕನ ದಾಖಲೆ ಅಮೋಘವಾಗಿವೆ.

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರು

ಸಚಿನ್ ತೆಂಡೂಲ್ಕರ್ - 2535 ರನ್ - 53 ಇನ್ನಿಂಗ್ಸ್
ಜೋ ರೂಟ್ - 2526 ರನ್ - 45 ಇನ್ನಿಂಗ್ಸ್
ಸುನಿಲ್ ಗವಾಸ್ಕರ್ - 2483 ರನ್ - 67 ಇನ್ನಿಂಗ್ಸ್
ಅಲೆಸ್ಟರ್ ಕುಕ್ - 2431 ರನ್ - 54 ಇನ್ನಿಂಗ್ಸ್
ವಿರಾಟ್ ಕೊಹ್ಲಿ - 1991 ರನ್ - 50 ಇನ್ನಿಂಗ್ಸ್.
ಜನವರಿ 25 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ

Story first published: Monday, January 15, 2024, 23:15 [IST]
Other articles published on Jan 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+