IND vs ENG: ಭಾರತ ಇದೀಗ ವಿಶ್ವ ಕ್ರಿಕೆಟ್‌ನ ನೂತನ ಚೋಕರ್ಸ್; 2014ರಿಂದ ಕಳಪೆ ಸಾಧನೆ ಪಟ್ಟಿ

ಆಸ್ಟ್ರೇಲಿಯಾದ ಅಡಿಲೇಡ್ ಓವಲ್‌ನಲ್ಲಿ ನಡೆದ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ತೀರಾ ಹೀನಾಯವಾಗಿ ಸೋತ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ವಿಶ್ವ ಕ್ರಿಕೆಟ್‌ನೆದುರು ತೀವ್ರ ಮುಜುಗರ ಅನುಭವಿಸುವಂತಾಗಿದೆ.
ಅಲೆಕ್ಸ್ ಹೇಲ್ಸ್ ಅವರು 47 ಬಾಲ್‌ಗಳಲ್ಲಿ ಅಜೇಯ 86 ರನ್ ಮತ್ತು ನಾಯಕ ಜೋಸ್ ಬಟ್ಲರ್ ಅವರು 49 ಎಸೆತಗಳಲ್ಲಿ ಅಜೇಯ 80 ರನ್ ಗಳಿಸಿದರ ಫಲವಾಗಿ ಭಾರತ ವಿರುದ್ಧ ಇಂಗ್ಲೆಂಡ್ ತಂಡ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಭಾರತ ನೀಡಿದ್ದ 169 ರನ್‌ಗಳ ಗುರಿಯನ್ನು ಕೇವಲ 16 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿ ಜಯ ಗಳಿಸಿತು. ಇದರಿಂದ ಭಾರತದ 11 ವರ್ಷಗಳ ವಿಶ್ವಕಪ್ ಮತ್ತು 9 ವರ್ಷಗಳ ಐಸಿಸಿ ಟ್ರೋಫಿ ಕನಸನ್ನು ನುಚ್ಚುನೂರು ಮಾಡಿತು. ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇದರಿಂದ ಘಾಸಿಗೊಳ್ಳುವಂತಾಗಿದೆ.

ಭಾರತ 2013ರಿಂದ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ
ಈ ಮೂಲಕ ಭಾರತ ಕ್ರಿಕೆಟ್ ತಂಡ ಕಳೆದ ಒಂದು ದಶಕದಿಂದ ಐಸಿಸಿ ಟೂರ್ನಿಗಳ ನಾಕೌಟ್ ಪಂದ್ಯಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ಮುಂದುವರೆಸಿದ್ದು, 2013ರಿಂದ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ.
ಭಾರತ ತಂಡ 2013ರಿಂದ 2022ರವರೆಗೆ ನಾಲ್ಕು ಸೆಮಿಫೈನಲ್ ಮತ್ತು ಎರಡು ಫೈನಲ್ ಪಂದ್ಯಗಳನ್ನು ಆಡಿದ್ದು, ಯಾವುದರಲ್ಲೂ ಗೆಲುವಿನ ಫಲಿತಾಂಶ ಕಾಣದೇ ನಿರಾಸೆ ಅನುಭವಿಸಿದೆ. ಹೀಗಾಗಿ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನ ನೂತನ ದಕ್ಷಿಣ ಆಫ್ರಿಕಾ ಎಂಬ ಕುಖ್ಯಾತಿಗೆ ಒಳಗಾಗಿದೆ. ಏಕೆಂದರೆ ವಿಶ್ವ ಕ್ರಿಕೆಟ್‌ನ 'ಚೋಕರ್ಸ್' ಎಂಬ ಅಪಖ್ಯಾತಿ ಹೊಂದಿರುವ ದಕ್ಷಿಣ ಆಫ್ರಿಕಾ 2013ರಿಂದ ಇಲ್ಲಿಯವರೆಗೆ ಒಮ್ಮೆ ಮಾತ್ರ ಸೆಮಿಫೈನಲ್ ತಲುಪಿದೆ.

2013ರಿಂದ ಐಸಿಸಿ ಟೂರ್ನಿಗಳಲ್ಲಿ ನಾಕೌಟ್ ಹಂತಗಳಲ್ಲಿ ಭಾರತದ ಕಳಪೆ ಸಾಧನೆ
ಐಸಿಸಿ ಟಿ20 ವಿಶ್ವಕಪ್ 2014 ಫೈನಲ್- ಶ್ರೀಲಂಕಾ ವಿರುದ್ಧ ಸೋಲು
ಐಸಿಸಿ ಏಕದಿನ ವಿಶ್ವಕಪ್ 2015 ಸೆಮಿಫೈನಲ್- ಆಸ್ಟ್ರೇಲಿಯಾ ವಿರುದ್ಧ ಸೋಲು
ಐಸಿಸಿ ಟಿ20 ವಿಶ್ವಕಪ್ 2016 ಸೆಮಿಫೈನಲ್- ವೆಸ್ಟ್ ಇಂಡೀಸ್ ವಿರುದ್ಧ ಸೋಲು
ಐಸಿಸಿ ಏಕದಿನ ವಿಶ್ವಕಪ್ 2019 ಸೆಮಿಫೈನಲ್- ನ್ಯೂಜಿಲೆಂಡ್ ವಿರುದ್ಧ ಸೋಲು
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ 2021 ಫೈನಲ್- ನ್ಯೂಜಿಲೆಂಡ್ ವಿರುದ್ಧ ಸೋಲು
ಐಸಿಸಿ ಟಿ20 ವಿಶ್ವಕಪ್ 2022 ಸೆಮಿಫೈನಲ್- ಇಂಗ್ಲೆಂಡ್ ವಿರುದ್ಧ ಸೋಲು

ಐಸಿಸಿ ಟೂರ್ನಿಗಳ ನಾಕೌಟ್ ಹಂತಗಳಲ್ಲಿ ದಕ್ಷಿಣ ಆಫ್ರಿಕಾದ ಕಳಪೆ ಸಾಧನೆ
ಐಸಿಸಿ ಏಕದಿನ ವಿಶ್ವಕಪ್ 1992 ಸೆಮಿಫೈನಲ್- ಇಂಗ್ಲೆಂಡ್ ವಿರುದ್ಧ ಸೋಲು
ಐಸಿಸಿ ಏಕದಿನ ವಿಶ್ವಕಪ್ 1996 ಕ್ವಾರ್ಟರ್-ಫೈನಲ್- ವೆಸ್ಟ್ ಇಂಡೀಸ್ ವಿರುದ್ಧ ಸೋಲು
ಐಸಿಸಿ ಏಕದಿನ ವಿಶ್ವಕಪ್ 1999 ಸೆಮಿಫೈನಲ್- ಆಸ್ಟ್ರೇಲಿಯ ವಿರುದ್ಧ ಸೋಲು
ಐಸಿಸಿ ಏಕದಿನ ವಿಶ್ವಕಪ್ 2003 ಸೆಮಿಫೈನಲ್- ಶ್ರೀಲಂಕಾ ವಿರುದ್ಧ ಸೋಲು
ಐಸಿಸಿ ಏಕದಿನ ವಿಶ್ವಕಪ್ 2007 ಸೆಮಿಫೈನಲ್- ಆಸ್ಟ್ರೇಲಿಯ ವಿರುದ್ಧ ಸೋಲು
ಐಸಿಸಿ ಟಿ20 ವಿಶ್ವಕಪ್ 2009 ಸೆಮಿಫೈನಲ್- ಪಾಕಿಸ್ತಾನ ವಿರುದ್ಧ ಸೋಲು
ಐಸಿಸಿ ಟಿ20 ವಿಶ್ವಕಪ್ 2011 ಸೆಮಿಫೈನಲ್- ನ್ಯೂಜಿಲೆಂಡ್ ವಿರುದ್ಧ ಸೋಲು
ಐಸಿಸಿ ಏಕದಿನ ವಿಶ್ವಕಪ್ 2015 ಸೆಮಿಫೈನಲ್- ನ್ಯೂಜಿಲೆಂಡ್ ವಿರುದ್ಧ ಸೋಲು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications