ಲಾರ್ಡ್ಸ್‌ನಲ್ಲಿ ಶತಕ ಬಾರಿಸುವುದೇ ದೊಡ್ಡ ಸಾಧನೆಯಲ್ಲ; ಸುನಿಲ್ ಗವಾಸ್ಕರ್ ಮಾತಿನ ಮರ್ಮವೇನು?

ಇತ್ತೀಚೆಗಷ್ಟೇ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು 151 ರನ್‌ಗಳಿಂದ ಸೋಲಿಸುವುದರ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಲಾರ್ಡ್ಸ್ ಅಂಗಳದಲ್ಲಿ ಪಂದ್ಯ ಆರಂಭವಾದಾಗಿನಿಂದ ಕೊನೆಯ ದಿನದವರೆಗೂ ಅತ್ಯುತ್ತಮ ಪ್ರದರ್ಶನವನ್ನು ನೀಡಿದ ಇಂಗ್ಲೆಂಡ್ ತಂಡ ಈ ಪಂದ್ಯವನ್ನು ಖಡಾಖಂಡಿತವಾಗಿ ಗೆಲ್ಲಲಿದೆ ಎಂದೇ ಎಲ್ಲರೂ ಊಹಿಸುತ್ತಿದ್ದರು. ಆದರೆ ಕೊನೆಯ ದಿನದಾಟದಲ್ಲಿ ಭಾರತೀಯ ಆಟಗಾರರ ಅತ್ಯದ್ಭುತ ಪ್ರದರ್ಶನದ ಮುಂದೆ ಶರಣಾದ ಇಂಗ್ಲೆಂಡ್ ಆಟಗಾರರು ಲಾರ್ಡ್ಸ್ ಅಂಗಳದಲ್ಲಿ ಹೀನಾಯ ಸೋಲನುಭವಿಸಿದರು. ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಬಾರಿಸಿದ ಭಾರತದ ಕೆಎಲ್ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮತ್ತು ಕೆಎಲ್ ರಾಹುಲ್ ಜೊತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಕೂಡ ಮೊದಲನೇ ಇನ್ನಿಂಗ್ಸ್‌ನಲ್ಲಿ 83 ರನ್ ಬಾರಿಸುವ ಮೂಲಕ ಉತ್ತಮ ಪ್ರದರ್ಶನವನ್ನು ನೀಡಿದರು.
ಹೀಗೆ ಓವರ್‌ಸೀಸ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಾರೆ ಎಂದು ಆಗಾಗ ಟ್ರೋಲ್ ಆಗುತ್ತಿದ್ದ ರೋಹಿತ್ ಶರ್ಮಾ ಈ ಬಾರಿಯೂ ಸಹ ಶತಕ ಬಾರಿಸುವಲ್ಲಿ ಎಡವಿ ಟೀಕೆಗಳಿಗೆ ತುತ್ತಾದರು. ಶತಕ ವಂಚಿತರಾದ ರೋಹಿತ್ ಶರ್ಮಾ ಪರ ಬ್ಯಾಟ್ ಬೀಸಿರುವ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಟೀಕಾಕಾರರಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಹೀಗೆ ರೋಹಿತ್ ಶರ್ಮಾ ಪರ ಮಾತನಾಡಿರುವ ಸುನಿಲ್ ಗವಾಸ್ಕರ್ ಪರೋಕ್ಷವಾಗಿ ಕೆಎಲ್ ರಾಹುಲ್ ಅವರ ಕಾಲೆಳೆಯುವಂತಹ ಹೇಳಿಕೆಗಳನ್ನು ನೀಡಿದ್ದಾರೆ.
ಭಾರತ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಆಗಾಗ ಟೀಮ್ ಇಂಡಿಯಾ ಆಟಗಾರರ ಕುರಿತು ಮತ್ತು ಅವರ ಪ್ರದರ್ಶನಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಕ್ರಿಕೆಟ್ ಇತಿಹಾಸದಲ್ಲಿ ಹಲವಾರು ದಾಖಲೆ ಮತ್ತು ಮೈಲಿಗಲ್ಲುಗಳನ್ನು ಸೃಷ್ಟಿಸಿರುವ ಸುನಿಲ್ ಗವಾಸ್ಕರ್ ಹೆಚ್ಚಾಗಿ ಯಾರನ್ನೂ ಟೀಕಿಸಲು ಹೋಗುವುದಿಲ್ಲ. ಆದರೆ ಇದೀಗ ಸುನೀಲ್ ಗವಾಸ್ಕರ್ ಭಾರತ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯವೊಂದು ಕೆಎಲ್ ರಾಹುಲ್‌ಗೆ ಪರೋಕ್ಷವಾಗಿ ಕುಟುಕಿದಂತೆ ಕಾಣುತ್ತಿದೆ.

ಲಾರ್ಡ್ಸ್‌ನಲ್ಲಿನ ರೋಹಿತ್ ಶರ್ಮಾ ಆಟವನ್ನು ಮೆಚ್ಚಿಕೊಂಡ ಸುನಿಲ್ ಗವಾಸ್ಕರ್
ಭಾರತ ಮತ್ತು ಇಂಗ್ಲೆಂಡ್ ನಡುವೆ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 83 ರನ್ ಗಳಿಸಿ ಲಾರ್ಡ್ಸ್ ಅಂಗಳದಲ್ಲಿ ಶತಕ ಬಾರಿಸುವ ಅವಕಾಶವನ್ನು 17 ರನ್‌ಗಳ ಅಂತರದಲ್ಲಿ ಕಳೆದುಕೊಂಡರು. ಹೀಗೆ ಓವರ್‌ಸೀಸ್ ಶತಕ ಬಾರಿಸುವ ಅವಕಾಶವನ್ನು ಸ್ವಲ್ಪದರಲ್ಲೇ ಕೈ ತಪ್ಪಿಸಿಕೊಂಡ ರೋಹಿತ್ ಶರ್ಮಾ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಆದರೆ ಸುನಿಲ್ ಗವಾಸ್ಕರ್ ಲಾರ್ಡ್ಸ್ ಅಂಗಣದಲ್ಲಿ ರೋಹಿತ್ ಶರ್ಮಾ ಆಟ ಅದ್ಭುತವಾಗಿತ್ತು ಎಂದು ಶರ್ಮಾ ಆಟವನ್ನು ಮೆಚ್ಚಿಕೊಂಡಿದ್ದಾರೆ.

'ಲಾರ್ಡ್ಸ್ ಅಂಗಳದಲ್ಲಿ ಶತಕ ಸಾಧಿಸುವುದು ದೊಡ್ಡ ಸಾಧನೆಯಲ್ಲ!'
ರೋಹಿತ್ ಶರ್ಮಾ ಲಾರ್ಡ್ಸ್ ಅಂಗಳದಲ್ಲಿ ಶತಕ ಬಾರಿಸದೇ ವಿಫಲರಾದರು ಎಂದು ಟೀಕೆ ಮಾಡುವವರ ವಿರುದ್ಧ ಕಿಡಿಕಾರಿರುವ ಸುನಿಲ್ ಗವಾಸ್ಕರ್ ಲಾರ್ಡ್ಸ್ ಅಂಗಳದಲ್ಲಿ ಶತಕ ಬಾರಿಸುವುದು ದೊಡ್ಡ ಸಾಧನೆಯಲ್ಲ ಎಂದು ಪ್ರತಿಕ್ರಿಯಿಸುವ ಮೂಲಕ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಯಾಕೆಂದರೆ ರೋಹಿತ್ ಶರ್ಮಾ ಶತಕ ಬಾರಿಸಲು ವಿಫಲವಾದ ಇನ್ನಿಂಗ್ಸ್‌ನಲ್ಲಿಯೇ ಭಾರತದ ಮತ್ತೋರ್ವ ಪ್ರತಿಭಾನ್ವಿತ ಆಟಗಾರ ಕೆಎಲ್ ರಾಹುಲ್ ಶತಕ ಬಾರಿಸಿ ಮಿಂಚಿದ್ದರು. ಹೀಗಾಗಿ ರೋಹಿತ್ ಶರ್ಮಾರನ್ನು ವಹಿಸಿಕೊಂಡು ಸುನಿಲ್ ಗವಾಸ್ಕರ್ ನೀಡಿರುವ ಶತಕದ ಹೇಳಿಕೆ ಕೆಎಲ್ ರಾಹುಲ್‌ಗೆ ಪರೋಕ್ಷವಾಗಿ ಹೇಳಿದ್ದಾ ಎಂಬ ಅನುಮಾನ ಇಲ್ಲಿ ಮೂಡದೇ ಇರದು..

ರೋಹಿತ್ ಶರ್ಮಾನಿಂದ ನಾಯಕನಿಗೆ ಮತ್ತೇನು ಬೇಕು?
ರೋಹಿತ್ ಶರ್ಮಾ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 83 ರನ್ ಬಾರಿಸಿದರು. ಹೀಗೆ ಬ್ಯಾಟ್ಸ್‌ಮನ್ ಒಬ್ಬ 80-90 ರನ್ ಬಾರಿಸುತ್ತಾ ಹೋದರೆ ಸರಣಿಯೊಂದರಲ್ಲಿ ಆತನ ಒಟ್ಟು ರನ್ 400-500 ಆಗಲಿದೆ. ಓರ್ವ ಬ್ಯಾಟ್ಸ್‌ಮನ್‌ನಿಂದ ತಂಡದ ನಾಯಕನಿಗೆ ಇನ್ನೇನು ಬೇಕು ಎಂದು ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications