20 ವರ್ಷಗಳ ಹಿಂದೆ ಆಂಗ್ಲರ ವಿರುದ್ಧ ವಿರೋಚಿತವಾಗಿ ನ್ಯಾಟ್‌ವೆಸ್ಟ್ ಟ್ರೋಫಿ ಗೆದ್ದಿದ್ದ ಗಂಗೂಲಿ ಪಡೆ

ಈಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಾಯಕತ್ವದ ಭಾರತ ಕ್ರಿಕೆಟ್ ತಂಡವು 20 ವರ್ಷಗಳ ಹಿಂದೆ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಜಯವನ್ನು ದಾಖಲಿಸಿದ್ದನ್ನು ಸ್ಮರಿಸಿಕೊಳ್ಳಬಹುದು. ಜುಲೈ 13, 2002ರ ನ್ಯಾಟ್‌ವೆಸ್ಟ್ ಟ್ರೋಫಿ ಫೈನಲ್‌ನಲ್ಲಿ ಮೆನ್ ಇನ್ ಬ್ಲೂ ಇಂಗ್ಲೆಂಡ್ ತಂಡದೊಂದಿಗೆ ಸೆಣಸಾಡಿ ವಿರೋಚಿತ ಗೆಲುವು ಸಾಧಿಸಿತ್ತು.
ನಾಯಕ ಸೌರವ್ ಗಂಗೂಲಿ ಅವರು ತಮ್ಮ ಜರ್ಸಿಯನ್ನು ತೆಗೆದು ಅದನ್ನು ಗಾಳಿಯಲ್ಲಿ ಬೀಸುವ ಮೂಲಕ ಟೂರ್ನಿಯನ್ನು ಹೈಲೈಟ್ ಮಾಡಿದರು. ಅಂದು ಲಂಡನ್‌ನ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಜಯ ದಾಖಲಿಸಿತು.

ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ವಿಜಯ
ಭಾರತ, ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ತ್ರಿಕೋನ ಸರಣಿಯ ಅಂತಿಮ ಪಂದ್ಯವು ತೀವ್ರ ಹಣಾಹಣಿಗೆ ಕಾರಣವಾಗಿತ್ತು. ಆದಾಗ್ಯೂ, ಮೆನ್ ಇನ್ ಬ್ಲೂ ತಂಡದ ಅಸಾಧಾರಣ ಪ್ರದರ್ಶನವು ಇಂಗ್ಲೆಂಡ್ ವಿರುದ್ಧದ ಪ್ರಸಿದ್ಧ ವಿಜಯವನ್ನು ನೀಡಿತು ಮತ್ತು ಭಾರತದ ಹೆಸರನ್ನು ಕ್ರಿಕೆಟ್ ಇತಿಹಾಸ ಪುಸ್ತಕಗಳಲ್ಲಿ ಶಾಶ್ವತವಾಗಿ ಬರೆಯಿತು.
ಈ ನ್ಯಾಟ್‌ವೆಸ್ಟ್ ಟೂರ್ನಿಯಲ್ಲಿ ಭಾರತ ತನ್ನ ಐದು ಲೀಗ್ ಪಂದ್ಯಗಳಲ್ಲಿ ನಾಲ್ಕು ಗೆಲುವಿನೊಂದಿಗೆ ಫೈನಲ್‌ಗೆ ಮುನ್ನಡೆದಿತ್ತು. ಆದರೆ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಫೈನಲ್‌ನಲ್ಲಿ ದುರ್ಬಲ ತಂಡ ಎಂದೇ ಪರಿಗಣಿಸಲಾಗಿತ್ತು.
ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್ 121 ರನ್‌ಗಳ ಜೊತೆಯಾಟ
ಆರಂಭಿಕ ಮಾರ್ಕಸ್ ಟ್ರೆಸ್ಕೊಥಿಕ್ ಮತ್ತು ನಾಯಕ ನಾಸಿರ್ ಹುಸೇನ್ ಆತಿಥೇಯರ ಪರವಾಗಿ ಶತಕಗಳನ್ನು ಗಳಿಸಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ತಂಡ, ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ ಅವರು ಮೊದಲ 15 ಓವರ್‌ಗಳಲ್ಲಿ 106 ರನ್‌ಗಳನ್ನು ಬಾರಿಸುವ ಮೂಲಕ ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಉತ್ತಮವಾಗಿ ಎದುರಿಸಿತ್ತು.
ಒಟ್ಟು 326 ರನ್‌ಗಳನ್ನು ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ 146 ರನ್‌ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತ್ತು. ಯುವ ಬ್ಯಾಟ್ಸ್‌ಮನ್‌ಗಳಾದ ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ಭಾರತವನ್ನು ನ್ಯಾಟ್‌ವೆಸ್ಟ್ ಟ್ರೋಫಿಗೆ ಎತ್ತಿ ಹಿಡಿಯಲು 121 ರನ್‌ಗಳ ಜೊತೆಯಾಟವನ್ನು ಆಡಿದರು.

ಎರಡು ಬೌಂಡರಿ ಬಾರಿಸಿ ಗೆಲ್ಲಿಸಿದ ಜಹೀರ್ ಖಾನ್
ಕೆಳ ಕ್ರಮಾಂಕದಲ್ಲಿ ಜಹೀರ್ ಖಾನ್ ಎರಡು ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ಇಂಗ್ಲೆಂಡ್‌ಗೆ ಸೋಲಿನ ರುಚಿ ತೋರಿಸಿದರು ಮತ್ತು ಇಂಗ್ಲೆಂಡ್ ವಿರುದ್ಧ ಭಾರತದ ಐತಿಹಾಸಿಕ ಪ್ರಶಸ್ತಿ ಜಯವನ್ನು ತನ್ನ ಹೆಸರಿಗೆ ಬರೆದುಕೊಂಡಿತು. ಫೈನಲ್‌ನಲ್ಲಿ ವೀರೋಚಿತ ಇನ್ನಿಂಗ್ಸ್‌ಗಾಗಿ ಮೊಹಮ್ಮದ್ ಕೈಫ್ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications