For Quick Alerts
ALLOW NOTIFICATIONS  
For Daily Alerts
 

IND vs ENG: ಮ್ಯಾಚ್ ವಿನ್ನರ್ ಮುಂದೆ ತಲೆಬಾಗಿದ ಕ್ಯಾಪ್ಟನ್

ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾ ಈ ಪಂದ್ಯವನ್ನು ಸೋಲುತ್ತದೆ ಎಂದು ಅನಿಸುತ್ತಿತ್ತು. ಆದರೆ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಏಕಾಂಗಿಯಾಗಿ ಆಡುವ ಮೂಲಕ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. ತಿಲಕ್ ವರ್ಮಾ ಕೊನೆ ಓವರ್‌ನಲ್ಲಿ ಬೌಂಡರಿ ಬಾರಿಸಿ ಭಾರತ ತಂಡಕ್ಕೆ ಜಯ ತಂದುಕೊಟ್ಟರು.

ಈ ಗೆಲುವಿನ ಹೀರೋ ತಿಲಕ್ ವರ್ಮಾ ಅವರ ಮುಂದೆ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ತಲೆಬಾಗಿದ್ದಾರೆ. ತಿಲಕ್ 55 ಎಸೆತಗಳಲ್ಲಿ 72 ರನ್‌ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಜೋಸ್ ಬಟ್ಲರ್ ಅವರ 45 ರನ್ ಮತ್ತು ಬ್ರೇಡನ್ ಕಾರ್ಸೆ ಅವರ 30 ರನ್‌ಗಳ ನೆರವಿನಿಂದ 165 ರನ್ ಗಳಿಸಿತು. ಇದಕ್ಕುತ್ತರವಾಗಿ ಕಣಕ್ಕಿಳಿದ ಆರಂಭಿಕ ಬ್ಯಾ ಟರ್‌ಗಳಾದ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಬೇಗನೇ ಔಟಾಗಿದ್ದರಿಂದ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು.

IND vs ENG Suryakumar Yadav is bowing before Tilak Verma

ತಿಲಕ್ ವರ್ಮಾ ತಂಡದ ಗೆಲುವಿನ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಸೂರ್ಯಕುಮಾರ್ ಯಾದವ್ ಜೊತೆ ಸಣ್ಣ ಜೊತೆಯಾಟ ನಡೆಸಿದರು. ಆದರೆ ನಂತರ ನಾಯಕನೂ ಔಟಾದರು. ಭಾರತ ತಂಡ 5 ವಿಕೆಟ್‌ಗೆ 78 ರನ್‌ಗಳಿಸಿ ಸೋಲಿನ ಭೀತಿಯಲ್ಲಿತ್ತು. ಆದರೆ ತಿಲಕ್ ವರ್ಮಾ ಮತ್ತು ವಾಷಿಂಗ್ಟನ್ ಸುಂದರ್ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ತಿಲಕ್ ರನ್ ಗಳಿಸುತ್ತ ಕೊನೆಯ ಓವರ್‌ಗಳಲ್ಲಿ ಅರ್ಷದೀಪ್ ಸಿಂಗ್ ಮತ್ತು ರವಿ ಬಿಷ್ಣೋಯ್ ಅವರನ್ನು ನಂಬಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಕೊನೆಯ ಓವರ್‌ಗಳಲ್ಲಿ ತಿಲಕ್ ಅವರು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಭಾರತವು 4 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು. ಪಂದ್ಯದ ನಂತರ ಸೂರ್ಯಕುಮಾರ್ ಯಾದವ್ ಮುಂದೆ ತಲೆ ಬಾಗಿ ತಿಲಕ್ ನಮಸ್ಕಾರ ಮಾಡಿದರು. ತಕ್ಷಣ ನಾಯಕ ಕೂಡ ಅದೇ ರೀತಿ ಮಾಡಿದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲದೆ, ಸಖತ್ ವೈರಲ್ ಕೂಡ ಆಗಿದೆ. ಗೆಲುವಿನ ಸಂಭ್ರಮಾಚರಣೆಯಲ್ಲಿ ಸೂರ್ಯಕುಮಾರ್ ಯಾದವ್ ಕೂಡ ಪಾಲ್ಗೊಂಡು ಯುವ ಬ್ಯಾಟರ್ ಅನ್ನು ಹೊಗಳಿದರು.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ ಭಾರತ ಪರ ತಿಲಕ್ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಟಿ20 ಯಲ್ಲಿ ಕಳೆದ 4 ಇನ್ನಿಂಗ್ಸ್‌ಗಳಲ್ಲಿ 318 ರನ್ ಗಳಿಸಿದ್ದಾರೆ. ಇದರಲ್ಲಿ ದಕ್ಷಿಣ ಆಫ್ರಿಕಾದಲ್ಲಿ 2 ಶತಕಗಳು ಮತ್ತು ಶನಿವಾರ ಗಳಿಸಿದ ಅರ್ಧ ಶತಕವೂ ಸೇರಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯ ಜನವರಿ 28 ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ.

Story first published: Sunday, January 26, 2025, 11:24 [IST]
Other articles published on Jan 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+